ಹಾವೇರಿ18: ಯುವಜನತೆ ದೇಶದ ಸಂಪತ್ತು, ಸದೃಢ ರಾಷ್ಟ್ರ ನಿಮರ್ಾಣಮಾಡುವಲ್ಲಿ ಯುವಜನತೆ ಪಾತ್ರ ಪ್ರಮುಖವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್(ವಾಣಿಜ್ಯ ವಿಭಾಗ) ಹಾಗೂ ಪರಿವರ್ತನ ಮಹಿಳಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್ನಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ವಿದ್ಯಾಥರ್ಿಗಳ ಮೇಲೆ ಮಾದಕ ಔಷಧ ಮದ್ದು ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಶಕ್ತಿಗೆ ಸದೃಢ ರಾಷ್ಟ್ರ ನಿಮರ್ಾಣಮಾಡುವ ಸಾಮಥ್ರ್ಯವಿದೆ. ಆದರೆ ಯುವ ಸಮೂಹ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಯುವಜನತೆಗೆ ನವಚೈತನ್ಯ ನೀಡಿ ಸದೃಢ ರಾಷ್ಟ್ರ ನಿಮರ್ಾಣ ಮಾಡುವಂತೆ ಪ್ರೇರೆಪಿಸುವುದು ರಾಷ್ಟ್ರೀಯ ಯುವ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಹೇಳಿದರು.
ದೇಶದ ಸೈನ್ಯಶಕ್ತಿಯನ್ನು ಸೋಲಿಸುವ ಸಾಮಥ್ರ್ಯ ಪ್ರಪಂಚದ ಯಾವ ದೇಶಗಳಿಗೂ ಇಲ್ಲ. ಹಾಗಾಗಿ ಹೊರದೇಶದವರು ನಮ್ಮ ಯುವ ಸಮುದಾಯವನ್ನು ಹಾಳುಮಾಡಲು ಮಾದಕ ಔಷಧ, ಮದ್ದುಗಳ ಮಾರಾಟ ಮಾಡಿ ಯುವ ಶಕ್ತಿಯನ್ನು ಗುರಿಮಾಡಿಕೊಂಡಿದ್ದಾರೆ. ಇದನ್ನು ನಾವು ಅರಿತು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಮ್ಮ ದೇಶದ ನಾಶಕ್ಕೆ ನಾವೇ ಕಾರಣರಾಗುದರಲ್ಲಿ ಸಂಶಯವಿಲ್ಲ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ವ್ಯಸನದಿಂದ ನಾವು ಹಾಳಾಗುವುದಲ್ಲದೆ ಕುಟುಂಬ, ಸಮಾಜ, ದೇಶವನ್ನು ಆಥರ್ಿಕವಾಗಿ ಸಾಮಾಜಿಕವಾಗಿ ಹಾಳಾಗಲೂ ಕೂಡ ನಾವೇ ಕಾರಣವಾಗುತ್ತವೆ. ಶಾಲಾ- ಕಾಲೇಜ್ ಕ್ಯಾಂಪಸ್ಗಳಲ್ಲಿ ಯಾರಾದರೂ ಮಾದಕ ವಸ್ತುಗಳ ಬಳಕೆದಾರರು ಕಂಡುಬಂದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಬೇಕು, ಅಂತವರಿಗೆ ಅರಿವು ಮೂಡಿಸಲಾಗುವುದು. ಕಾನೂನು ಬಾಹೀರವಾಗಿ ಮಾದಕವಸ್ತುಗಳ ಮಾರಾಟ ಮಾಡುವವರಿಗೆ ಕಾನೂನಿನಡಿ ಶಿಕ್ಷೆ ವಿಧಿಸಬಹುದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಗಳಿಗೆ ತುತ್ತಾಗುತ್ತರೆ. ಜೊತೆಗೆ ಮಾದಕ ವಸ್ತುಗಳ ವ್ಯಸನದಿಂದ ದರೊಡೆ, ಕೊಲೆಗಳು ಹಾಗೂ ಅತ್ಯಾಚಾರದಂದತಹ ದುಷ್ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕೆಲವು ಪ್ರದೇಶಗಳಲ್ಲಿ ಗಾಂಜಾವನ್ನು ಬೆಳದು ಮಾರಾಟ ಮಾಡುತ್ತಾರೆ. ಈ ಕುರಿತು ಮಾಹಿತಿ ದೊರೆತದಲ್ಲಿ ಸಮೀಪದ ಪೊಲೀಸ್ ಠಾಣೆ ತಿಳಿಸಿದರೆ ಅಂತವ ಮೇಲೆ ಸೂಕ್ತ ಕ್ರಮಕೈಗಿಳ್ಳಲಾಗುವುದು ಎಂದು ತಿಳಿಸಿದರು.
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀವಿದ್ಯಾ ಅವರು ಮಾತನಾಡಿ, ನಮ್ಮ ಆಲೋಚನೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಿಮ್ಮೊಳಗೆ ಎಲ್ಲಾ ಶಕ್ತಿಗಳಿದ್ದು ಎನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಲು ಸ್ವಾಮಿ ವಿವೇಕಾನಂದರು ಮಾದರಿಯಾಗಿದ್ದಾರೆ. ಇಂದಿನ ಯುವ ಶಕ್ತಿ ಒಳ್ಳೆಯದಕ್ಕೆ ಮಾತ್ರ ಕಿವಿಗೊಟ್ಟು ಉತ್ತಮ ರಾಷ್ಟ್ರ ನಿಮರ್ಾಣದತ್ತ ಚಿತ್ತ ಹರಿಸುವಂತೆ ಸಲಹೆ ನೀಡಿದರು.
ಮಾದಕ ಔಷಧದ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾ ಮನೋವೈದ್ಯರು, ಡಾ.ವಿಜಯಕುಮಾರ ಬಳಿಗಾರ, ಮೂಲ ಭೂತ ಹಕ್ಕು ಮತ್ತು ಕರ್ತವ್ಯದ ಕುರಿತು ವಕೀಲರಾದ ಸಿ.ಪಿ.ಜಾವಗಲ್ ಹಾಗೂ ಪೊಲೀಸ್ ದೂರು ಪ್ರಾಧಿಕಾರದ ರಚನೆ, ಮಹತ್ವ ಮತ್ತು ಕಾರ್ಯ ವೈಖರಿ ಕುರಿತು ಶಹರ ಪೊಲೀಸ್ ಠಾಣೆ ಪಿ.ಆಯ್. ಶ್ರೀಮತಿ ಪ್ರಭಾವತಿ ಶೇತಸದಿ ಅವರು ಉಪನ್ಯಾಸ ನೀಡಿದರು.
ಜಿ.ಹೆಚ್.ಕಾಲೇಜಿನ ಪ್ರೋ. ಡಿ.ಎ.ಕೊಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಯಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಸಿ.ಪಾವಲಿ, ಜಿಲ್ಯಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಪಿ.ಎಂ.ಬೆನ್ನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ರಾಜೇಂದ್ರ ದೊಡ್ಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಚನ್ನಬಸಯ್ಯ ವಿರಕ್ತಮಠ, ಪರಿವರ್ತನ ಮಹಿಳಾ ಸಂಘದ ಅಧಕ್ಷರಾದ ಉಮಾ.ವಿ.ಬಳಿಗಾರ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ರಮೇಶ್ ನಾಯ್ಕ ಸ್ವಾಗತಿಸಿದರು. ಪ್ರೋ.ಎಸ್.ಜಿ.ಹುಣಸಿಕಟ್ಟಿಮಠ ಅವರು ನಿರೂಪಣೆ ಮಾಡಿದರು.