ಸದೃಡ ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿಯ ಪಾತ್ರ ದೊಡ್ಡದು: ಮಹಾದೇವ ಶ್ರೀ

ಮುಧೋಳ14: ಸದೃಡ ರಾಷ್ಟ್ರ ನಿರ್ಮಾಣ ದಲ್ಲಿ ಯುವಶಕ್ತಿಯ ಪಾತ್ರ ಹಿರಿದಾಗಿದ್ದು, ಸಮಾಜದ ಪರಿವರ್ತನೆಗಾಗಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಯುವಶಕ್ತಿ ದೇಶದ ಬೆನ್ನೆಲುಬು, ಯುವಕರು ಸಂಘಟನೆ ಮೂಲಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿಯಬೇಕು ಎಂದು ಮಲ್ಲಿಗೆಹಳ್ಳಿಯ ಜೈ ಭಾರತ ಮಾತಾ ಗ್ರಾಮೀಣಾಭಿವೃದ್ದಿ ಟ್ರಸ್ಟ್ ಇದರ ಸಂಸ್ಥಾಪಕ ಅಧ್ಯಕ್ಷ, ಆಧ್ಯಾತ್ಮಿಕ ಸಂಪನ್ಮೂಲ ವ್ಯಕ್ತಿ ಮಲ್ಲಿಗೆಹಳ್ಳಿ ಮಹಾದೇವ ಸ್ವಾಮಿ ಹೇಳಿದರು.

 ಸ್ವಾಮಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮದ ನಿಮಿತ್ಯ ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನ ಸಾಂಸ್ಕೃತಿಕ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕ 1 ಮತ್ತು 2ರ ಸಹಯೋಗದಲ್ಲಿ ಸೋಮವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸದೃಡ ರಾಷ್ಟ್ರ ನಿರ್ಮಾಣ ದಲ್ಲಿ ಯುವಶಕ್ತಿಯ ಪಾತ್ರ ಕುರಿತು ಮಾತನಾಡಿ ಸಮಾಜವನ್ನು ಸದಾ ದೂಷಿಸುವ ಬದಲು ಅದನ್ನು ಉತ್ತಮ ರೀತಿಯಲ್ಲಿ ಪರಿವರ್ತಿಸಲು  ಯುವ ಜನತೆ ತಮ್ಮ ಬುದ್ದಿ ಮತ್ತು ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ದೇಶದ ಭದ್ರತೆಯೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಲಿದೆ.  

  ಕೇವಲ ಪಠ್ಯದ ಜ್ಞಾನವಲ್ಲದೇ, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸತ್ವ, ಬುದ್ದ, ಬಸವ, ವಿವೇಕಾನಂದರಂಥ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ಓದಿ ತಿಳಿದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು,ವಿವೇಕಾನಂದರು ಯುವ ಶಕ್ತಿಯನ್ನು ಬಳಸಿ ಏನೆಲ್ಲಾ ಬದಲಾವಣೆ ಮಾಡಬಹುದೆಂದು ಕನಸು ಕಟ್ಟಿದ್ದರು,ಹೀಗೆ ಅಗಾಧ ಶಕ್ತಿಯಿರುವ ಯುವಶಕ್ತಿ ಇಂದು ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಏನೇ ಕಾರಣಗಳಿದ್ದರೂ,ಅವನ್ನೆಲ್ಲಾ ಉತ್ತಮ ಶಿಕ್ಷಣ, ಮೌಲ್ಯಗಳ ಅರಿವಿನಿಂದ ಮೆಟ್ಟಿನಿಲ್ಲುವ ಸಂಕಲ್ಪ ಇಂದೇ ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.

