ಲೋಕದರ್ಶನ ವರದಿ
ಕಾರವಾರ 01: ಹಾಡಾಗಿ ಹರಿಯುತಿದೆ ಮುಗ್ಧ ಬದುಕಿನ ಪಾಡು ಎಂಬ ಹಾಲಕ್ಕಿ ಸಮುದಾಯದ ಜೀವನ ಗಾಥೆ ಕುರಿತು ಕಾರವಾರ ಆಕಾಶವಾಣಿ ಕೇಂದ್ರ ಪ್ರಸ್ತುತ ಪಡಿಸಿದ ರೂಪಕವು 2018 ರ ಆಕಾಶವಾಣಿ ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಮೊದಲ ಪ್ರಶಸ್ತಿ ಪಡೆದುಕೊಂಡಿದೆ.
ಇಲ್ಲಿನ ಆಕಾಶವಾಣಿ ಕಾರ್ಯಕ್ರಮ ನಿವರ್ಾಹಕಿ ಫ್ಲೋರಿನ್ ರೋಶ್ ಬರೆದು ನಿಮರ್ಿಸಿದ ಈ ರೂಪಕಕ್ಕೆ ಸಂಧ್ಯಾ ಮಂಗೇಶ್ಕರ್ ನಿಮರ್ಾಣ ಸಹಕಾರ ಹಾಗೂ ಶ್ಯಾಮ್ಸುಂದರ್ ಕದಂ ಅವರ ತಾಂತ್ರಿಕ ನೆರವಿತ್ತು. ಈ ರೂಪಕದಲ್ಲಿ ಹಾಲಕ್ಕಿ ಒಕ್ಕಲಿಗರ ಜೀವನ ಶೈಲಿ,ಇತಿಹಾಸ,ಸಂಸ್ಕೃತಿ, ಶ್ರೀಮಂತ ಜನಪದ ವೈವಿಧ್ಯತೆ ಹಾಗೂ ಸಮುದಾಯ ಇಂದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಆಕಾಶವಾಣಿ ಕಾರವಾರ ನಿಲಯವು ಕಳೆದ ನಾಲ್ಕು ವರ್ಷಗಳಿಂದ ರೂಪಕ ವಿಭಾಗದಲ್ಲಿ ನಿರಂತರವಾಗಿ ಒಂದಲ್ಲ ಒಂದು ಪ್ರಶಸ್ತಿಗೆ ಭಾಜನವಾಗುತ್ತಲೇ ಬಂದಿದೆ. 2017 ರಲ್ಲಿ ಫ್ಲೋರಿನ್ ರೋಶ್ ಅವರು ಬರೆದು ನಿಮರ್ಿಸಿದ ಬುಡಕಟ್ಟು ಜನಾಂಗವಾದ ಸಿದ್ಧಿಗಳ ಬದುಕಿನ ಕುರಿತು ಕಾಡ ಕಥೆಯೊಳಗೆ ಸುಳಿದ ಬೆಳಕು ರೂಪಕಕ್ಕೂ ಮೊದಲ ಬಹುಮಾನ ಬಂದಿತ್ತು.ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿವರ್ಾಹಕಿ ಫ್ಲೋರಿನ್ ರೋಶ್ ಅವರನ್ನು ಆಕಾಶವಾಣಿಯ ಅಧಿಕಾರಿ ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.