ಸ್ಮಾರ್ಟ್ ವಾಚ್ ಯುಗದಲ್ಲಿ ಕೈ ಗಡಿಯಾರ ಯುಗ ಮುಗಿಯಿತು ಎಂಬ ಭಾವನೆ ಸಲ್ಲದು: ಡಾ. ಅಶ್ವತ್ಥ ನಾರಾಯಣ

ಬೆಂಗಳೂರು, ಜ.16 :           ಗಡಿಯಾರ ಉದ್ಯಮ ಸಾಕಷ್ಟು ಬೆಳದಿದ್ದು, ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ. 

ನಗರದ ಅರಮನೆ ಮೈದಾನದಲ್ಲಿ ಸಮಯ ಭಾರತಿಯಿಂದ ಆಯೋಜಿಸಿದ್ದ, ಬೃಹತ್ ಕೈಗಡಿಯಾರ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಾಷರ್ಿಕ ಹತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು  ವಹಿವಾಟು ಗಡಿಯಾರ ಉದ್ಯಮದಲ್ಲಿ ಆಗುತ್ತಿದ್ದು, ಟೈಟಾನ್, ಟೈಮೆಕ್ಸ್ ನಾಟಿಕಾ, ಒಪೆಕ್ಸ್ ಪ್ಯಾರೀಸ್, ಟಾಮಿ ಹಿಲ್ಫಿಗರ್, ಹ್ಯೂಗೊ ಬಾಸ್ ಹಾಗೂ ಟೈಮಂಡ್ ಸೇರಿದಂತೆ ಹಲವು ಗಡಿಯಾರಗಳಿಗೆ ಭಾರತವೇ ಪ್ರಮುಖ ಮಾರುಕಟ್ಟೆ ಎಂದು ಹೇಳಿದರು. 

ಈ ಹಿಂದೆ ಸಮಯ ಭಾರತಿ ಸಂಸ್ಥೆ ಮುಂಬೈನಲ್ಲಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಗ್ರಾಹಕನಾಗಿ ಪಾಲ್ಗೊಂಡಿದ್ದೇ ಎಂದು ನೆನಪು ಮಾಡಿಕೊಂಡ ಅವರು, ಗಡಿ ಎಂದರೆ ಕೇವಲ ಸಮಯ ಅಲ್ಲ. ಈಗ ತಂತ್ರಜ್ಞಾನ ಬೆಳೆದಿದ್ದು, ಹಲವು ವ್ಯವಸ್ಥೆ, ಸೌಲಭ್ಯಗಳನ್ನು ಗಡಿಯಾರ ವಲಯದಲ್ಲಿ ಪಡೆಯಬಹುದಾಗಿದೆ. ಸ್ಮಾರ್ಟ್ ಫೋನ್ ಕಾಲದಲ್ಲಿ ಗಡಿಯಾರ- ಕೈಗಡಿಯಾರ ಯುಗ ಮುಗಿದಿದೆ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ದಟ್ಟವಾಗುತ್ತಿದೆ. ಆದರೆ, ಇಂದಿಗೂ ಕೂಡಾ ಕೈ ಗಡಿಯಾರ ಬಳಸುವ ಬಳಕೆದಾರರ ಬಹು ಸಂಖ್ಯೆಯೇ ಇದೆ ಎಂದ ಅವರು ಹೇಳಿದರು. 

ಸಮಯ ಭಾರತಿ ಸಂಘಟನಾ ಸಮಿತಿ ಅಧ್ಯಕ್ಷ ಹೇಮಲ್ ಮಿಹಿರ್ ಖರೋಡ್ ಮಾತನಾಡಿ, ಇಂದಿನಿಂದ  ನಾಲ್ಕು ದಿನಗಳ ಕಾಲ ನಡೆಯುವ ಈ ಕೈಗಡಿಯಾರ ಮೇಳದಲ್ಲಿ ಅಮೆರಿಕಾ, ಚೀನಾ, ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ವಿನ್ಯಾಸಗಳ ವಾಚ್ ಗಳು ಮಾರಾಟ ಮೇಳದಲ್ಲಿ ಲಭ್ಯವಾಗಲಿವೆ ಎಂದರು. 

ಪ್ರದರ್ಶನಕ್ಕೆ ರಾಜ್ಯಪಾಲ ವಾಜುಭಾಯಿ ವಾಲಾ ಚಾಲನೆ ನೀಡಿದರು. ವಾಚ್ ಟ್ರೇಡ್ ಫೆಡರೇಶನ್ ಅಧ್ಯಕ್ಷ ವಿನೋದ್, ಬೆಂಗಳೂರು ಹರೋನೆಷ್ಟ್ ಅಸೈ ಅಧ್ಯಕ್ಷ ದೀಪಕ್ ಸೇರಿ ಹಲವು ಪ್ರಮುಖರು ಪಾಲ್ಗೊಂಡಿದ್ದರು