ಕ್ರಿಕೆಟ್ ತಂಡದ ಮನೋಭಾವ ಕ್ರೀಡಾಸ್ಫೂರ್ತಿ ಬೆಳೆಸುತ್ತದೆ: ಸುನೀಲಗೌಡ ಪಾಟೀಲ

ಕ್ರಿಕೆಟ್ ತಂಡದ ಮನೋಭಾವ ಕ್ರೀಡಾಸ್ಫೂರ್ತಿ ಬೆಳೆಸುತ್ತದೆ: ಸುನೀಲಗೌಡ ಪಾಟೀಲ Cricket team spirit develops sportsmanship: Sunil Gowda Patil

ವಿಜಯಪುರ 24 :  ಕ್ರಿಕೆಟ್ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸ್ಪೂರ್ತಿ ನೀಡುತ್ತದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.   ಮಂಗಳವಾರ ಮುಸ್ಸಂಜೆ ಬಬಲೇಶ್ವರ ಪಟ್ಟಣದದಲ್ಲಿ ದಿ. ಬಿ.. ಪಾಟೀಲ ಸ್ಮರಣಾರ್ಥ ಆಯೋಜಿಸಲಾಗಿರುವ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್‌-2 ಕ್ರಿಕೆಟ್ ಟೂರ್ನಾಮೆಂಟ್ ನ್ನು ಬ್ಯಾಟ್ ಮಾಡುವ ಮೂಲಕ ಉದ್ಗಾಟಿಸಿದ ಅವರು ಬಳಿಕ ಸಸಿಗೆ ನೀರುಣಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.    

ನಮ್ಮ ತಂದೆ ದಿ. ಬಿ. ಎಂ. ಪಾಟೀಲ ಅವರ ಹೆಸರಿನಲ್ಲಿ ಈ ಟೂರ್ನಾಮೆಂಟ್ ಆಯೋಜನೆ ಮಾಡಿರುವುದು ಸಂತಸದ ವಿಷಯವಾಗಿದೆ. ಬಿ. ಎಂ. ಪಾಟೀಲರು ಶಿಕ್ಷಣ ಪ್ರೇಮಿಯಾಗಿದ್ದರು.  ಯುವಕರು ಹೆಚ್ಚಿನ ಶಿಕ್ಷಣಕ್ಕಾಗಿ ಬೇರೆ ಊರೂಗಳಿಗೆ ಅಲೆದಾಡುವುದು ಮತ್ತು ಬಡವರು ಶಿಕ್ಷಣವನ್ನು ಮೊಟಕುಗೊಳಿಸುವುದನ್ನು ತಡೆಯಲು ಬಿ.ಎಲ್‌.ಡಿ.ಇ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಶಾಲೆ, ಕಾಲೇಜುಗಳನ್ನು ಮತ್ತು ಕೋರ್ಸುಗಳನ್ನು ಪ್ರಾರಂಭಿಸುವ ಮೂಲಕ ಪ್ರೋತ್ಸಾಹ ನೀಡಿದರು. 

ಬೇರೆಯವರ ಸಂಸ್ಥೆಗಳ ಅಭಿವೃದ್ಧಿಗೂ ನೆರವು ನೀಡಿದರು.  ಕೊನೆಯ ಉಸಿರಿರುವವರೆಗೂ ಶಿಕ್ಷಣ ಮತ್ತು ಜನಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು.  ಈಗ ನನ್ನ ಸಹೋದರ ಮತ್ತು ಸಚಿವ ಎಂ. ಬಿ. ಪಾಟೀಲರು ಅವರು ಜಲಕ್ರಾಂತಿಯ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ.  ಈಗ ಕೆಜಿ ಯಿಂದ ಪಿಜಿ ವರೆಗೆಯ ಇಲ್ಲಿಯೆ ಶಿಕ್ಷಣ ಸಿಗುತ್ತಿದೆ ಎಂದು ಶಾಸಕರು ತಿಳಿಸಿದರು.