ಸಿರುಗುಪ್ಪ: ಕೊರೊನ ಘಾತ ದಿಂದಾಗಿ ಸ್ಥಗಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ ವೇಳೆಗೆ ರಾಜ್ಯದಲ್ಲಿರುವ 50.666 ಸಕರ್ಾರಿ ಶಾಲೆ 7330 ಅನುದಾನಿತ ಶಾಲೆ 19,645 ಖಾಸಗಿ ಶಾಲೆ ಒಟ್ಟು 77,641 ಶಾಲೆಗಳು ಆರಂಭಿಸಲು ರಾಜ್ಯ ಸರಕಾರ ಉತ್ಸುಕತೆ ತೋರಿದೆ ಎಂದು ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಶಿಕ್ಷಣ ಪ್ರೇಮಿ ಎ ಅಬ್ದುಲ್ ನಬಿ ತಿಳಿಸಿದ್ದಾರೆ ಜೂನ್ 12 ರೊಳಗೆ ಪಾಲಕರ ಸಭೆ ಪಾಲಕರ ಅಭಿಪ್ರಾಯ ಸಂಗ್ರಹಿಸಬೇಕಿದೆ ಕೇಂದ್ರ ನೀಡುವ ನಿದರ್ೆಶನ ಪಾಲಿಸಬೇಕಾಗುತ್ತದೆ ಸದ್ಯ ಜುಲೈನಲ್ಲಿ ಶಾಲೆಗಳು ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ ಎಂದು ಅಬ್ದುಲ್ ನಬಿ ತಿಳಿಸಿದರು.