ರಾಣೇಬೆನ್ನೂರು18: ನೆರೆ ಹಾವಳಿಯಿಂದ ಸೂರು, ಫಸಲು, ಜನ-ಜಾನುವಾರು ಕಳೆದುಕೊಂಡು ಅತಂತ್ರ ಪರಿಸ್ಥಿತಿಯಲ್ಲಿರುವ ಬಡವರು, ರೈತರು ಸೇರಿದಂತೆ ಯಾರೊಬ್ಬರೂ ಯಾವ ಕಾರಣಕ್ಕೂ ಎದೆಗುಂದಬಾರದು, ಎಲ್ಲ ಕಷ್ಠಗಳನ್ನು ಎದುರಿಸಿ ಮುನ್ನುಗ್ಗುವ ಛಲ ಎಲ್ಲರಲ್ಲೂ ಬರಬೇಕು, ಇದರಿಂದ ಜೀವನದಲ್ಲಿ ಹೊಸದೊಂದು ಅನುಭವ ಬಂದು ಬದುಕು ಸಾರ್ಥಕತೆಯಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಹೇಳಿದರು.
ಗುರುವಾರ ರಾತ್ರಿ ತಾಲೂಕಿನ ಶ್ರೀಕ್ಷೇತ್ರ ಐರಣಿ ಹೊಳೆಮಠದ ಆವರಣದಲ್ಲಿ ಏರ್ಪಡಿಸಿದ್ದ ನೆರೆ ಸಂತ್ರಸ್ತರಿಗೆ ನೆರವು, ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ಬನ್ನಿಮಂಟಪ ವನ ಅಭಿವೃದ್ಧಿ ಕಾರ್ಯಕ್ರಮದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪೃಕೃತಿಯಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಉಹಿಸಲಾಗದಷ್ಟು ನಷ್ಟ ಉಂಟಾಗಿದೆ, ಇದು ನಿಜಕ್ಕೂ ನೋವಿನ ಸಂಗತಿ, ಮತ್ತೆ ಇಂತಹ ಜಲಪ್ರಳಯ ಉಂಟಾಗಬಾರದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರೋಗ್ಯದ ದೃಷ್ಠಿಯಿಂದ ಯೋಗ ಹಾಗೂ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಗತ್ತಿನ ಚಿತ್ತ ಸೆಳೆದಿದ್ದಾರೆ.
ಜನ ಸಾಮಾನ್ಯರಿಗೆ ಅಗತ್ಯವುಳ್ಳ ಶಿಕ್ಷಣ, ಉದ್ಯೋಗ, ರಸ್ತೆ, ರೈಲ್ವೆ, ನೀರು, ಸೂರು, ಶೌಚಾಲಯ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಸಕರ್ಾರದಿಂದ ಪರಿಹಾರ ತಲುಪಿರುವ ಕುರಿತು ಸಂತ್ರಸ್ತರಿಂದ ವಿವರವಾದ ಮಾಹಿತಿಯನ್ನು ಸಚಿವರು ಪಡೆದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ನೆರೆಗೆ ತುತ್ತಾದ ಜಿಲ್ಲೆಯ 45 ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ನರೇಗಾ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇಂದಿನ ಹವಾಮಾನ ವೈಪರಿತ್ಯಕ್ಕೆ ಮನುಷ್ಯನ ಮಿತಿಯಿಲ್ಲದ ಬಳಕೆ ಹಾಗೂ ದುರುಪಯೋಗವೇ ಕಾರಣವಾಗಿದೆ. ಪ್ರಕೃತಿ ಅಸಮತೋಲನ ಹೋಗಲಾಡಿಸಲು ಗಿಡಮರ ಬೆಳೆಸಬೇಕು, ಪರಿಸರವನ್ನು ಉಳಿಸಿ ಸಂರಕ್ಷಿಸಲು ನಾವೆಲ್ಲರೂ ಕಂಕಣಬದ್ದರಾಗಬೇಕು ಎಂದರು.
ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ನೆರೆ ಸಂತ್ರಸ್ತ 300ಕ್ಕೂ ಅಧಿಕ ಕುಟುಂಬಗಳಿಗೆ ಇದೇ ಸಂದರ್ಭದಲ್ಲಿ ಅಕ್ಕಿ, ಸೀರೆ ಹಾಗೂ ನೋಟ್ ಪುಸ್ತಕದ ಕಿಟ್ ವಿತರಿಸಲಾಯಿತು.
ನಿವೃತ್ತ ಯೋಧ ಪರಶುರಾಂ ಕಟಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಪೀಠಾಧ್ಯಕ್ಷ ಬಸವರಾಜ ದೇಶೀಕೇಂದ್ರ ಶ್ರೀ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಗಳಗೌರಿ ಪೂಜಾರ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬುಳ್ಳಪ್ಪ ಬಣಕಾರ, ಕಾರ್ಯದಶರ್ಿ ಬಾಬಣ್ಣ ಶೆಟ್ಟರ, ಹುಬ್ಬಳ್ಳಿ ಸಿದ್ಧಾರೂಢ ಮಠದ ಡಿ.ಡಿ ಮಾಳಗಿ, ಶಿವಾನಂದ ಪೂಜಾರಿ, ಗ್ರಾಸಿಂ ಜನಸೇವಾ ಟ್ರಸ್ಟ್ ವ್ಯವಸ್ಥಾಪಕ ದಿನೇಶ್ ನಾಯ್ಕ್, ಮುಖಂಡ ಚಂದ್ರಪ್ಪ ಬೇಡರ್, ಭಾರತಿ ಜಂಬಗಿ ಸೇರಿದಂತೆ ಭಕ್ತರು ಮತ್ತಿತರರು ಇದ್ದರು.