ಸತತ ಪ್ರಯತ್ನವೇ ಸಾಧನೆಯ ರಹಸ್ಯ : ಪಿಎಸ್‌ಐ ರೇವಣ್ಣ ಗುರಿಕಾರ
The secret to success is consistent effort: PSI Revanna Gurikara
ಕೊಪ್ಪಳ 25: ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇವಣ್ಣ ಗುರಿಕಾರ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಕೊಪ್ಪಳದ ಸ್ಫೂರ್ತಿ ಸ್ಟಡಿ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಕಾರ್ಯಗಾರದಲ್ಲಿ ಮಾತನಾಡಿದರು. ಬಡತನವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಸಮಾಜ ನಿಮ್ಮ ಸ್ಥಾನಮನವನ್ನು ನಿರ್ದರಿಸುತ್ತದೆ. ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪದವಿ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗಿ. ಮನುಷ್ಯರಿಗೆ ಖುಷಿ ಆದಾಗ ಅಹಂಕಾರ ಹೆಚ್ಚಾಗುತ್ತದ.ಕಠಿಣ ಅಭ್ಯಾಸವು ನಿಮ್ಮ ಯಶಸ್ಸು ನ್ನು ನಿರ್ಧಾರಿಸುತ್ತದೆ. ಗುರಿ ದೊಡ್ಡದಿರಲಿ, ಅದಕ್ಕೆ ಸಮರೆ್ಣ ಮನೋಭಾವನೆ, ನಿರಂತರ ಪ್ರಯತ್ನ ಇರಲಿ. ಪುಸ್ತಕಗಳನ್ನು ಪದೇ ಪದೇ ಓದಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ವ್ಯಕ್ತಿ ಸಾಧನೆ ಮೇಲೆ ಸ್ಥಾನ ಮಾನ ನಿರ್ಧಾರ ವಾಗುತ್ತದೆ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳು ಓದಬೇಕು.
ವಾರ್ತೆಗಳನ್ನು ಕೇಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತದೆ. ಉದ್ಯೋಗ ಪಡೆಯಬೇಕಾದರೆ ಪದವಿ ಜತೆ ಮಾರ್ಗದರ್ಶನ ಪಡೆಯಿರಿ ಎಂದು ತಿಳಿಸಿದರು.ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ಡಾ. ಪ್ರದೀಪ್ ಕುಮಾರ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಇಂದು ದುಡ್ದಿಗಿಂತ ವಿಧ್ಯೆಗೆ ಹೆಚ್ಚು ಬೆಲೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲದಿಂದ ವಿದ್ಯಾಭ್ಯಾಸ ಮಾಡಬೇಕು. ನಿಷ್ಠೆ , ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ತಿಳಿಸಿದರು. ಕೊಪ್ಪಳದ ಸ್ಫೂರ್ತಿ ಸ್ಟಡಿ ಅಕಾಡೆಮಿ ಗೌರವ ಮಾರ್ಗದರ್ಶಕ ಹೊನ್ನಿಕೇರಿ ಮಲ್ಲಪ್ಪ ಮಾತನಾಡುತ್ತ ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಜತೆ ದೇಶದ ಭವಿಷ್ಯವನ್ನು ಕೂಡ ಕಟ್ಟಬೇಕು. ನೀವು ಗುರಿ, ದೃಷ್ಟಕೋನ ಮತ್ತು ಉದ್ದೇಶ ಇಟ್ಟುಕೊಂಡು ಅಧ್ಯಯನ ಮಾಡಬೇಕು.
ಪೂರ್ವ ತಯಾರಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಸ್ವಯಂ ಗುರಿ ಅರಿವು ಇರಬೇಕು. ನಂಬಿಕೆ, ಆತ್ಮ ವಿಶ್ವಾಸ, ಭದ್ಧತೆ ಇರಬೇಕು. ಸಮರೆ್ಣ ಮನೋಭಾವನೆ ಇರಬೇಕು. ದೃಢ ನಿರ್ಧಾರ ಇರಬೇಕು. ದೌರ್ಬಲ್ಯಗಳನ್ನು ಅರಿತು ಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಶಿಕ್ಷಕ ಶ್ರೀಕಾಂತ್ ಬೆಟಗೇರಿ ಅವರು ಮಾತನಾಡುತ್ತ ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಶಿಕ್ಷಕರ ಪ್ರೇರಣೆ ಪಡೆಯಬೇಕು. ನಮ್ಮ ಪ್ರೇರಣೆ ಯಾವಾಗಲು ನಮ್ಮ ಸುತ್ತ ಮುತ್ತಲಿನವರು ಆಗಿರಬೇಕು ಏಕೆಂದರೆ ಅವರೇ ನಮ್ಮ ಜೀವನದ ಪರಿಣಾಮ ಬಿರುರಿತ್ತಾರೆ. ಸಮಯ ಎಲ್ಲರನ್ನು ನಿಲ್ಲಿಸುತ್ತದೆ. ಆದರೆ ಅದು ಯಾವತ್ತೂ ನಿಲ್ಲುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಇರಬೇಕು ಎಂದು ತಿಳಿಸಿದರು.ಕೊಪ್ಪಳದ ಮಹಿಳಾ ಮತ್ತು ಮಕ್ಕಳು ಇಲಾಖೆಯ ಯಲ್ಲಾಲಿಂಗ ಅವರು ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಶಕ್ತಿ ಇದೆ. ಅದನ್ನು ಹೊರಗೆ ಹಾಕಬೇಕು. ಸೂಕ್ತ ಮಾರ್ಗದರ್ಶನ ಪಡೆದು ಗುರಿಯನ್ನು ತಲುಪಿ ಎಂದು ಹೇಳಿದರು.ವೇದಿಕೆಯಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಡಾ. ಅಶೋಕ ಕುಮಾರ್, ಉಪನ್ಯಾಸಕ ಡಾ. ನರಸಿಂಹ, ಸ್ಫೂರ್ತಿ ಅಕಾಡೆಮಿಯ ನಿರ್ದೇಶಕ ಹನುಮೇಶ್ ಯಾದವ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಹಿನಿ ನಿರೂಪಿಸಿದರು. ಮೂಕಮ್ಮ ಪ್ರಾರ್ಥನೆ ಗೀತೆ ಹಾಡಿದರು. ಡಾ. ಪ್ರದೀಪ್ ಕುಮಾರ ಸ್ವಾಗತಿಸಿದರು. ಡಾ. ನರಸಿಂಹ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 