ಲೋಕದರ್ಶನ ವರದಿ
ಕೊಪ್ಪಳ: ಇಂದು ಕೊಪ್ಪಳದ ಸಕರ್ಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಧ್ವಜ ನೀತಿ ಸಂಹಿತೆ, ರಾಷ್ಟ್ರಧ್ವಜದ ಇತಿಹಾಸ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳ ಕುರಿತು ಪ್ರಥಮ ದಜರ್ೆ ಮಹಿಳಾ ಕಾಲೇಜಿನ 300 ವಿದ್ಯಾಥರ್ಿನಿಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಡಾ. ಗಣಪತಿ .ಕೆ. ಲಮಾಣಿ ಪ್ರಾಂಶುಪಾಲರು ನೆರವೇರಿಸಿದರು.
ಪ್ರಾಸ್ತಾವಿಕವಾಗಿ ದ್ಯಾಮಣ್ಣ ಚಿಲವಾಡಗಿ ಜಿಲ್ಲಾ ಕಾರ್ಯದಶರ್ಿಗಳು ಮಾತನಾಡಿದರು. ಸೋಮಶೇಖರ ಹತರ್ಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ರಾಷ್ಟ್ರ ಧ್ವಜದ ಇತಿಹಾಸ ಕುರಿತು ಮಾಹಿತಿ ನೀಡಿದರು. ಹೆಚ್, ಅಬ್ದುಲ್ ಅಜೀಜ್ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ರಾಷ್ಟ್ರಧ್ವಜದ ನೀತಿ ಸಂಹಿತೆ ಕುರಿತು ತಿಳಿಸಿದರು.
ಗಾದಿಲಿಂಗಪ್ಪ ಜಿಲ್ಲಾ ಸಂಘಟಕರು ಬಸನಗೌಡ ಪೊಲೀಸ್ ಪಾಟೀಲ್ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಪ್ರಾಣೇಶ. ಹೆಚ್. ಅಧಿನಾಯಕರು ರಾಷ್ಟ್ರಧ್ವಜದ ಆರೋಹಣ ಹಾಗೂ ಅವರೋಹಣ ವಿಧಿ ವಿಧಾನಗಳನ್ನು ಕುರಿತು ಪ್ರತ್ಯಕ್ಷ ಶಿಕ್ಷಣ ನೀಡಿದರು. ಡಾ. ಗಣಪತಿ.ಕೆ.ಲಮಾಣಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ಎಮ್.ವಿ.ಪಾಟೀಲ್ ಸಾಂದಭರ್ಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರದೀಪಕುಮಾರ. ದೈಹಿಕ ಶಿಕ್ಷಣ ಬೋಧಕರು, ಡಾ ಮಹಾಂತೇಶ ಮುಧೋಳ, ಸುಮಿತ್ರಾ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು, ಡಾ. ಮಂಜಪ್ಪ ಅರ್ಥಶಾಸ್ತ್ರ ಉಪನ್ಯಾಸಕರು ಡಾ. ಹುಲಿಗೆಮ್ಮ ಕನ್ನಡ ಉಪನ್ಯಾಸಕರು, ನಾಗರತ್ನ ಎನ್.ಎಸ್.ಎಸ್. ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.