ಐದು ವಾರಗಳ ಗರಿಷ್ಠ ಮಟ್ಟಕ್ಕೆ ಜಿಗಿದ ರೂಪಾಯಿ ಮೌಲ್ಯ

ಮುಂಬೈ, ಏ 30,ಬ್ಯಾಂಕರ್ ಗಳು ಮತ್ತು ರಫ್ತುದಾರರಿಂದ ಡಾಲರ್ ಮಾರಾಟ ಹೆಚ್ಚಾದ ಕಾರಣ ರೂಪಾಯಿ ಮೌಲ್ಯ 57 ಪೈಸೆ ಜಿಗಿದು ಒಂದು ಡಾಲರ್ ಬೆಲೆ 75 ರೂಪಾಯಿ 12 ಪೈಸೆಯಷ್ಟಿತ್ತು. ಗುರುವಾರದ ಬೆಳಗಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 54 ಪೈಸೆ ಏರಿಕೆ ಕಂಡಿತ್ತು.  ದಿನದ ವಹಿವಾಟಿನ ಅಂತ್ಯಕ್ಕೆ 57 ಪೈಸೆ ಹೆಚ್ಚಳ ಕಂಡು 75.12 ರೂ ನಷ್ಟಿತ್ತು. ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 75.66 ರೂ ಮತ್ತು 75.09 ರೂ ನಷ್ಟಿದೆ. ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ದುರ್ಬಲಗೊಂಡ ಕಾರಣ ಮತ್ತು ಷೇರು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿನಿಂದಾಗಿ ರೂಪಾಯಿ ಮೌಲ್ಯ ಬಲಗೊಂಡಿದೆ.ಈ ಚೇತರಿಕೆಯ ಪರಿಣಾಮ ರೂಪಾಯಿ ಮೌಲ್ಯ ಐದು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ನಾಲ್ಕು ಅವಧಿಗಳಲ್ಲಿ ಒಟ್ಟು 1.33 ರೂ ಏರಿಕೆಯಾಗಿದೆ.