ಲೋಕದರ್ಶನ ವರದಿ
ಗದಗ 09: ಕನ್ನಡದ ಜ. ಪುಸ್ತಕದ ಸ್ವಾಮೀಜಿ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಂಕ್ರಮಣ ಸಾಹಿತ್ಯ ಬಳಗದಿಂದ ಮೌನ ನಮನ ಸಲ್ಲಿಸಲಾಯಿತು.
ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದರವರ ಮನೆಯ ಛಾವಡಿ ಮೇಲೆ ನಡೆದ ಸಂಕ್ರಮಣ ಸಾಹಿತ್ಯ ಬಳಗದ 2ನೇ ಮಾಸಿಕ ಸಭೆಯಯಲ್ಲಿ ಪೂಜ್ಯರಿಗೆ ಮೌನ ನಮನ ಸಲ್ಲಿಸಲಾಯಿತು. ಆರಂಭದಲ್ಲಿ ಪ್ರಸಾದ ಸುತಾರ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ನಡೆಯಿತು. ಪೂಜ್ಯರ ಕುರಿತು ಪ್ರೊ.ಚಂದ್ರಶೇಖರ ವಸ್ತ್ರದವರು ರಚಿಸಿದ ಗೀತೆಯನ್ನು ಪ್ರಸಾದ ಸುತಾರ ಹಾಡಿದರು. ನಂತರ ಪೂಜ್ಯರಿಗೆ ಮೌನನಮನ ಸಲ್ಲಿಸಲಾಯಿತು.
ಸಂಕ್ರಮಣ ಸಾಹಿತ್ಯ ಬಳಗದ ಜಿಲ್ಲಾ ಸಂಚಾಲಕ ಡಾ.ಡಿ.ಬಿ.ಗವಾನಿ ಅವರು ಪೂಜ್ಯರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂದಿನ ಸಭೆ ನಡೆಯುವ ಜಾಗ ಮತ್ತು ಚಚರ್ಿಸುವ ವಿಷಯಗಳ ಕುರಿತು ಸಭೆಯಲ್ಲಿ ಸಂಚಾಲಕರಾದ ಪ್ರೊ.ಚಂದ್ರಶೇಖರ ವಸ್ತ್ರದ, ಎಚ್.ವಿ.ಶಾನುಬೋಗರ, ಡಾ.ಎನ್.ಎಂ.ಅಂಬಲಿ ಮುಂತಾದವರು ಚಚರ್ಿಸಿದರು. ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಕ್ರಮಣದ ಸದಸ್ಯರು ಹಾಗೂ ಸಾಹಿತಿಗಳು, ಸಾಹಿತ್ಯ ಆಸಕ್ತರು, ಮುಂತಾದವರು ಪಾಲ್ಗೊಂಡಿದ್ದರು.