ಸ್ವಾತಂತ್ರ್ಯ ಯೋಧರ ವಿಚಾರ ಸಂಕಿರಣ

ಮಹಾಲಿಂಗಪುರ 26: 3 ನೇ ವರ್ಷದಲ್ಲಿ ಟಿಪ್ಪು ಸುಲ್ತಾನ ಗಲ್ಲಿ (ಹ್ಯಾಗಾಡಿ ಪ್ಲಾಟ) ದಿನಾಂಕ 25-11-2018 ರಂದು ಸ್ಥಳೀಯ ಟಿಪ್ಪು ಸುಲ್ತಾನ ಸಂಘ ನಗರ ಘಟಕವು ಸ್ವಾತಂತ್ರ್ಯ ಯೋಧರ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. 

ವಿಚಾರ ಸಂಕಿರಣವು ಖುರಾನ ಪಠಣದೊಂದಿಗೆ ಆರಂಭಗೊಂಡು, ನಂತರ ನಮ್ಮನ್ನು ಅಗಲಿದ ಕೇಂದ್ರ ಸಚಿವ ಅನಂತಕುಮಾರ, ಮಾಜಿ ಸಚಿವ ಅಂಬರೀಷ, ಮಾಜಿ ಕೇಂದ್ರ ರೇಲ್ವೆ ಮಂತ್ರಿ ಸಿ. ಕೆ. ಜಾಫರ ಶರೀಫ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬಸ್ ಕಾಲುವೆಯಲ್ಲಿ ಬಿದ್ದು 30 ಜನರು ದುರ್ಮರಣಕ್ಕೀಡಾದವರನ್ನು ಸ್ಮರಿಸುತ್ತ ಒಂದು ನಿಮಿಷ ಮೌನಾಚರಣೆಯನ್ನು ಮಾಡಿದರು.

  ವೇದಿಕೆಗೆ ಮುಖ್ಯ ಅತಿಥಿಗಳನ್ನು ಶಿಕ್ಷಕರಾದ ಎಮ್. ಆರ್. ಬಿದರಿ ಇವರು ಬರಮಾಡಿಕೊಂಡರು. ವಿಜಯಪುರದಿಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ವ್ಹಿ. ಎನ್. ಬಾಗಾಯತ ಇವರು ಮಾತನಾಡುತ್ತ ಟಿಪ್ಪು ಸುಲ್ತಾನ ಒಬ್ಬ ದೇಶ ಭಕ್ತ, ಭಾಷಾಭಿಮಾನಿ, ಪ್ರಜಾಭಿಮಾನಿ ಅಲ್ಲದೇ ತನ್ನೆರಡು ಮಕ್ಕಳನ್ನು ದೇಶಕ್ಕಾಗಿ ಬ್ರಿಟಿಷ್ರಲ್ಲಿ ಒತ್ತೆ ಇಟ್ಟಂತಹ ರಾಜನಾಗಿದ್ದಾನೆ. ಕಾಲಾಂತರದಲ್ಲಿ ಮತ್ತೆ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನು ಅಪ್ಪಿದ ಧೀರನಾಗಿದ್ದಾನೆ. ಟಿಪ್ಪು ಸುಲ್ತಾನ ನೆಪೋಲಿಯನ್ ಜೊತೆಗೂಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಿಸುವ ಕನಸು ಕಂಡವ. ಆದರೆ ಮರಾಠರು, ಪೇಶ್ವೆಗಳು, ಹೈದರಾಬಾದ ನಿಜಾಮ ಇವರು ಸಹಾಯ ಹಸ್ತವನ್ನು ನೀಡಿದ್ದೇ ಆಗಿದ್ದರೆ 1699 ರಲ್ಲಿಯೇ ಭಾರತಕ್ಕೆ ಸ್ವಾತಂತ್ರ್ಯ ದೊರೆಯುತ್ತಿತ್ತು. ಪ್ರಪಂಚದಲ್ಲಿಯೇ ಪ್ರಥಮವಾಗಿ ರಾಕೆಟ್ ತಂತ್ರಜ್ಞಾನ ಬಳಸಿದ ಮೊದಲ ರಾಜನಾಗಿದ್ದಾನೆ. ಇದೇ ತಂತ್ರಜ್ಞಾನವನ್ನು ಅಮೇರಿಕಾ ಬಳಸಿಕೊಂಡಿದೆ. ಅಮೇರಿಕಾದಲ್ಲಿ ಈಗಲೂ ಟಿಪ್ಪು ಹಾಗೂ ರಾಕೇಟ್ ಸಮೇತ ಭಾವಚಿತ್ರವನ್ನು ಕಾಣಬಹುದಾಗಿದೆ. ಭಾರತದ ಕೀತರ್ಿ ಪತಾಕೆಯನ್ನು ಪ್ರಪಂಚದಾದ್ಯಂತ ಹಾರಿಸಿದ ರಾಜ ಎಂದರು.

