ಮರಳು ಸಮಸ್ಯೆ : ಬುಗಿಲೆದ್ದ ಪ್ರತಿಭಟನೆ ಬೃಹತ್ ಪ್ರತಿಭಟನಾ ಮೆರವಣಿಗೆ - ಅಹವಾಲು ಸ್ವೀಕರಿಸಿದ ಜಿಲ್ಲಾಡಳಿತ- ಸಮಸ್ಯೆ ಆಲಿಸಿದ ಶಾಸಕಿ ರೂಪಾಲಿ ನಾಯ್ಕ

ಲೋಕದರ್ಶನ ವರದಿ

ಕಾರವಾರ,19: ಕಾಳಿ ನದಿಯಲ್ಲಿ ಮರಳು ತೆಗೆಯಲು ನಿಷೇಧ ಹೇರಿರುವುದು ಹಾಗೂ ಮರಳು ಕೊರತೆ ಇರುವುದನ್ನು ಪ್ರತಿಭಟಿಸಿ ಸಿವಿಲ್ ಸಲಹಾ ಎಂಜಿನಿಯತರ್ಸ  ಹಾಗೂ ಮರಳು ಗಣಿಗಾರಿಕೆ ಉದ್ಯಮಿಗಳು, ಗೌಂಡಿ ಕಾಮರ್ಿಕರು ಹಾಗೂ ವಿವಿಧ ಸಂಘಟನೆಗಳು ಕಾರವಾರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ಮಾಲದೇವಿ ಕ್ರೀಡಾಂಗಣದಿಂದ ಹೊರಟ ಮೆರವಣಿಗೆ ಕಾರವಾರದ ಮುಖ್ಯ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಹಗಲಿಡೀ ಧರಣಿ ಮಾಡಿ ಸಕರ್ಾರಗಳ ಗಮನಸೆಳೆಯಲಾಯಿತು. ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸಕರ್ಾರದ ನೀತಿಗಳಿಗೆ ಮರಳು ಸಮಸ್ಯೆಗೆ ಕಾರಣ ಎಂದು ಘೋಷಣೆ ಕೂಗಿದರು. ಜಿಲ್ಲೆಯ ಶರಾವತಿ.ಅಘನಾಶಿನಿ, ಗಂಗಾವಳಿ ನದಿಗಳಿಗೆ ಇಲ್ಲದ ನಿರ್ಬಂಧ ಕಾಳಿ ನದಿಗೆ ಮಾತ್ರ ಯಾಕೆ ಎಂದು ಮರಳು ಉದ್ಯಮಿಗಳು ಪ್ರಶ್ನಿಸಿದರು. ಪರಿಸರದ ನೆಪದಲ್ಲಿ ಕಾಮರ್ಿಕರ ಹೊಟ್ಟೆಯ ಮೇಲೆ ಕೇಂದ್ರ ಸಕರ್ಾರ ಹೊಡೆಯುತ್ತಿದೆ ಎಂದು ಆರೋಪಿಸಿದರು. ಕಾಳಿ ನದಿಯಲ್ಲಿ ಮರಳು ದಿನ್ನೆಗಳಿವೆ. ಸಂಪ್ರದಾಯಿಕ ಗಣಿಗಾರಿಕೆ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದ ಮರಳು ಗಣಿಗಾರಿಕೆಯ ಮೇಲೆ ಅತಿಯಾದ ನಿಯಮಗಳಿವೆ. ಕಾರವಾರದಲ್ಲಿ ಕೈಗಾ , ಸೀಬರ್ಡ ಹಾಗೂ ಅಪಾರ್ಟಮೆಂಟ್ ಯೋಜನೆ ನಡೆಯುತ್ತಿವೆ. ಲಕ್ಷಾಂತರ ಟನ್ ಮರಳು ನಮಗೆ ಬೇಕಿದೆ. ಮರಳು ಡಿಪೋ ಬೇರೆ ಕಾರವಾರದಲ್ಲಿ ಇಲ್ಲ. ಅಂಕೋಲಾಕ್ಕೆ ಮರಳು ತರಲು ಹೋಗಬೇಕಿದೆ. ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಜಿಲ್ಲಾಡಳಿತವನ್ನು ಸಿವಿಲ್ ಸಲಹಾ ಎಂಜಿನಿಯರ್ಸ ಮತ್ತು ಗುತ್ತಿಗೆದಾರರು ಒತ್ತಾಯಿಸಿದರು. 

