ಶಿರಸಂಗಿ ಶ್ರೀ ಲಿಂಗರಾಜರ 164ನೇ ಜಯಂತಿ ಆಚರಣೆ

164th Jayanti Celebration of Shirasangi Sri Lingaraja- Manjari

ಮಾಂಜರಿ 10: ಚಿಕ್ಕೋಡಿ ತಾಲೂಕಿನ ಅಂಕಲಿಯ ಕೆ.ಎಲ್‌.ಇ. ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಂದು ತ್ಯಾಗವೀರ ಶಿರಸಂಗಿ ಶ್ರೀ ಲಿಂಗರಾಜರ 164ನೇ ಜನ್ಮಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಬಿ ಕೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಶ್ರೀ ಉದಯಸಿಂಗ್ ರಜಪೂತ ಅವರು ಆಗಮಿಸಿದ್ದರು.  

ಲಿಂಗರಾಜರ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಮುಖಾಂತರ ದಾನದ ಮಹತ್ವವನ್ನು ವಿವರಿಸಿದರು. ಪ್ರಬುದ್ಧ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ನಿಷ್ಕಲ್ಮಶವಾದ ಪ್ರಯತ್ನವನ್ನು ಧಾರೆಯರೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಎಸ್ ಪಾಟೀಲ ಅವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಣ್ಣಾಸಾಹೇಬ ಜಕಾತೆ, ಕುಮಾರ ಕೋರೆ ಹಾಗೂ ವಿವೇಕ ನಷ್ಠೆ, ಆಜೀವ ಸದಸ್ಯರಾದ. ಬಿ. ಎಸ್‌. ಅಂಬಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗಸಂಸ್ಥೆಗಳ ಮುಖ್ಯಸ್ಥರಾದ ಪಿ ಎನ್ ತಳವಾರ, ಜೆ.ಎಸ್‌. ತಮಗೊಂಡ, ಎಸ್‌. ಜಿ. ಹಿರೇಮಠ ಪಾರ್ಥಸಾರಥಿ ನಂದಾ, ಎಮ್‌. ಎಸ್ ಕಾನಡೆ, ಮಹುವಾ ನಿಯೋಗಿ ಕುಮಾರ ಹಳಿಂಗಳಿ ಅವರು ಉಪಸ್ಥಿತರಿದ್ದರು. 

ಜಯಂತ್ಯೋತ್ಸವದಲ್ಲಿ ಎಲ್ಲಾ ಅಂಗ ಸಂಸ್ಥೆಗಳ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಬಸವಪ್ರಭು ಕೋರೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜೆ.ಎಸ್‌. ತಮಗೊಂಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು, ಕುಮಾರ ಹಳಿಂಗಳಿ ಅತಿಥಿಗಳನ್ನು ಪರಿಚಯಿಸಿದರು, ಎಸ್ ಕೆ ಖೋತ ಅವರು ನಿರೂಪಿಸಿದರು, ಮತ್ತು ಆರ್‌. ಎಸ್ ಪೀರನ್ನವರ ವಂದಿಸಿದರು.