ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಮೂವರು ಸಾವು

ಕೊಪ್ಪಳ,  ಅ 15:   ಭಾರಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು  ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ಯಲಮಗೇರಿ ಗ್ರಾಮದಲ್ಲಿ ನಡೆದಿದೆ. ಅಕ್ಕ ಸುಜಾತ(22) ತಮ್ಮಂದಿರಾದ  ಅಮರೇಶ್ (18) ಹಾಗೂ ಗವಿಸಿದ್ದಪ್ಪ (15) ಮೃತ ದುರ್ದೈವಿಗಳು. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಸುಮಾರು 3 ಗಂಟೆಗೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮೃಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.    ಸಾವಿನ ದವಡೆಯಿಂದ ತಂದೆ ಸೋಮಣ್ಣ ಕುದುರಿಮೋತಿ ಪಾರಾಗಿದ್ದಾರೆ. ಬೆಳೆದುನಿಂತಿದ್ದ  ಮೂವರು ಮಕ್ಕಳನ್ನು ಕಳೆದುಕೊಂಡ ಕುಟುಂಬ ಬಡವಾಗಿದ್ದು, ಗ್ರಾಮದಲ್ಲಿ ನೀರವಮೌನ  ಆವರಿಸಿದೆ. ಸಂಬಂಧಿಕರು ಹಾಗೂ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.