ಬಲಿಷ್ಠ ಹಿಂದುತ್ವ ರಾಷ್ಟ್ರ ನಿಮಾರ್ಣದಲ್ಲಿ ಯುವಕರ ಪಾತ್ರ ಮುಖ್ಯ: ಸುಧಾಕರ

ಲೋಕದರ್ಶನ ವರದಿ

ಶಿರಹಟ್ಟಿ 25: ಭಾರತದ ದೇಶ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿ, ವಿಶಿಷ್ಠವಾದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಅಂತಹ ಬಲಿಷ್ಠ ರಾಷ್ಟ್ರವನ್ನು ಮುಂದುವರೆಸಿಕೊಂಡು ಹೋಗುವುದು ಹಿಂದು ಸಂಘಟನೆಗಳ ಮತ್ತು ಯುವಕರ ಪಾತ್ರ ಮುಖ್ಯವಾದುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಚಾಲಕ ಸುಧಾಕರ ಹೇಳಿದರು.

ಅವರು ಪಟ್ಟಣದ ಎಫ್.ಎಮ್.ಡಬಾಲಿ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿರಹಟ್ಟಿಇವರ ವತಿಯಿಂದ ಜರುಗಿದ ತಾಲೂಕಾ ಹಿಂದೂ ಸಮಾವೇಶ ಪ್ರಯುಕ್ತ ಶಿರಹಟ್ಟಿ ಪ್ರಮುಖ ಬೀದಿಗಳಲ್ಲಿ ಭವ್ಯ ಪಥ ಸಂಚಲನದ ನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರನ್ನು  ಉದ್ದೇಶಿಸಿ ಮಾತನಾಡಿದರು.  

ಹಿಂದು ಸಂಘಟನೆ ಯುವಕರನ್ನು ಒಗ್ಗೂಡಿಸಿ ರಾಷ್ಟ್ರೀಯ ಮನೋಭಾವನೆಯನ್ನು ಅವರಲ್ಲಿ ಬೆಳೆಸಿ ಸಂಘಟನೆಯನ್ನು ವೃದ್ದಿಗೊಳಿಸುವುದರ ಜೊತೆಗೆ ರಾಷ್ಟ್ರೀಯ ಪರಂಪರೆಯನ್ನು ಮುಂದುವರೆಸುವಂತೆ ಮಾರ್ಗದರ್ಶನ ಮಾಡಿಕೊಡಲಾಗುವುದು. ನಾವೆಲ್ಲ ಹಿಂದು, ನಾವೆಲ್ಲ ಬಂಧು ಎಂಬ ಮನೋಭಾವನೆಯನ್ನು ಮೂಡಿಸಿ ಆಧ್ಯಾತ್ಮದ ತಳಹದಿಯಾಗಿರುವ ತ್ಯಾಗದ ಮನೋಭಾವನೆಯನ್ನು ಮೂಡಿಸುವುದಾಗಿದೆ. ಇವರಲ್ಲಿ ಹಿಂದು ಸಂಸ್ಕೃತಿ ಬೆಳವಣಿಗೆಗೆ ಶಕ್ತಿ ತುಂಬಿಸಿ ಪ್ರಪಂಚದಲ್ಲಿ ಭಾರತ ಗುರು ಸ್ಥಾನವನ್ನು ಪಡೆದಿದ್ದು, ಆ ಸ್ಥಾನವನ್ನು ಸದಾವಕಾಲ ಮುಂದುವರೆಸಿಕೊಂಡು ಹೋಗುವುದಕ್ಕೆ ಮಾರ್ಗದರ್ಶವನ್ನು ಮಾಡಲಾಗುವುದು.

ನಮ್ಮದು ಸೋಲಿನ ಪರಂಪರೆಯನ್ನು ಹೊಂದಿದ ದೇಶವಲ್ಲ. ಈ ಸಂದೇಶವನ್ನು ಯುವಕರು ಅರಿತುಕೊಳ್ಳಬೇಕು.  ಎಲ್ಲ ವಿಚಾರಗಳಲ್ಲೂ ಜಗತ್ತಿಗೆ ಮಾರ್ಗದರ್ಶನ ಮಾಡಿದ ದೇಶವಾಗಿದೆ. ಇಂತಹ ಪ್ರಬುದ್ಧ ದೇಶದ ಗೌರವವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  

