ಸಮುದಾಯ ಜಾಗೃತವಾದಲ್ಲಿ ಏಡ್ಸ್ ಹರಡುವಿಕೆ ನಿಯಂತ್ರಣ ಸಾಧ್ಯ
The spread of AIDS can be controlled if the community is aware
ಗದಗ 02 : ಏಡ್ಸ್ ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ತಂದಾಗ ಮಾತ್ರ ಈ ದಿನಾಚರಣೆಯ ಉದ್ದೆಶ ಪೂರ್ಣವಾಗುತ್ತದೆ ಎಂದು ಡಾ.ಆರ್.ಎನ್.ಗೋಡಬೋಲೆ ತಿಳಿಸಿದರು. ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ್ಘ ಪ್ರಸಾರ ಇಲಾಖೆ, ಕೆ.ಹೆಚ್.ಪಿ. ಐಎಮ್.ಎಸ್ ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ, ಗಾಂಧೀಜಿ ಪ್ಯಾರಾ ಮೆಡಿಕಲ್ ಕಾಲೇಜ, ಪಾಲನಗಾಲಾ ನರ್ಸಿಂಗ್ ಕಾಲೇಜ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಸೃಷ್ಠಿ ಸಂಕುಲ ಸಂಸ್ಥೆ, ನವಚೆತನ ಸಂಸ್ಥೆ, ಚೈತನ್ಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೆ.ಹೆಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ರೆಡ್ ರಿಬ್ಬನ್ ಕ್ಲಬ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲ್ಲಿ ಸೋಮವಾರ ಕೆ.ಎಚ್.ಪಾಟೀಲ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜ್/ ಜಿಲ್ಲಾ ಆಸ್ಪತ್ರೆ, ಮಲ್ಲಸಮುದ್ರ ಗದಗದಲ್ಲಿ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ಜಾಗೃತಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷದ ಘೋಷಣೆಯಂತೆ “ಹೆಚ್.ಐ.ವಿ ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾನಿಸೋಣ” ಎಂಬ ನುಡಿಯಂತೆ ಸಮುದಾಯ ಜಾಗೃತವಾಗಿ ನಮ್ಮ ಆರೋಗ್ಯವನ್ನು ಪಡೆಯಲು ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಡಲು ಮುಂದಾಗುವಂತೆ ಕರೆ ನೀಡಿದರು. ಮುಂದಾಳತ್ವ ವಹಿಸಿ ಜಾಗೃತಿಯನ್ನು ಮೂಡಿಸಿ ಏಡ್ಸ್ ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ತಂದಾಗ ಮಾತ್ರ ಈ ದಿನಾಚರಣೆಯ ಉದ್ದೇಶ ಪೂರ್ಣಗೊಳ್ಳುವುದು ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವವಿಕವಾಗಿ ಮಾತನಾಡಿ ಹೆಚ್.ಐ.ವಿ. ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ನೋಡಲಾಗಿ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಇದು ಇಲಾಖೆಯ ಹಲವಾರು ತಿಳುವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ ಎಂದು ತಿಳಿಸಿದರು. ಹೆಚ್.ಐ.ವಿ. ಮತ್ತು ಏಡ್ಸ್‌ಗೆ ಬಹಳಷ್ಟು ಅಂತರವಿದ್ದು, ಹೆಚ್.ಐ.ವಿ ಸೋಂಕಿತರು ಭಯಪಡುವ ಅಗತ್ಯವಿಲ್ಲ. ಆಪ್ತಸಮಾಲೋಚಕರಿಂದ ನೈತಿಕ ಬೆಂಬಲ ಮಾನಸಿಕ ಬೆಂಬಲವನ್ನು ಪಡೆದು ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂದು ಹೇಳಿದರು. ಸುಮಾರು ದೇಶದಲ್ಲಿ 25 ಲಕ್ಷದಷ್ಟು ಸೋಂಕಿತರಿದ್ದು, ರಾಜ್ಯದಲ್ಲಿ 2.5 ಲಕ್ಷ್ ಜನ ಸೋಂಕಿತರಿರುವರು. ಹೆಚ್.ಐ.ವಿ. ಸೋಂಕು ಮೊದಲು ಆಫ್ರಿಕಾದಲ್ಲಿ ಕಂಡುಬಂದಿದ್ದು, ನಂತರ ವಿಶ್ವದಾತ್ಯಂತ ಹರಡಿದ್ದು, ಮೊದಲ ಪ್ರಕರಣ 1983ರಲ್ಲಿ ಕಂಡುಹಿಡಿಯಲಾಗಿದ್ದು, ಭಾರತದಲ್ಲಿ 1986ರಲ್ಲಿ ಕಂಡುಬಂದಿದ್ದು, 1987ರಲ್ಲಿ ಕರ್ನಾಟಕದ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.