ಧರಣಿ ಸ್ಥಳದಲ್ಲಿ ತಳ್ಳಾಟ :

ಜಿಲ್ಲಾಧಿಕಾರಿ ಕಚೇರಿ ಬಳಿ ಮರಳು ಗಣಿಗಾರಿಕೆಯನ್ನು ಕಾಳಿ ನದಿಯಲ್ಲಿ ಪ್ರಾರಂಭಿಸಬೇಕು. ಪ್ರತಿವರ್ಷದಂತೆ ಈ ವರ್ಷವೂ ಅನುಮತಿ ನೀಡಬೇಕು. ಮರಳು ಡಿಪೋ ಕಾರವಾರದಲ್ಲಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಹತ್ತು ಹಲವು ಸಂಘಟನೆಗಳು ಆರಂಭಿಸಿದ ಧರಣಿಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಯಾಮಾರಮನ್ಗಳನ್ನು ಒಂದಿಬ್ಬರು ತಳ್ಳಿದ ಘಟನೆ ನಡೆಯಿತು. ರಾಜಕಾರಣ ಬೇಡ , ರಾಜಕೀಯ ವ್ಯಕ್ತಿಗಳು ಮಾತನಾಡುವುದು ಬೇಡ ಎಂದು ಆರಂಭವಾದ ತಿಕ್ಕಾಟ ತಳ್ಳಾಟ ಕ್ಯಾಮರಾ ಮನ್ ತಳ್ಳಿದ ಪರಿಣಾಮ ಸುದ್ದಿಯನ್ನೇ ಕ್ಯಾಮರಾ ಮನ್ ಚಿತ್ರೀಕರಿಸಲು ನಿರಾಕರಿಸಿದರು. ಈ ಘಟನೆಯಿಂದ ಧರಣಿಯ ನೇತೃತ್ವವಹಿಸಿದವರು ನಿರಾಶರಾಗಿ, ಪ್ರತಿಭಟನಾಕಾರರನ್ನು ನಿಯಂತ್ರಿಸಿದರು. ಪೊಲೀಸರು ಸಹ ಬಿಗಿ ಬಂದೋಬಸ್ತ ಏರ್ಪಡಿಸಿದ್ದರು. ಉಸುಕು ಉದ್ಯಮಿ ದಿಗಂಬರ ಶೇಟ್ ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿ ಸುದ್ದಿವಾಹಿನಿಗಳ ಕ್ಯಾಮರಾಮನ್ ಮತ್ತು ವರದಿಗಾರರ ಬಳಿ ಕವರೇಜ್ಗೆ ವಿನಂತಿಸಿಕೊಂಡಾಗ ಪರಿಸ್ಥಿತಿ ಹತೋಟಿಗೆ ಬಂತು. 

ಶಾಸಕಿ ರೂಪಾಲಿ ನಾಯ್ಕ ಕೋಪ: 

ಧರಣಿ ನಿರತ ಸ್ಥಳಕ್ಕೆ ಆಗಮಿಸಿದ್ದ ಶಾಸಕಿ ರೂಪಾಲಿ ನಾಯ್ಕ ಪ್ರತಿಭಟನಾಕಾರರಲ್ಲಿ ಒಂದು ಗುಂಪು ಮಾತ್ರ ತಾವು ಮಾತನಾಡುವುದಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದನ್ನು ಗ್ರಹಿಸಿದ್ದರು. ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು ಮರಳು ಸಮಸ್ಯೆ ಉಂಟಾಗಿ ತಿಂಗಳಾಗಿದೆ. ಸಮಸ್ಯೆ ಎಲ್ಲಿದೆ ಎಂದು ರಾಜ್ಯ ಸಕರ್ಾರ ಗಮನಿಸಿ ಸಂಬಂಧಿತರ ಗಮನ ಸೆಳೆಯಬೇಕು. ಸಮಸ್ಯೆಯನ್ನು ಹಾಗೆ ಬಿಟ್ಟರೆ ಹೇಗೆ. ಕೇಂದ್ರದ ಪರಿಸರ ಇಲಾಖೆಯ ಸಮಸ್ಯೆಯಿದ್ದರೆ ಅವರನ್ನು ವಿನಂತಿಸುವ ಕೆಲಸ ಆಗಬೇಕು. ನಾನು ನನ್ನ ಮನೆಯ ಸಮಸ್ಯೆಯಂತೆ ಜನರ ಸಮಸ್ಯೆಯನ್ನು ಭಾವಿಸುತ್ತೇನೆ.  ಇಂಥ ಸಮಸ್ಯೆಗಳು ಬಂದಾಗ ರಾಜಕಾರಣ ಮಾಡುವುದಿಲ್ಲ. ವಿನಾಕಾರಣ ನನ್ನನ್ನು ವಿರೋಧಿಸಿದರೆ ಏನು ಮಾಡಬೇಕೆಂದು ನನಗೂ ಗೊತ್ತಿದೆ. ಅದನ್ನು ಮಾಡಿಯೇ ಸಿದ್ಧ. ನಾವು ಒಳ್ಳೆಯವರಿಗೆ ಒಳ್ಳೆಯವರು. ಕೆಟ್ಟವರಿಗೆ ಕೆಟ್ಟವರು ಎಂದು ಎಚ್ಚರಿಕೆ ನೀಡಿದರು. 