  ನಮ್ಮೆಲ್ಲರಿಗೂ ಆಯ್ಕೆಗಳಿವೆ, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದೆಂದು ತಿಳಿಯುವ ವಿವೇಚನೆ ಇದೆ, ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಒಳಮನಸ್ಸು ಹೇಳುತ್ತಿರುತ್ತದೆ. ಒಳ ಮನಸ್ಸಿನ ಮಾತನ್ನು ಕೇಳಿ ನಿರ್ಧಾರ  ತೆಗೆದುಕೊಂಡು ಹೆಜ್ಜೆ ಇಟ್ಟಲ್ಲಿ ಯುವಜನತೆ ತಪ್ಪು ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ, ಯುವಜನರಾದ ನೀವು ಜವಾಬ್ದಾರಿಯಿಂದ ವತರ್ಿಸಲು ಸಾಧ್ಯವಿದೆ,ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ತಮ್ಮ ಮುಂದಿನ ಪೀಳಿಗೆಗೆ ನೀಡುವ ಸಾಮಥ್ರ್ಯವಿದೆ, ಆದ್ದರಿಂದ ನೀವು ನಿಮ್ಮ ಭವಿಷ್ಯ ಜೀವನದ ಬಗ್ಗೆ ಉನ್ನತ ಪರಿಕಲ್ಪನೆ ಹೊಂದಬೇಕು ಎಂದು ಸಲಹೆ ನೀಡಿದರು. 

 ಪಶ್ಚಾತ್ತಾಪ ಪಡುವ ಹೆಜ್ಜೆ ನಿಮ್ಮದಾಗಬಾರದು,ಯಾವುದೇ ಸೋಲಿಗೆ ಹತಾಶರಾಗಬಾರದು,ಒಂದು ದಾರಿ ಮುಚ್ಚಿದರೆ, ಹತ್ತು ದಾರಿ ತೆರೆದಿರುತ್ತದೆ ಅದನ್ನು ನೋಡುವ ದೃಷ್ಟಿ ಹೊಂದಬೇಕು ಹಾಗೂ ಓದಿನ ಹವ್ಯಾಸ ಬೆಳೆಸಿಕೊಂಡು ಮಹಾನ್ ವ್ಯಕ್ತಿಗಳ ಜೀವನ ಸೇರಿದಂತೆ ಉತ್ತಮ ಮೌಲ್ಯಗಳನ್ನು ತಿಳಿದು ಅಳವಡಿಸಿ ಕೊಳ್ಳಬೇಕೆಂದರು.

  ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ ಯುವಜನತೆಗೆ ಅತ್ಯಂತ ಸುರಕ್ಷಿತ ಸ್ಥಳ ಸಮಾಜ, ಅದೇ ಸಮಾಜ ಅತ್ಯಂತ ಅಸುರಕ್ಷಿತ ತಾಣವಾಗಿಯೂ ಪರಿವರ್ತನೆಯಾಗಬಹುದು ಆದ್ದರಿಂದ ಯುವಜನತೆಯ ಪಾತ್ರ ನಿಣರ್ಾಯಕವಾಗಿದ್ದು, ಶಿಕ್ಷಣ ಇಂತಹ ಅಭದ್ರತೆಯಿಂದ ರಕ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉಪದೇಶ ಮತ್ತು ಚಾರಿತ್ರ್ಯ ನಿಮರ್ಾಣ ಶಿಕ್ಷಣದ ಎರಡು ಉದ್ದೇಶವಾಗಿದ್ದು, ಮನೋವಿಕಾಸಕ್ಕೆ ಇದು ಪೂರಕವಾಗಿದೆ. ಮನುಷ್ಯ ವಿವೇಕಿ, ಜೊತೆಗೆ ಆತ ಅತ್ಯಂತ ನಿಷ್ಪಪ್ರಜಕವೂ ಆಗಬಹುದಾಗಿದ್ದು,ಉತ್ತಮ ಶಿಕ್ಷಣ ಇಂತಹ ಮನೋಕ್ಲೇಷಗಳನ್ನು ನಿವಾರಿಸುವ ದಿವ್ಯೌಷಧವಾಗಿದೆ ಎಂದು ಹೇಳಿದರು.