ತಂದೆ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ಮಗ ಮುಗಿಸುತ್ತಾನೆ: ಹುತಾತ್ಮ ಯೋಧ ಪ್ರಸನ್ನ ಸಾಹು ಅವರ ಪತ್ನಿಯ ನುಡಿ

ಭುವನೇಶ್ವರ,ಫೆ.16- ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ನನ್ನ ಮಗ ಮುಗಿಸುತ್ತಾನೆ. ತಂದೆಯ ಕರ್ತವ್ಯವನ್ನಾತ ಪೂರ್ಣಗೊಳಿಸಲಿದ್ದಾನೆ. ಇದು ಹುತಾತ್ಮ ಯೋಧರೊಬ್ಬರ ಪತ್ನಿಯ ದಿಟ್ಟ ನುಡಿಗಳಿವು.  

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ  ಹುತಾತ್ಮರಾದವರಲ್ಲಿ  ಒಡಿಶಾದ ಶಿಖರ್ ಲೋಗ್ ನಿವಾಸಿ ಪ್ರಸನ್ನ ಸಾಹು (48)  ಕೂಡ ಒಬ್ಬರು. ಸಾಹು 1995ರಲ್ಲಿ ಸೈನ್ಯ ಸೇರಿದ್ದ  ಸಾಹು ಅವರು ಸಿಆರ್ಪಿಎಫ್ 61 ಬಟಾಲಿಯನ್ನಲ್ಲವರು ಮುಖ್ಯ ಪೇದೆಯಾಗಿದ್ದರು. 

ಪತಿಯ ಸಾವಿನಿಂದ ಕುಗ್ಗಿರುವ ಪತ್ನಿ ಮೀನಾ ತನ್ನ ಮಗನ ಕಡೆ ಕೈ ತೋರಿಸಿ, ಅವರು ತಮ್ಮ ಕರ್ತವ್ಯವನ್ನು ಅರ್ಧಕ್ಕೆ ಬಿಟ್ಟು ತೆರಳಿದ್ದಾರೆ, ಮಗ ಜಗನ್ ಅದನ್ನು ಪೂರ್ಣಗೊಳಿಸಲು ಹೋಗುತ್ತಾನೆ. ಅವನು ಸಿಆರ್ಪಿಎಫ್ ಸೇರಲಿದ್ದಾನೆ ಎಂದು ಪತಿಯ ಅಗಲಿಕೆಯ ನಡುವೆಯೂ ಇಂಥದೊಂದು ದೃಢ ಸಂಕಲ್ಪ ಮೆರೆದಿದ್ದಾರೆ.

ತನ್ನ ತಂದೆಯ ಸಾವಿಂದ ಆಘಾತಕ್ಕೊಳಗಾಗಿರುವ ಬಾಲಕ ಜಗನ್ ಸರಕಾರ ಮತ್ತೆ ಸಜರ್ಿಕಲ್ ಸ್ಟ್ರೈಕ್ ಮಾಡಿ ಕನಿಷ್ಠ 450 ಉಗ್ರರನ್ನು ಸದೆಬಡಿಯಬೇಕು ಎಂದಿದ್ದಾನೆ. ಮಗಳು ಜಗನ್ ನನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಗಬೇಕು. ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕೆಂದು ಮಗಳು ರೋನಿ ರೋಧಿಸಿದ್ದಾಳೆ.

ಹುತಾತ್ಮನ ಮನೆಯಲ್ಲಿ ಅವರ ಕುಟುಂಬ ವರ್ಗದವರ ರೋಧನ ಮುಗಿಲು ಮುಟ್ಟಿದೆ.