ಗೋಕಾಕ 02: ಉತ್ತರ ಕರ್ನಾಟಕದಲ್ಲಿ ಜರುಗಿದ ಭಾರಿ ಪ್ರಮಾಣದ ಅತಿವೃಷ್ಟಿಯಿಂದ ಹಾನಿಗೊಳಗಾದ ಜನತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಿಹಾರ ಒದಗಿಸುವಲ್ಲಿ ವಿಫಲವಾಗಿವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಕೊನರೆಡ್ಡಿ ಹೇಳಿದರು.
ಅವರು, ಮಂಗಳವಾರದಂದು ನಗರದ ಖಾಸಗಿ ಹೋಟೆಲನಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಿಂದ 24 ಬಿಜೆಪಿ ಸಂಸದರನ್ನು ಜನತೆ ಆಯ್ಕೆ ಮಾಡಿ ಕಳುಹಿಸಿದ್ದರು ಸಹ ಕೇಂದ್ರ ಸರಕಾರ ಕರ್ನಾಟಕ ರಾಜ್ಯವನ್ನು ಕಡೆಗಣಿಸಿದೆ. ಕೇಂದ್ರದ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ವೈಮಾನಿಕ ಸಮಿಕ್ಷೆ ಮಾಡಿದ್ದರೂ ಸಹ ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಅನುಧಾನ ತರುವಲ್ಲಿ ಸಾಧ್ಯವಾಗದಿದ್ದಲ್ಲಿ. ರಾಜ್ಯದಿಂದ ಸರ್ವಪಕ್ಷಗಳ ನಿಯೋಗ ಕರೆದೊಯ್ಯುವ ಮೂಲಕ ಪ್ರಧಾನ ಮಂತ್ರಿ ಮನವಲಿಸಲು ಮುಂದಾಗುವಂತೆ ತಿಳಿಸಿದರು.
ರಾಜ್ಯ ಸರಕಾರ ಸಂಪೂರ್ಣ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ತಕ್ಷಣಕ್ಕೆ 1ಲಕ್ಷ ರೂಗಳನ್ನು ನೀಡುವ ಭರವಸೆ ನೀಡುತ್ತು ಆದರೆ 25ಸಾವಿರ ನೀಡುವದಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಯವರು ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿದಾಗ 5ರಿಂದ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಕೊಡಗು ಮಾದರಿಯಲ್ಲಿ ನಿರಾಶ್ರಿತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಚುನಾವಣಾ ಆಯೋಗ 17 ವಿಧಾನಸಭೆಗಳಲ್ಲಿ ಉಪ ಚುನಾವಣೆ ಮುದುಡಲು ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿತ್ತು, ನಂತರ ಮತ್ತೆ ಚುನಾವಣಾ ದಿನಾಂಕ ಘೋಷಿಸಿದ್ದು, ಈವರೆಗೆ ದೇಶದಲ್ಲಿ ಎರಡು ತಿಂಗಳ ಮುಂಚಿತವಾಗಿ ಚುನಾವಣೆ ಘೋಷಿಸಿದ್ದು ಅನರ್ಹರ ದಾರಿತಪ್ಪಿಸವದಕ್ಕಾಗಿಯೊ ಘೋಷಣೆಯಾಗಿದೆಯೊ ಎಂದು ತಿಳಿಯುತ್ತಿಲ್ಲ.
ಉಪಚುನಾವಣೆಗೆ ಗೋಕಾಕ ಸೇರಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು. ಈ ಬಗ್ಗೆ ಈಗಾಗಲೇ ಪಕ್ಷದ ಮುಖಂಡರೊಡನೆ ಸಭೆ ನಡೆಸಲು ಚಿಂತನೆನಡೆಸುತ್ತಿದ್ದು, ಗೋಕಾಕ ಮತಕ್ಷೇತ್ರದಿಂದ ಈಗಾಗಲೇ ನಾಲ್ವರು ಟಿಕೇಟ್ ಆಕಾಂಕ್ಷಿಗಳು ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಮುಖಂಡ ಅಶೋಕ ಪೂಜಾರಿಗೆ ಮಾತೃಪಕ್ಷಕ್ಕೆ ಬರುವದಾದರೇ ಸ್ವಾಗತಿಸುತ್ತೆವೆ. ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್ ವರಿಷ್ಠರಾದ, ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಹಾಗೂ ಮಾಜಿ ಸಿಎಮ್ ಕುಮಾರಸ್ವಾಮಿಯವರು ಆಯ್ಕೆ ಮಾಡಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಪಿ ಎಫ್ ಪಾಟೀಲ, ಪ್ರಕಾಶ ಸೋನವಾಲ್ಕರ, ಎಲ್ ಬಿ ಹುಳ್ಳೇರ, ಗಿರೀಶ ಗೋಕಾಕ, ಸತೀಶ ಒಂಟಗೂಡಿ, ಗುರು ಹುಳ್ಳೇರ, ನ್ಯಾಯವಾದಿ ಮುಲ್ಲಾ ಸೇರಿದಂತೆ ಇತರರು ಇದ್ದರು.