ಎಚ್ ಕೆ ಸೇವಾ ತಂಡದ ವತಿಯಿಂದ ಆರ್ಥಿಕವಾಗಿ ಬಡ ಮಹಿಳೆಯ ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯಕೀಯ ನೆರವು

ಎಚ್ ಕೆ ಸೇವಾ ತಂಡದ ವತಿಯಿಂದ ಆರ್ಥಿಕವಾಗಿ ಬಡ ಮಹಿಳೆಯ ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯಕೀಯ ನೆರವು HK Seva Team provides medical assistance for heart surgery of financially poor woman

ಗದಗ 23:- ತಮ್ಮ ಕ್ಷೇತ್ರ ಮತ್ತು ಜನರನ್ನು ತನ್ನ ಕುಟುಂಬದಂತೆ ನೋಡಿಕೊಂಡ ಎಲ್ಲ ಜನರ ಹೃದಯಾಂತರಾಳದ ಪ್ರೀತಿ ಗಳಿಸಿರುವ ಜನರ ಕಷ್ಟ ನಿವಾರಣೆಗೆ ಗದಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ "ಶ್ರೀ ಎಚ್‌. ಕೆ. ಪಾಟೀಲ ಸೇವಾ ತಂಡ”ದ ಕಾರ್ಯಕ್ರಮಗಳು ಅವಿಸ್ಮರಣೀಯ. ಈ ಒಂದು ಸೇವಾ ತಂಡದ ಕ್ಯಾಪ್ಟನರಾದ ಶಿವಪ್ಪ ತಿಪ್ಪಣ್ಣಾ ಬಳ್ಳಾರಿ ಯವರ ವೈದ್ಯಕೀಯ ನೆರವಿನ ಸಹಕಾರದಿಂದ ಗದಗ ಶಹರದ ನಿವಾಸಿಗಳಾದ ಯಲ್ಲಮ್ಮ ಮಲ್ಲಪ್ಪ , ಯರಗುಡಿ ಯವರು ಹೃದಯದ ಖಾಯಿಲೆಯಿಂದ ಬಳಲುತ್ತಿರಲು ಸೇವಾ ತಂಡದ ಕ್ಯಾಪ್ಟನರಾದ  ಶಿಲ್ಪಾ ತೇಲಗಾವಿ ರವರ ನೆರವಿನೊಂದಿಗೆ ಎಮ್ ಸಿ ಶೇಖ್, ರವರ ಮುಖಾಂತರ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ  ಪ್ರಭು ಬುರಬುರೆಯವರನ್ನು ಸಂಪರ್ಕಿಸಿ ಸೇವಾ ತಂಡದ ವತಿಯಿಂದ ಗದಗ ಜಿಲ್ಲಾ ಆಸ್ಪತ್ರೆಯ ನಿರ್ದೇಶಕರಾದ ಬಸವರಾಜ್ ಬೊಮ್ಮನಹಳ್ಳಿ ಯವರ ನಿರ್ದೇಶನದಂತೆ ಹೃದಯ ಶಸ್ತ್ರ ಚಿಕಿತ್ಸಕರಾದ ಡಾಕ್ಟರ್ ಚಿಂತಾಮಣಿಯವರು ಇದೇ ದಿನಾಂಕ 15 ರಂದು ಹೃದಯ ಚೀಕಿತ್ಸೆಗೆ ಒಳಪಡಿಸಿ  ಸ್ಟಂಟ್ ಅಳವಡಿಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಲಾಯಿತು.