ಜಾನಪದ ಉಳಿಸಿಬೆಳೆಸಲು ಯುವಕರ ಪಾತ್ರ ಬಹುಮುಖ್ಯ

ಲೋಕದರ್ಶನವರದಿ

ಧಾರವಾಡ11: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದ ಜಾನಪದ ಸಂಸ್ಕೃತಿ ನಿರೂಪಗೊಳ್ಳುತ್ತಿದೆ. ವಿಶ್ವಕ್ಕೆ ಮಾದರಿಯಾದ ಜಾನಪದ ಸಂಸ್ಕೃತಿ ಉಳಿಸಬೇಕಾದರೆ ಇಂದಿನ ಯುವ ಪೀಳಿಗೆಯು ಜಾನಪದ ಪರಂಪರೆಯನ್ನು ಉಳಿಸಿಬೆಳೆಸಲು ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹಿರಿಯ ಸಾಹಿತಿಗಳಾದ ಡಾ|| ವ್ಹಿ.ಸಿ. ಐರಸಂಗ ಮಾತನಾಡಿದ್ದರು. 

        ನಗರದ ಸರ್.ಎಮ್ ವಿಶ್ವೇಶ್ವರಯ್ಯಾ ವೃತ್ತದ ಬಳಿ ಇಂಸ್ಟಿಟ್ಯೂಷನ್ ಆಫ್ ಇಂಜಿನಿಯರ್ ಬಾಳೆಕುಂದ್ರಿ ಸಭಾ ಭವನದಲ್ಲಿ ಧಾರವಾಡ ನಾದ ಝೇಂಕಾರ ಸಾಂಸ್ಕೃತಿಕ ಸಂಘ ಹಾಗೂ ನ್ಯೂಸ್ ಟೈಮ್ ಚಾನಲ್ ಇವರ ಆಶ್ರಯದಲ್ಲಿ ಸಿಂಗಿಂಗ್ ಐಡಲ್ ಆಫ್ ಧಾರವಾಡ ಸಮಿ ಫೈನಲ್ನ ಆಡಿಷನ್ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅವರು ಮಾತನಾಡಿದರು. 

      ಕನ್ನಡ ನಾಡಿನ ಜನಪದ ಸಂಸ್ಕೃತಿ ಶ್ರೀಮಂತವಾಗಿ ಸಂಗೀತ ನಾಟಕ ನೃತ್ಯ ವಿಭಾಗಗಳಲ್ಲಿ ವಿವಿಧ ಪ್ರಕಾರದ ಜಾನಪದ ಸಂಸ್ಕೃತಿಯ ಬೇರುಗಳನ್ನು ಕಾಣಬಅಹುದಾಗದೆ. ಇಂದಿನ ಸಿನಿಮಾ ಸಂಗೀತದ ಬರಾಟೆಯಲ್ಲಿಯೂ ಜಾನಪದವೂ ಈಗಿನ ಯುವಕರಲ್ಲಿ ಹೃದಯಕ್ಕೆ ನೇರವಾಗಿ ತಲುಪುವ ಎಲ್ಲಾ ಪ್ರಕಾರಗಳಲ್ಲಿಯೂ ಜಾನಪದವನ್ನು ಕಾಣಬಹುದು ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದಶರ್ಿ ಯಮನಪ್ಪ ಜಾಲಗಾರ, ಮಾತನಾಡಿದರು.  

ಅದೇ ರೀತಿ ಮನದಲ್ಲಿ ಮೊಳೆಯುವ ಆಶಕ್ತಿ ಅನುಸರಿಸಿ ಜೀವನದಲ್ಲಿ ಶ್ರದ್ಧಾ ಪೂರ್ವಕವಾಗಿ ತೆಗೆದುಕೊಂಡು ಚಲ ಬಿಡದೇ ಅವಿರತವಾಗಿ ಶ್ರಮಿಸಿದರೆ ಮಾತ್ರ ಯಾವುದೇ ಸ್ಫಧರ್ೆಯಲ್ಲಿ ಜಯಸಿಗಲು ಸಾಧ್ಯವಾಗುತ್ತದೆ ಎಂದು ರಂಗಭೂಮಿ ಕಲಾವಿದ ಶ್ರೀ ರಮೇಶ ಕುಂಬಾರ ಮಾತನಾಡಿದ್ದರು. 

     ಮಾನವ ಜನಾಂಗ ವಿಕಾಸದ ಹಾದಿಯಿಂದ ಇಲ್ಲಿವರೆಗೆ ಜನಪದ ಬೆಳೆದುಬಂದಿದೆ ವಿಜ್ಞಾನ ಹಾಗೂ ತಂತ್ರಜ್ಞಾನ ಯುಗದಲ್ಲಿ ಜ್ಞಾನಪದ ಸಂಸ್ಕೃತಿ ಇಳಿಮುಖವನ್ನು ಕಾಣುತ್ತಿದೆ ಎಂದು ಕಾರ್ಯಕ್ರಮ ಪ್ರೋತ್ಸಾಹಕರಾದ ರವಿ ಅಶೋಕ ಪಟಾತ ಹೇಳಿದರು. 

ಕಾರ್ಯಕ್ರದಲ್ಲಿ ದುಗರ್ಾದಾಸ, ಎಸ್.ಪಿ ಸೌಂಡ ಸಿಸ್ಟಮ್ನ ಅಮೃತ ಖೊಂದಾಪೂರ, ಪ್ರಕಾಶ ಖೊಂದಾಪೂರ, ವೀಣಾ ಬಡಿಗೇರ, ನಿವೃತ್ತ ಅಧಿಕಾರಿ ಬಿ.ಬಿ ಚಕ್ರಸಾಲಿ, ಮುಕುಂದ, ರವಿ ಪಟಾತ, ರಮೇಶ ಕುಂಬಾರ, ಹಾಗೂ ಆಡಿಶನ್ಗೆ ಬಂದ ಗಾಯಕ/ಗಾಯಕೀಯರು ಸೇರಿ ಈ ಎಲ್ಲಾ ಮಹಾನಿಯರು ನಮ್ಮನ್ನ ಅಗಲಿದ ಹಿರಿಯ ಸಾಹಿತಿಗಳಾದ ಡಾ|| ಗಿರೀಶ ಕಾನರ್ಾಡ ಅವರಿಗೆ 1 ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.