ಸವರ್ೇಜನ: ಸುಖಿನೋ ಭವಂತು ಎನ್ನುವ ಮಂತ್ರವನ್ನು ಪಟಿಸುತ್ತಾ ಬಂದಿದ್ದು, ಸರ್ವರ ಹಿತ ಕಾಪಾಡುವಲ್ಲಿ ಹಿಂದು ರಾಷ್ಟ್ರ ಸದಾ ಮುಂದು ಇರುತ್ತದೆ ಎನ್ನುವ ಅಭಿಮಾನ ನಮ್ಮೆಲ್ಲರದ್ದಾಗಿದೆ. ನಾವೆಲ್ಲ ಆಂಗ್ಲ ಭಾಷೆಯ ವ್ಯಾಮೋಹವನ್ನು ಬಿಟ್ಟು ಮಾತೃ ಭಾಷೆಗೆ ಪ್ರಾಧಾನ್ಯತೆಯನ್ನು ನೀಡುವುದನ್ನು ಕಲಿಯಬೇಕು. ನಮ್ಮ ಮನೆಯೇ ನಮ್ಮ ಮೌಲ್ಯಗಳನ್ನು ವೃದ್ದಿಸುವ ಸ್ಥಳವಾಗಿದ್ದು, ಅಲ್ಲಿಂದಲೇ ಮಕ್ಕಳ ಪ್ರತಿಭೆ ಅನಾವರಣವಾಗಬೇಕು. ಕೃಷಿಯಲ್ಲಿ ರಾಸಾಯನಿಕ ಬಳೆಸುವ ಪದ್ಧತಿಯನ್ನು ಬಿಟ್ಟು ಮೂಲ ಪದ್ದತಿಯನ್ನು ಅನುಸರಿಸಬೇಕು. ವಿದೇಶಿ ಔಷಧಿಗಳನ್ನು ಕೈಬಿಟ್ಟು ದೇಶಿಯ ಔಷಧಿಗಳನ್ನು ಬಳೆಸಿಕೊಳ್ಳುವ ಮೂಲಕ ದೇಶದ ಪರಂಪರೆಯನ್ನು ಕಾಪಾಡಿಕೊಳ್ಳಬೇಕು. ಹಿಂದು ಸಮಾಜದಲ್ಲಿ ಮೈಮರೆಯುವುದರಿಂದ ನಮಗೆ ಸಮಸ್ಯೆಗಳೆ ಹೆಚ್ಚಾಗಿವೆ. ಆತ್ಮ ಜಾಗೃತಿಯನ್ನು ಮಾಡಿಕೊಳ್ಳುವುದು ಅವಶ್ಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿದ್ದ ಶಿರಹಟ್ಟಿಯ ಜ.ಫಕ್ಕಿರ ಸಿದ್ದರಾಮ ಮಹಾಸ್ವಾಮಿಜಿಗಳು ಮಾತನಾಡಿ, ದೇಶವನ್ನು ಕಾಪಾಡಿಕೊಳ್ಳುವುದು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದಲ್ಲಿ ವಾಸಿಸುವವರೆಲ್ಲ ಸಂಘಟನಾತ್ಮಕ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯವಾಗಿದೆ. ಫಕ್ಕಿರೇಶ್ವರರು ಹೇಳಿದ ಹಾಗೆ ದ್ವೇಷ ಬಿಡು ಪ್ರೀತಿ ಮಾಡು ಎಂಬ ದಿವ್ಯ ಸಂದೇಶದಂತೆ ನಾವೆಲ್ಲ ಹಿಂದು, ನಾವೆಲ್ಲ ಬಂಧು ಎನ್ನುವ ಮನೋಭಾವನೆ ಪ್ರತಿಯೊಬ್ಬರೂ ರೂಢಿಸಿಕೊಳ್ಳವುದು ಅವಶ್ಯಕವಾಗಿದೆ. ದೇಶವಿಚಾರದಲ್ಲಿ ಜಾತಿ ,ಮತ ಪಂಥ,ಪಂಗಡಗಳೆಲ್ಲವನ್ನು ಬದಗೊತ್ತಿ ನಾವೆಲ್ಲ ಭಾರತೀಯರು ಎನ್ನುವ ಭಾವನೆಯನ್ನು ಮೂಡಿಸಿಕೊಳ್ಳವುದು ಅವಶ್ಯಕವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಇಂತಹ ಶಕ್ತಿ ಯುವಕರಲ್ಲಿ ಅಡಗಿದೆ. ಅದನ್ನು ಜಾಗೃತಿ ಗೊಳಿಸಲು ಇಂತಹ ಸಂಘಟನೆಗಳು ಸದಾವಕಾಲ ಕಾಯರ್ೋನ್ಮುಖರಾಗಿರುವುದು ಅವಶ್ಯಕವಾಗಿದೆ ಎಂದು ಹೇಳಿದರು.