ಪ್ರತೇಕ ರಾಜ್ಯದ ಕೂಗು ಸರಿಯಾದದ್ದು ಅಲ್ಲ : ಸಚಿವ ಕೃಷ್ಣಬೈರೆಗೌಡ

ಬೆಳಗಾವಿ : ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ನಾವು ಅಖಂಡ ಕನರ್ಾಟಕ ಪರಿಕಲ್ಪನೆ ಹೊಂದಿದ್ದೇವೆ. ಅನ್ಯಾಯವಾಗಿದ್ದರೆ ಸರಿ ಪಡಿಸಿ ಉತ್ತರ ಕನರ್ಾಟಕ ಅಭಿವೃದ್ಧಿ ಮಾಡೋಣ. ಆದರೆ ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯದ ಕೂಗು ಭಾವನಾತ್ಮಕವಾಗಿ ಕೆರಳಿಸುವುದು ಬೇಡ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ದಿನದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸಕರ್ಾರಕ್ಕೆ ಅಖಂಡ ಕನರ್ಾಟಕದಲ್ಲಿ ನಂಬಿಕೆ ಇದೆ. ಅಭಿವೃದ್ಧಿಯಲ್ಲಿ ಉತ್ತರ ಕನರ್ಾಟಕಕ್ಕೆ ಅನ್ಯಾಯ ಎನ್ನುವ ಬಗ್ಗೆ ಉತ್ತರ, ದಕ್ಷಿಣ ಅಂತ ಭಾವನೆ ಇಲ್ಲ, ಯಾರಲ್ಲು ಇದು ಇರಬಾರದು. ಸಮಸ್ಯೆ ಪರಿಹಾರ ನಾವೇಲ್ಲರು ಪ್ರಯತ್ನಿಸಬೇಕು. ಸಮಸ್ಯೆ ಉಲ್ಬಣ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಉತ್ತರ ಕನರ್ಾಟಕ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸಲಾಗಿದೆ. ಗಣನೀಯವಾಗಿ ಬದಲಾವಣೆ ಆಗಿದ್ದು ಇದನ್ನು ಮುಂದುವರೆಸಬೇಕಿದೆ ಎಂದು ನುಡಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರವಾಗಿ ಮಾತಾಡಿದ ಸಚಿವ ಕೃಷ್ಣಭೈರೇಗೌಡ, ಕನರ್ಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟ್ ಹಂಚಿಕೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಈಗಾಗಲೆ ಸಮನ್ವಯ ಸಮಿತಿಯಲ್ಲಿ ಸೀಟ್ ಹೊಂದಾಣಿಕೆ ತೀಮರ್ಾನವಾಗಿದೆ. ಎಷ್ಟು ಸೀಟ್ ಜೆಡಿಎಸಗೆ ಬಿಟ್ಟುಕೊಡಬೇಕೆಂಬುದು ಇನ್ನೂ ತೀಮರ್ಾನವಾಗಿಲ್ಲ. 

ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಅಗತ್ಯವಿದೆ. ಕಾಂಗ್ರೆಸ್ ಪಕ್ಷ ಬೇರೆ ರಾಜ್ಯಗಳಲ್ಲಿ ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಾಗ ಕನರ್ಾಟಕದಲ್ಲಿ ಹಾಗೇ ಸ್ಪಧರ್ೆ ಮಾಡಲು ಸಾಧ್ಯವಾ. ಸಮ್ಮಿಶ್ರ ಸಕರ್ಾರದಲ್ಲಿ ಹೊಂದಾಣಿಕೆ ಅಗತ್ಯವಿದೆ. ಜೆಡಿಎಸ್ ಜೊತೆ ಸೀಟ್ ಹಂಚಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ-ನಷ್ಟ ಎರಡು ಆಗುತ್ತದೆ. ಆದರು ಕಾಂಗ್ರೆಸ್ ಹೊಂದಾಣಿಕೆಯಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ಹೇಳಿದರು.  

ಮಾಜಿ ಸಚಿವ ಎ.ಮಂಜು ಹಾಸನ ಎರಡು ಮತಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯಿಲ್ಲ ಎಂದು ವಿಚಾರ ಮಾಜಿ ಸಚಿವ ಮಂಜು ಹೇಳಿಕೆ ವಿಚಾರ ಅವರ ವೈಯಕ್ತಿಕವಾದದ್ದು ಎಂದು ಸಚಿವ ಕೃಷ್ಣಬೈರೆಗೌಡ ಸ್ಪಷ್ಟಪಡಿಸಿದರು.