ಉ.ಕ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕತೆ-ವ್ಯಥೆ
The story and sorrow of clean drinking water units in U.K. district
ಕಾರವಾರ 22: ಗ್ರಾಮೀಣಾಭಿವೃದ್ಧಿ ಇಲಾಖೆ ಉ.ಕ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು 2017-18 ರಲ್ಲಿ ಸ್ಥಾಪಿಸಿತು. ಎಚ್ .ಕೆ.ಪಾಟೀಲರು ಆಗ ಗ್ರಾಮೀಣಾಭಿವೃದ್ಧಿ ಮಂತ್ರಿ. ಏಜೆನ್ಸಿಯೊಂದು ಇದನ್ನು ಅನುಷ್ಟಾನದ ಹೊಣೆ ಹೊತ್ತಿತ್ತು. ಮೂರು ವರ್ಷ ನಿರ್ವಹಣೆ ಮಾಡಿ, ನಂತರ ಪಂಚಾಯತ್ ಗಳಿಗೆ ಹಸ್ತಾಂತರ ಮಾಡಬೇಕೆಂದು ಶರತ್ತು ಇತ್ತು. ಏಜೆನ್ಸಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 241 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತು. ಅದನ್ನು ಗ್ರಾಮಮಟ್ಟದಲ್ಲಿ ಪ್ರಾರಂಭಿಸಿ ಶುದ್ದ ನೀರನ್ನು 20 ಲೀಟರ್ ಗೆ 2 ರೂ.ದಂತೆ ನೀಡಿತು.
ಈ ವ್ಯವಸ್ಥೆ ಬಹಳ ದಿನ ನಡೆಯಲಿಲ್ಲ. ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ, ವಿದ್ಯುತ್ ಬಿಲ್ ತುಂಬದ ಸಮಸ್ಯೆ ಈ ನೀರಿನ ಘಟಕಗಳನ್ನು ಕಾಡಿತು. ಸದಸ್ಯರು ಮತ್ತು ಅಧ್ಯಕ್ಷರ ನಡುವಿನ ವೈಷ್ಯಮ್ಯ, ನಮ್ಮ ವಾರ್ಡನಲ್ಲಿ ಘಟಕ ಇಲ್ಲ ಎಂಬ ಈರ್ಷ್ಯೆಗಳು ಬರತೊಡಗಿದವು. ವಾರ್ಷಿಕ ನಿರ್ವಹಣೆಗೆ ಹಣದ ಕೊರತೆ ಕಾಡತೊಡಗಿತು. ಏಜೆನ್ಸಿಗೆ ಅಧಿಕಾರಿ ವರ್ಗ ಹಣ ಬಿಡುಗಡೆ ಮಾಡದ ಸಮಸ್ಯೆ ಸಹ ಕಾಡಿತು. ಎರಡು ಮೂರು ವರ್ಷಗಳು ಚೆನ್ನಾಗಿ ನಡೆದ ಶುದ್ದ ನೀರು ಘಟಕಗಳು ನಂತರ ಕೋವಿಡ್ ಪಾಳುಬಿದ್ದವು. ಇದಾದ ನಂತರ 2023 ರಲ್ಲಿ ಮರು ಜೀವ ನೀಡಿ ಕೆಲವು ಘಟಕಗಳನ್ನು ಉಳಿಸಿಕೊಳ್ಳಲಾಯಿತು.ಗ್ರಾಮಾಂತರ ಭಾಗದಲ್ಲಿ ಬಹುತೇಕ ಪಂಚಾಯತಗೆ ಒಂದು ಘಟಕದಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಾಕಲಾಗಿತ್ತು. ದೊಡ್ಡ ಜನಸಂಖ್ಯೆ ಇರುವ ಪಂಚಾಯತಿಗಳಿಗೆ ಎರಡು ಘಟಕ ನೀಡಲಾಗಿತ್ತು. ಇವುಗಳಲ್ಲಿ 165 ಕಾರ್ಯನಿರ್ವಹಿಸುತ್ತಿದ್ದು, 76 ಘಟಕಗಳು ವಿದ್ಯುತ್ ಪೂರೈಕೆ ಕೊರತೆ, ರೆಪೇರಿ ಕಾರಣ,ಸ್ಥಳಾಂತರ ಸಮಸ್ಯೆಯಿಂದ ಸ್ಥಗಿತವಾಗಿವೆ. ನಿರುಪಯುಕ್ತ ಸ್ಥಿತಿ ತಲುಪಿವೆ. 87 ಘಟಕಗಳನ್ನು ಪಂಚಾಯತಿ ವಹಿಸಿಕೊಂಡಿವೆ. ಇವು ಸೇರಿ ಜಿಲ್ಲೆಯ ಗ್ರಾಮಗಳಲ್ಲಿ 165 ಚಾಲ್ತಿಯಲ್ಲಿದ್ದು ಜನರಿಗೆ ನೀರು ಕೊಡುತ್ತಿವೆ. ಇವುಗಳಲ್ಲಿ ಅಂಕೋಲಾ ತಾಲೂಕಿನ 17 ಹಳ್ಳಿಗಳಲ್ಲಿ, ಭಟ್ಕಳ ತಾಲೂಕಿನ 16 ಹಳ್ಳಿಗಳಲ್ಲಿ, ಹಳಿಯಾಳ ತಾಲೂಕಿನ 88 ಹಳ್ಳಿಗಳಲ್ಲಿ, ಹೊನ್ನಾವರ ತಾಲೂಕಿನ 6 ಹಳ್ಳಿಗಳಲ್ಲಿ, ಜೊಯಿಡಾ16, ಕಾರವರ 8 , ಕುಮಟಾ ತಾಲೂಕಿನ 46 ಹಳ್ಳಿಗಳಲ್ಲಿ, ಮುಂಡಗೋಡ ತಾಲೂಕಿನ 24, ಹಳ್ಳಿಗಳಲ್ಲಿ, ಸಿದ್ದಾಪುರ ತಾಲೂಕಿನ 9 ಹಳ್ಳಿಗಳಲ್ಲಿ, ಶಿರಸಿ 14 ಗ್ರಾಮಗಳಲ್ಲಿ, ಯಲ್ಲಾಪುರ 7 ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿವೆ. 21 ಘಟಕ ಮೆಂಟೇನೆನ್ಸ ಇಲ್ಲದೆ, 6 ಘಟಕ ಸೊಸೈಟಿಗಳು ನಿರ್ವಹಿಸದ ಕಾರಣ ಬಂದ್ ಆಗಿವೆ. ನಗರಗಳ ಕತೆ-ವ್ಯಥೆ : ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಕಾರವಾರ ಸೇರಿ ,ಕರಾವಳಿ ತಾಲೂಕಿನ 5 ಪಟ್ಟಣಗಳಲ್ಲಿ, ಶಿರಸಿ, ಮುಂಡಗೋಡ, ಹಳಿಯಾಳ, ಶಿರಸಿ, ಯಲ್ಲಾಪುರ ಘಟ್ಟದ ಮೇಲಿನ ನಗರಗಳಲ್ಲಿ ಶುದ್ದ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ನಗರ ಪಟ್ಟಣ ಸೇರಿ 35 ಶುದ್ದ ನೀರಿನ ಘಟಕಗಳು ಇವೆ. ಇಲ್ಲಿ ಒಂದು ರೂಪಾಯಿಗೆ ಒಂದು ಲೀಟರ್ ನೀರು ಸಿಗುತ್ತಿದೆ.
ಕಾರವಾರದಲ್ಲಿ ಹತ್ತು ವಾರ್ಡಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಾಕಲಾಗಿದೆ.ಇವುಗಳಲ್ಲಿ ಮೂರು ಕಡೆ ತಾಂತ್ರಿಕ ದೋಷದಿಂದ ಬಂದ್ ಆಗಿವೆ. ಏಳು ಕಡೆ ಚಾಲ್ತಿಯಲ್ಲಿವೆ. ಉಳಿದಂತೆ ಶಿರಸಿ, ಮುಂಡಗೋಡ, ಹಳಿಯಾಳ ಪಟ್ಟಣ, ಶಿರಸಿ ನಗರ , ಯಲ್ಲಾಪುರ,ಅಂಕೋಲಾ ,ಕುಮಟಾ, ಹೊನ್ನಾವರ, ಭಟ್ಕಳ ಪಟ್ಟಣಗಳಲ್ಲಿ ತಲಾ ಮೂರರಂತೆ ಶುದ್ದ ನೀರು ಘಟಕಗಳು ಇವೆ. ಇವುಗಳ ಪೈಕಿ ಅಂಕೋಲಾ, ಭಟ್ಕಳ, ಕುಮಟಾದಲ್ಲಿ ಒಂದೊಂದು ಘಟಕಗಳು ತಾಂತ್ರಿಕ ಕಾರಣಕ್ಕೆ ಬಂದ್ ಆಗಿವೆ. ಬಹುತೇಕ ಕಡೆ ಎರಡು ಘಟಕಗಳು ಕಾರ್ಯನಿರ್ಹಸಿಹುತ್ತಿವೆ.
ಪಂಚಾಯತ್ ಗಳು ಶುದ್ದ ನೀರು ಘಟಕಗಳ ನಿರ್ವಹಣೆ ಮತ್ತು ವಿದ್ಯುತ್ ಬಿಲ್ ಕಟ್ಟಿ ನಿರ್ವಹಿಸಿದರೆ , ಜನರಿಗೆ ಶುದ್ದಕುಡಿಯುವ ನೀರು ಸಿಗುತ್ತದೆ. ಏಜೆನ್ಸಿ ನಿರ್ವಹಣಾ ಸಮಯ ಮುಗಿದಿದೆ. ಸರ್ಕಾರ ಏಜೆನ್ಸಿಗೆ ನಿರ್ವಹಣೆ ರೀನೀವಲ್ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ.
-ಹೆಸರು ಹೇಳಲು ಇಚ್ಚಿಸದ ಅಧಿಕಾರಿ
ಗ್ರಾಮೀಣ ಅಭಿವೃದ್ಧಿ ಇಲಾಖೆ. ಕಾರವಾರ
ಕೋಟ್...
ನಗರಾಭಿವೃದ್ಧಿ ಕೋಶದಿಂದ ಜಿಲ್ಲೆಯ ನಗರ ಪಟ್ಟಣ ಗಳಲ್ಲಿ 35 ಪ್ಲಾಂಟ್ ಇವೆ. ಐದಾರು ಕಡೆ ತಾಂತ್ರಿಕ ಸಮಸ್ಯೆ ಇದೆ. ಸರಿಪಡಿಸುವೆವು. ಉಳಿದಂತೆ ಎಲ್ಲಾ ಕಡೆ ಕಾರ್ಯನಿರ್ವಹಿಸುತ್ತಿವೆ.
-ಕಮ್ಮಾರ್ .ಕಾರ್ಯನಿರ್ವಾಹಕ ಎಂಜಿನಿಯರ್ .
ನಗರಾಭಿವೃದ್ಧಿ ಕೋಶ .ಕಾರವಾರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 