ಸಮಸ್ಯೆ ಕುರಿತು ಯಾರ ಗಮನ ಸೆಳೆಯಬೇಕೆಂದು ನನಗೆ ಗೊತ್ತಿದೆ. ಆದರೆ ನನಗೆ ರಾಜಕೀಯ ಕಾರಣಕ್ಕೆ ತೊಂದರೆ ಕೊಟ್ಟರೆ ಪರಿಸ್ಥಿತಿ ಹದಗೆಡಲಿದೆ ಎಂದು ಗುಡುಗಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ:

ಮರಳು ಸಮಸ್ಯೆ ಕುರಿತು ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಕಾಳಿ ನದಿಯಲ್ಲಿ ಮರಳು ತೆಗೆಯಲು ಪರಿಸರ ಇಲಾಖೆಯ , ತಜ್ಞರ ವಿರೋಧವಿದೆ. ಸಮಸ್ಯೆಗೆ ಕೇಂದ್ರದಿಂದ ಪರಿಹಾರ ಬರಬೇಕು. ನೀವು ಸಹ ಪ್ರಯತ್ನಿಸಬೇಕು. ಧಾರವಾಡ ಜಿಲ್ಲೆಯಲ್ಲಿ ನದಿಗಳಿಲ್ಲ. ಅವರು ಮರಳು ತರಿಸಿಕೊಳ್ಳುತ್ತಿಲ್ಲವೇ?

ಅಂಕೋಲಾ ತಾಲೂಕಿನಲ್ಲಿ ಮರಳು ಡಿಪೋ ಇದೆ. ನೀವು ಅಲ್ಲಿಂದ ಮರಳು ಪಡೆಯಬಹುದು. 30 ಕಿ.ಮೀ. ದೂರದಲ್ಲಿ ಮರಳು ಸಿಗುತ್ತದೆ. ಕಾಳಿ ನದಿಯ ಮರಳು ಬೇಕೆಂದರೆ ಹಲವು ದಾರಿಗಳಿವೆ. ನೀವು ಅದಕ್ಕೆ ಸಂಬಂಧಿತರಲ್ಲಿ ಪರಿಹಾರ ಹುಡುಕಬೇಕು. ನಾವು ನಿಮ್ಮ ಮನವಿಯನ್ನು , ಬೇಡಿಕೆಯನ್ನು ಸಕರ್ಾರಕ್ಕೆ ಕಳುಹಿಸುತ್ತೇವೆ ಎಂದರು. 

ಧರಣಿಯಲ್ಲಿ ಎಂ.ಪಿ.ರಾಣೆ. ಕೃಷ್ಣಾನಂದ ಬಾಂದೇಕರ್. ಆರ್.ಸಿ.ಸಿ.ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಅಲ್ಯುಮಿನಿಯಂ ಕಾರಿಯೇಟರ್ಸ ಸಂಘ,ಗೌಂಡಿ ಗುತ್ತಿಗೆದಾರರ ಸಂಘ, ಇಲೆಕ್ಟ್ರಿಕಲ್ ವರ್ಕರ್ಸ ಸಂಘ, ಟೈಲ್ಸ್ ಫಿಟ್ಟರ್ಸ ಸಂಘ, ಯುನೈಟೆಡ್ ಲೇಬರ್ಸ ಸಂಘ,ಪಿಡಬ್ಲುಡಿ ರಿಜಿಸ್ಟ್ರರ್ಡ್ ಕಾಂಟ್ರಾಕ್ಟರ್ಸ ಸಂಘದವರು ಸೇರಿದಂತೆ ಹತ್ತು ಹಲವು ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.