ಐಕ್ಯತೆ ಸಂದೇಶ ಬೀರಿದ್ದ ಸಂತ ಕವಿ

ಕಾಗವಾಡ:     ಕುಲಕುಲವೆಂದು ಹೊಡೆದಾಡದಿರಿ, ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರಾ...? ಎಂದು ಐದು ದಶಕಗಳ ಹಿಂದೇಯೇ ಜನರಲ್ಲಿ ಐಕ್ಯತೆ ಸಂದೇಶ ಬೀರಿದ್ದ ಸಂತ ಕವಿ ಕನಕದಾಸರು ಎಂದು ಮುಖ್ಯೋಪಾದ್ಯಾಯ ಬಿ.ಎಸ್, ಹುವಣ್ಣವರ ಹೇಳಿದರು.

ಶುಕ್ರವಾರ ರಂದು ಐನಾಪುರ ಪಟ್ಟಣದ ಸರ್ಕಾರಿ ಹಿರಿಯಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿಜರುಗಿದ  ದಾಸ ಶ್ರೇಷ್ಠ ಭಕ್ತಕನಕದಾಸರ ಜಯಂತೋತ್ಸವಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.ಕನಕದಾಸರುತಮ್ಮ ಕೀರ್ತನಗಳ ಮೂಲಕ ಸಮಾಜದಲ್ಲಿ ತಲೆದೋರಿದ್ದ ಜಾತಿ ವ್ಯವಸ್ಥೆಯನ್ನು ಕಿತ್ತೋಗೆಯಲು ಶ್ರಮಿಸಿದವರು. ಶೈವ ಪರಂಪರೆಯಲ್ಲಿ ಹುಟ್ಟಿದರು ವೈಷ್ಣವ ಪರಂಪರೆಯನ್ನು ಸ್ವೀಕಾರ ಮಾಡಿದಕನಕದಾಸರು, ವೈಷ್ಣವ ಪರಂಪರೆಯಲ್ಲಿ ಹುಟ್ಟಿದರು ಶಿವಭಕ್ತನಾಗಿ ಶೈವ ಸಂಪ್ರದಾಯವನ್ನು ಸ್ವೀಕಾರ ಮಾಡಿದ ಬಸವಣ್ಣನವರು ಸಮಾಜದ ಸಾಂಪ್ರದಾಯಿಕ ಸಂಕೋಲೆಯನ್ನುದಾಟಿ ಸಮಾನತೆಯ ಸಂದೇಶವನ್ನು ಸಾರಿ ವಿಶ್ವವಿಖ್ಯಾತರಾದರೆಂದು ಹೇಳಿದರು.ಕಾರ್ಯಕ್ರದಲ್ಲಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ರಾಜಶ್ರೀ ತೆವರಟ್ಟಿ, ಸಹ ಶಿಕ್ಷಕರಾದ ಎಸ್.ಎ.ಸಂಗಣ್ಣವರ, ಯು.ಎಸ್.ಕಾಳೆ, ಬಿ.ಎಸ್.ಜುಗೂಳ, ಆರ್.ಎಸ್.ಭಜಂತ್ರಿ, ಎಸ್.ಜಿ.ಕುರಣೆ, ಎಸ್.ಡಿ, ನಾಯಿಕ, ಎ.ಎಂ. ಭರಮವಡಿಯರ, ಎ.ಎಸ್, ಯರಗಟ್ಟಿ, ಎಸ್. ಡಿ, ಕುಂಬಾರ, ಎಸ್,ಬಿ. ಚಂದಗಡೆ, ಜಿ.ಎಲ್. ಅಗಸಿಮನಿ, ಉಪಸ್ಥಿತರಿದ್ದರು.