ಎರಡನೇ ದಿನ ನಿಗದಿಯಿಂದ ಪಾದಯಾತ್ರೆ ಆರಂಭ

ಧಾರವಾಡ 29: ಸುಕ್ಷೇತ್ರ ಗರಗ ಮಡಿವಾಳೇಶ್ವರ ಕಲ್ಮಠದ ಆವರಣದಿಂದ ಸುಕ್ಷೇತ್ರ ಉಳವಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು.

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಪತ್ನಿ ಪ್ರಿಯಾ ದೇಸಾಯಿ ಸೇರಿದಂತೆ ಸಾವಿರಾರು ಸದ್ಭಕ್ತರು ಎರಡನೇ ದಿನ ಶುಕ್ರವಾರ ನಿಗದಿ ಗ್ರಾಮದಿಂದ ಪಾದಯಾತ್ರೆಯನ್ನು ಮುಂದುವರೆಸಿದರು.

ಪಾದಯಾತ್ರೆ ಆರಂಭಕ್ಕೂ ಮುನ್ನ ನಿಗದಿ ಗ್ರಾಮಸ್ಥರು ಶಾಸಕ  ಅಮೃತ ದೇಸಾಯಿ  ಅವರಿಗೆ ಹೃದಯಸ್ಪಶರ್ಿ ಬೀಳ್ಕೊಡುಗೆ ನೀಡಿದರು.  

ಬಳಿಕ ಎರಡನೇ ದಿನದ ಪಾದಯಾತ್ರೆಯೂ ನಿಗದಿಯಿಂದ ಆರಂಭಗೊಂಡು ರಾತ್ರಿಯವರೆಗೆ ನಡೆದು, ಬಳಿಕ ಹಳಿಯಾಳ ಕಕರ್ಾ ಟ್ಯಾಂಕ್ ಬಳಿ ಅಂತ್ಯಗೊಳಿಸಿ ಅಲ್ಲಿಯೇ ವಾಸ್ತವ್ಯ ಮಾಡಿದರು.  

ಮಡಿವಾಳೇಶ್ವರ ಮಠದ ಟ್ರಸ್ಟ ಕಾರ್ಯಧ್ಯಕ್ಷ ಅಶೋಕ ದೇಸಾಯಿ, ಧಾರವಾಡ ಹಾಲು ಒಕ್ಕೂಟದ ನಿದರ್ೇಶಕ ಶಂಕರ ಮುಗದ, ಗರಗ ಮತ್ತು ಹಂಗರಕಿ ಗ್ರಾಮದ ನೂರಾರು ಗುರು ಹಿರಿಯರು ಹಾಗೂ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 

ಹರ ಹರ ಮಹಾದೇವ, ಗರಗ ಮಡಿವಾಳೇಶ್ವರ ಮಹಾರಾಜಕೂ ಜೈ, ಉಳವಿ ಚನ್ನಬಸವೇಶ್ವರ ಮಹಾರಾಜಕೂ ಜೈ ಎಂದು ಘೋಷಣೆಗಳು ಮುಗಿಲು ಮುಟ್ಟಿದ್ದವು .