ಜಿಲ್ಲೆಯ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಜಿಲ್ಲೆಯ ಎಲ್ಲ ಇಲಾಖೆಗಳ ಸಹಕಾರದಿಂದ ಈ ಸೋಂಕನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಎಲ್ಲರಿಗೂ ಆರೋಗ್ಯ ಇಲಾಖೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸೋಮಶೇಖರ ಬಿಜ್ಜಳ ರವರು ಮಾತನಾಡಿ ಗದಗ ಜಿಲ್ಲೆ ಹೆಚ್.ಐ.ವಿ ಏಡ್ಸ್ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಳೆದ ಹತ್ತು ವರ್ಷಗಳಲ್ಲಿ ಹೆಚ್.ಐ.ವಿ ಸೋಂಕಿತ ಗರ್ಭೀಣಿಯರಿಂದ ಹುಟ್ಟಿದ ಮಗುವನ್ನು ಹೆಚ್.ಐ.ವಿ. ಸೋಂಕು ಮುಕ್ತ ಮಗುವನ್ನು ಪಡೆಯಲಾಗಿದ್ದು ಉತ್ತಮ ಸಾಧನೆ ಎಂದು ಹೇಳಿದರು. 2030 ರೊಳಗೆ ಹೆಚ್.ಐ.ವಿ. ಸೋಂಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಮತ್ತು ಅವರ ತಂಡದವರು ಕ್ರಿಯಾ ಯೋಜನೆ ಹಮ್ಮಿಕೊಂಡು ಕಾರ್ಯ ಪ್ರೌವೃತ್ತರಾಗಲು ತಿಳಿ ಹೇಳಿದರು. ರಾಷ್ಟ್ರ ಮಟ್ಟದಲ್ಲಿ ಸೊಂಕಿನ ಪ್ರಮಾಣ ಇಳಿಮುಖವಾಗಿದ್ದು, ರಾಜ್ಯದ ಸೋಂಕಿನ ಪ್ರಮಾಣ 1000 ಜನರಲ್ಲಿ 28 ಜನರು ಸೊಂಕಿತರಾಗುತ್ತಿದ್ದು, ಗದಗ ಜಿಲ್ಲೆಯಲ್ಲಿ 5000 ಜನರಲ್ಲಿ 2 ಜನರಿಗೆ ಸೋಂಕು ಕಂಡು ಬರುತ್ತಿದ್ದು ಉತ್ತಮ ಸಾಧನೆ ಎಂದು ಹೇಳಿದರು.
ಇದೆ ಸಂದರ್ಬದಲ್ಲಿ ಜಿಲ್ಲೆಯಲ್ಲಿ ಹೆಚ್.ಐ.ವಿ. ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ಉತ್ತಮ ರೆಡ್ ರಿಬ್ಬನ್ ಕಾಲೇಜು ಸಿದ್ದೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜ ನರಗುಂದ ಬೆನಕಪ್ಪ ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜ ಗಜೇಂದ್ರಗಡ, ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಉತ್ತಮ ಖಾಸಗಿ ಸಹಭಾಗಿತ್ವ ಆಸ್ಪತ್ರೆಯಾಗಿ ಶಿವಪೂರ ಆಸ್ಪತ್ರೆ, ಹಾಗೂ ಹೆಚ್.ಐ.ವಿ ಸೋಂಕಿತ ಮಹಿಳೆಯರ ಹೆರಿಗೆ ಮಾಡಿಸಿದ್ದಕ್ಕಾಗಿ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಹನುಮಂತ ನಿಪನಾಳ ರವರನ್ನು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಜೈ ಕಿಸಾನ ಕಲಾ ತಂಡದಿಂದ ಹೆಚ್.ಐ.ವಿ ಏಡ್ಸ ಕುರಿತು ಜಾನಪದ ಹಾಡುಗಳಿಂದ ಅರಿವು ಮೂಡಿಸುವ ಕಾರ್ಯ ನಿರ್ವಹಿಸಿದರು. ಬಿ.ಬಿ. ಲಾಲಗಟ್ಟಿರವರು ಕಾರ್ಯಕ್ರಮ ನಿರೂಪಿಸಿದರು, ನೀಲಕಂಠ ಮಡಿವಾಳರ ವಂದಿಸಿದರು. ಈ ಸಂದರ್ಭದಲ್ಲಿ ಡಾ. ಅನಂತ ಶಿವಪೂರ, ಡಾ. ರಮೇಶ, ತಾಲೂಕಾ ಆರೋಗ್ಯಾಧಿಕಾರಿಗಳು, ಕೆ.ಎಚ್.ಪಿ.ಐ. ಎಂ.ಎಸ್. ಕಾಲೇಜ್ ಸಮುದಾಯ ಆರೋಗ್ಯ ವಿಭಾಗದ ಡಾ.ಅರವಿಂದ ಕರಿನಾಗಣ್ಣವರ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ರಾಜೇಂದ್ರ ಗಡಾದ, ಮಂಜುನಾಥ ಸಜ್ಜನರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಎನ್.ಜಿ.ಓ. ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 