ವಿಜಯಪುರದ ಎಸ್. ಎಮ್. ಪಾಟೀಲರು ಮಾತನಾಡಿ ಭಾರತ ಸ್ವಾತಂತ್ರ್ಯದ ಹೋರಾಟದಲ್ಲಿ ಮೊದಲಿಗ ಟಿಪ್ಪು ಸುಲ್ತಾನ ಮಾಡಿದ ಅಭಿವೃದ್ಧಿ ಕೆಲಸಗಳು ಅಂದರೆ ರೈತರಿಗೆ ಅನುಕೂಲವಾಗುಂತಹ ರಾಜ ಕಾಲುವೆಗಳನ್ನು ನಿಮರ್ಿಸಿ ಹಸಿರು ಕ್ರಾಂತಿಗೆ ಕಾರಣೀಭೂತನಾದ. ಹಾಗೂ ಅಮೃತ ಮಹಲ್ ತಳಿಯ ಗೋವುಗಳನ್ನು ತಂದು ಸಂಶೋಧಿಸಿ ಗೋವಿನ ಬಗ್ಗೆ ಇರುವ ಅಪಾರ ಕಾಳಜಿಯನ್ನು ನಾವು ಕಾಣಬಹುದಾಗಿದೆ. ಹಾಗೂ ಎಲ್ಲರನ್ನು ಸಮಾನ ರೀತಿಯಲ್ಲಿ ನೋಡುವ ರಾಜನಾಗಿದ್ದ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶರಣಶ್ರೀ ಇಬ್ರಾಹೀಮ ಸುತಾರ ಸಾಹೇಬರು ಸನ್ಮಾನವನ್ನು ಸ್ವೀಕರಿಸಿ ಟಿಪ್ಪು ಸುಲ್ತಾನ ಖುರಾನವನ್ನು ಎಷ್ಟು ಓದಿದ್ದರೋ ಅಷ್ಟೇ ಶ್ರೀಮನ್ ಭಗವದ್ಗೀತೆಯನ್ನು ಓದಿ ತಿಳಿದುಕೊಂಡಿದ್ದನು. ಉದಾಹರಣೆಗೆ ಪಂಡಿತೋತ್ತಮನು ಕೆಳಮಟ್ಟದ ವ್ಯಕ್ತಿಗೆ ನೀನು ಕೀಳು ಜಾತಿಯಲ್ಲಿ ಹುಟ್ಟಿ ಬಂದಿರುವಂತಹ ಪಾಪಿ ಎಂದಿದ್ದ ವಿಷಯವು ಟಿಪ್ಪು ಸುಲ್ತಾನನಿಗೆ ಗೊತ್ತಾಗಿ ಭಗವದ್ಗೀತೆಯಲ್ಲಿ ಇರುವಂತಹ ಶ್ಲೋಕ ಯಾರನ್ನೂ ಜರಿಯಬಾರದು ಕೀಳು ತಿಳಿಯಬಾರದು ಎನ್ನುವ ತಾತ್ಪರ್ಯವನ್ನು ಆ ಪಂಡಿತೋತ್ತಮನಿಗೆ ಮನವರಿಕೆ ಮಾಡಿದರು. ಅಂದರೆ ಟಿಪ್ಪು ಸುಲ್ತಾನ ಒಬ್ಬ ಜಾತ್ಯಾತಿತ ಮನುಷ್ಯ ಎನ್ನುವುದಕ್ಕೆ ಪುಷ್ಠಿ ದೊರೆಯುತ್ತದೆ ಎಂದರು.

ಪೂನಾದ ಮೌ. ಅಕಬರಸಾಬ ಹಾಸ್ಮಿ ಮಾತನಾಡಿ ಮಹಾಲಿಂಗಪುರದಲ್ಲಿರುವಂತಹ ಹಿಂದು-ಮುಸ್ಲಿಂ ಬಾಂಧವರು ಬಹಳ ಅನ್ಯೋನ್ಯವಾಗಿದ್ದಾರೆ. ಮುಂದೆಯೂ ಹೀಗೆ ಅನ್ಯೋನ್ಯವಾಗಿರಲಿ ಎಂದು ಹಾರೈಸಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಅಬ್ದುಲಗಫೂರ ಆಲಗೂರ ವಹಿಸಿದ್ದರು. ವೇದಿಕೆ ಮೇಲೆ ಬಸನಗೌಡ ಪಾಟೀಲ, ಶೇಖರ ಅಂಗಡಿ, ಡಾ|| ಎ. ಆರ್. ಬೆಳಗಲಿ, ಜಾವೇದ ಬಾಗವಾನ, ನಜೀರ ಅತ್ತಾರ, ಬಸವರಾಜ ಬುರುಡ, ದಾವಲಸಾಬ ನಗಾಚರ್ಿ, ಹಾಫೀಜ ಅಬ್ದುಲವಹಾಬ, ಹಾಫೀಜ ಯುಸೂಫ, ಮೌ. ಅಬ್ದುಲ ರವುಫ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ನಬಿ ಯಕ್ಸಂಬಿ, ಮೆಹಬೂಬ ಜೀರಗಾಳ, ಜಮೀರ ಯಕ್ಸಂಬಿ, ನಜೀರ ಯಕ್ಸಂಬಿ, ಬಂದೇನಮಾಜ ಸಿಂದಗಿ, ಹೈದರ ಜೀರಗಾಳ, ಹುಸೇನ ಗಡ್ಡಿ, ಶಾನೂರ ಯಾದವಾಡ, ಗುಲಾಬ ನದಾಫ, ಯುನೂಸ ಬೀಳಗಿ, ಯಾಸೀನ ಅವಟಿ, ಮೂಸಾ ಬೂದಿಹಾಳ, ಸಮೀರ ಮಾಲದಾರ, ಯಾಸೀನ ಬಳಗಾರ, ಅಬ್ದುಲರೆಹಮಾನ ಆಲಗೂರ, ಜಾವೇದ ಜಮಖಂಡಿ ಇನ್ನೂ ಹಲವಾರು ಜನರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಹುಮಾಯೂನ ಸುತಾರ, ವಂದನಾರ್ಪಣೆಯನ್ನು ಅಬ್ದುಲ್ಲಾ ಆಲಗೂರ ನೆರವೇರಿಸಿದರು.