ಅವಕಾಶ ವಂಚಿತರಿಗೆ ಸಾಮಾಜಿಕ ಭದ್ರತೆ ನೀಡುವುದೆ ನಿಜವಾದ ದೇಶದ ಭದ್ರತೆ: ಪ್ರೊ. ವನದುರ್ಗ

ಲೋಕದರ್ಶನ ವರದಿ

ಬೆಳಗಾವಿ,28: ಭಾರತದಲ್ಲಿ ಶೇ 60ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದು ಅವರಿಗೆ ಸಕರ್ಾರದ ಸಾಮಾಜಿಕ ಭದ್ರತೆ ದೊರೆಯದೆ ದೇಶದ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ ಅಲ್ಲದೇ ಸಕರ್ಾರವು ನಿಜವಾಗಿಯೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಒಂದು ಉತ್ತಮ ವೇದಿಕೆಯಾಗಿದೆಯೆಂದು ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಂಗರಾಜ ವನದುರ್ಗ, ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗವು ಆಯೋಜಿಸಿದ್ದ ಎರಡು ದಿನಗಳ 'ಭಾರತದಲ್ಲಿಸಾಮಾಜಿ ಭದ್ರತೆ: ಸಮಸ್ಯೆಗಳು ಮತ್ತು ಸವಾಲುಗಳು "ಎಂಬ ವಿಷಯಕುರಿತಂತೆಅಖಖಖ, ಓಜತಿ ಆಜಟ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 28.11.2018 ರಂದು ಕುವೆಂಪು ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ವಿಚಾರ ಸಂಕೀರಣದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳ ಭಾಷಣದಲ್ಲಿ ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. (ಶ್ರೀಮತಿ) ಎಂ.ಎಸ್.ಆಡಿ ಇವರು ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಭದ್ರತೆಯ ಮೌಲ್ಯವು ಹೆಚ್ಚುತ್ತಿದ್ದು ನಮ್ಮದೇಶದ ವಿಷಯಕ್ಕೆ ಬಂದಾಗ ನಮ್ಮಲ್ಲಿ ಅನೇಕ ತರಹದಸಾಮಾಜಿಕ ಭದ್ರತೆ ನೀಡುವ ವ್ಯವಸ್ಥೆಯನ್ನು ಹೆಚ್ಚಿಸುತ್ತಿದ್ದು ಸಂತಸದ ವಿಷಯವೆಂದು ಹೇಳಿದರು.ಈ ಸಂದರ್ಭದಲ್ಲಿಎರಡು ದಿನಗಳಲ್ಲಿ ನಡೆದ ವಿವಿಧ ಗೋಷ್ಠಿಗಳ ವರದಿಯನ್ನು ಸಂಶೋಧನಾ ವಿದ್ಯಾಥರ್ಿಯಾದನಂದನ ಕಟಾಂಬಳೆ ಮಂಡಿಸಿದರು.

ವಿಚಾರ ಸಂಕೀರಣದಸಹ ಸಂಘಟನಾ ಕಾರ್ಯದಶರ್ಿಗಳಾದ ಡಾ.ಕಿರಣಕುಮಾರರವರು ಅತಿಥಿಗಳ ಪರಿಚಯ ಹಾಗೂ ಸ್ವಾಗತ ಭಾಷಣವನ್ನು ನಡೆಸಿಕೊಟ್ಟರು. ವಿಚಾರ ಸಂಕೀರಣದ ಸಂಘಟನಾ ಕಾರ್ಯದಶರ್ಿಗಳಾದ ಡಾ. ಹುಚ್ಚೇಗೌಡರವರು ವಂದನಾರ್ಪಣೆಯನ್ನು ನೇರವೇರಿಸಿದರು. ಕಾಯಕ್ರಮವನ್ನು ಸಂಶೋಧನಾ ವಿದ್ಯಾಥರ್ಿಯಾದನಂದನ ಕಟಾಂಬಳೆ ನಿರೂಪಿಸಿದರು.ಈ ಸಂದರ್ಭದಲ್ಲಿವೇದಿಕೆಯ ಮೇಲೆವ್ಯವಹಾರ ನಿರ್ವಹಣೆ ಮತ್ತುಅರ್ಥಶಾಸ್ತ್ರ ನಿಕಾಯದ ನಿದರ್ೇಶಕರಾದ ಪ್ರೊ.ಡಿ.ಎನ್. ಪಾಟೀಲ, ಪ್ರೊ.ತಳವಾರ ಸಾಬಣ್ಣಾ ಹಾಗೂ ವಿಭಾಗದ ಮುಖ್ಯಸ್ಥರಾದ ಪ್ರೊ.ಮುಕ್ತಾ ಎಸ್. ಆಡಿಯವರು ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರಕ್ಕೂಅಧಿಕ ಸಂಖ್ಯೆಯ ಪ್ರತಿನಿಧಿಗಳು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.