ವಿಕಲಚೇತನರ ಸೇವೆ ವಿಶಿಷ್ಟವಾಗಿದೆ: ನರೇಗಲ್ಲದ ಅನ್ನದಾನೇಶ್ವರ ಸಂಸ್ಥೆಯ ಮುಖ್ಯಸ್ಥ ಬಸಪ್ಪ

ಗದಗ 03:   ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಯುವಜನ ಸೇವಾ ಪ್ರಾಧಿಕಾರ, ವಿಕಲಚೇತನರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಸಂಸ್ಥೆಗಳು ಹಾಗೂ  ವಿಕಲಚೇತನರ  ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು  ಇವರ ಸಂಯುಕ್ತ ಆಶ್ರಯದಲ್ಲಿಂದು ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಸಮಾರಂಭ   ಉದ್ಘಾಟನೆಗೊಂಡಿತು.  

ವಿಕಲಚೇತನ ಮಕ್ಕಳ ಸೇವೆ ನಿರ್ವಹಣೆ  ಗುರುತರವಾದ ಜವಾಬ್ದಾರಿ ಆಗಿದೆ. ವಿಕಲಚೇತನರ ಸೇವೆ ವಿಶಿಷ್ಟವಾಗಿದ್ದು  ಸಾಮಾನ್ಯ ಮಕ್ಕಳಿಗಿಂತ ವಿಕಲಚೇತನರು ಯಾವುದರಲ್ಲಿಯೂ  ಕಡಿಮೆ ಇಲ್ಲವೆಂದು ಈಗಾಗಲೇ  ವಿವಿಧ ರಂಗಗಳಲ್ಲಿ  ರಾಷ್ಟ್ರಮಟ್ಟದಲ್ಲಿ  ಗುರುತಿಸಿಕೊಂಡಿದ್ದಾರೆ ಎಂದು ನರೇಗಲ್ಲದ ಅನ್ನದಾನೇಶ್ವರ ಸಂಸ್ಥೆಯ ಮುಖ್ಯಸ್ಥ  ಎಸ್. ಬಸಪ್ಪ  ಮಾತನಾಡಿ  ಎಂದರು.  

ಸ್ಪಂದನಾ ಕಿವುಡ ಮಕ್ಕಳ ಶಾಲೆಯ  ಎಸ್.ಎಫ್.ದ್ಯಾವನಗೌಡ್ರ ಅವರು ಮಾತನಾಡಿ  ವಿಕಲಚೇತನರು  ಹೆಚ್ಚಿನ  ಸಂಖ್ಯೆಯಲ್ಲಿ  ಕ್ರೀಡಾಕೂಟಗಳಲ್ಲಿ  ಭಾಗವಹಿಸಬೇಕು ಎಂದರು. 

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.   

ವಿಕಲಚೇತನರ ಶಿಕ್ಷಕ ಶಿಕ್ಷಕೇತರ ಸಂಘದ ರಾಜ್ಯಾಧ್ಯಕ್ಷ  ಎಲ್.ಎಮ್. ತಳಬಾಳ,  ತಟ್ಟಿ ಕಿವುಡ ಮಕ್ಕಳ ಶಾಲೆಯ ಮುಖ್ಯಸ್ಥ ಜಿಪಿ.ಪವಾರ,  ಗದುಗಿನ  ಪುಟ್ಟರಾಜ ಕವಿ ಗವಾಯಿಗಳವರ ಅಂಧ ಮಕ್ಕಳ ಶಾಲೆ ವೀರೇಶ್ವರ ಪುಣ್ಯಾಶ್ರಮದ ಮಕ್ಕಳು, ಗದಗ ಬೆಟಗೇರಿಯ  ಮಂಜು ಶಿಕ್ಷಣ  ಸಂಸ್ಥೆ ಬುದ್ಧಿ ಮಾಂದ್ಯರ ಶಾಲೆಯ ಮಕ್ಕಳು,  ವಿಕಲಚೇತನರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಸಂಸ್ಥೆಗಳು,  ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು, ಪದಾಧಿಕಾರಿಗಳು, ಇಲಾಖೆಯ ಪುನರ್ವಸತಿ ಕಾರ್ಯಕರ್ತರು,   ವಿಕಲಚೇತನರುಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ವಾಗ್ದೇವಿ ಕುಲಕಣರ್ಿ ಪ್ರಾಥರ್ಿಸಿದರು.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್  ಪ್ರಾಸ್ತಾವಿಕವಾಗಿ ಮಾತನಾಡಿ  ಸ್ವಾಗತಿಸಿದರು.  ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಮುಖ್ಯಸ್ಥ ಮಲ್ಲಪ್ಪ ಹಕ್ಕಿ  ವಂದಿಸಿದರು.  ಡಿ.ಜಿ. ಕುಲಕಣರ್ಿ ಕಾರ್ಯಕ್ರಮ ನಿರೂಪಿಸಿದರು.