ಬೆಳಗಾವಿ, 1: ನಮ್ಮ ನಾಡಿನ ಸಂಸ್ಕೃತೀಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳಾ ಸಂಘಗಳು ಬಹು ಮುಖ್ಯ ಪಾತ್ರವಹಿಸುತ್ತಿವೆ. ಈ ನಿಟ್ಟಿನಲ್ಲಿ ಕ್ರಾಂತಿ ಮಹಿಳಾ ಮಂಡಳವು ಸಮಾಜದಲ್ಲಿ ವಿಶೇಷ ಛಾಪು ಮೂಡಿಸಿದೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.
ಸ್ಥಳೀಯ ಹಿಂದುವಾಡಿಯ ಗೋಮಟೇಶ ವಿದ್ಯಾಪೀಠ ಸಭಾಭನವದಲ್ಲಿ ಸೋಮವಾರ 01 ರಂದುಕ್ರಾಂತಿ ಮಹಿಳಾ ಮಂಡಳವತಿಯಿಂದ ಆಯೋಜಿಸಲಾಗಿದ್ದ, ಕ್ರಾಂತಿಮಹಿಳಾ ಮಂಡಳದ 13 ನೇ ವಾಷರ್ಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಕಲಾಬಿಂಬ ಮುಂತಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು. ಆರು, ವಿಧ್ಯಾಥರ್ಿನಿಯರನ್ನು ದತ್ತು ತೆಗೆದುಕೊಂಡು ಅವರ ಶೈಕ್ಷಣಿಕ ಖಚರ್ು ವೆಚ್ಚಗಳನ್ನು ಭರಿಸುತ್ತಿರುವದು ಶಾಘ್ಲನೀಯವೆಂದರು.
ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿವ್ಯಚೇತನಾಂಗೆ ಬಸಮ್ಮಾ ಮಠದ ಇವಳು ಜನ್ಮತಃ ಅಂಧಳಾಗಿದ್ದರೂಸಹ ಅವಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಐದು ಶಾಲಾ ವಿದ್ಯಾಥರ್ಿನಿಯರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಸವರ್ಾನುಮತದಿಂದ ಆಯ್ಕೆ ಯಾದ ಕಾರ್ಯಕಾರಿ ಮಂಡಳಿಯ ನೂತನ ಸದಸ್ಯರಿಗೆಅಧಿಕಾರ ಹಸ್ತಾಂತರ ಮಾಡಲಾಯಿತು.
ಈಕಾರ್ಯಕ್ರಮದ ಪಾರ್ಥನಾ ಗೀತೆಯನ್ನು ರತ್ನಶ್ರೀ ಗುಡೇರ, ಹೇಮಾ ಬರಬರಿ, ಗೀತಾಎಮ್ಮಿ, ಮಮತಾಅಂಟಿನ, ಶೋಭಾ ಕಾಡನ್ನವರವರ ಹಾಡಿದರು.
ಈ ಸಂದರ್ಭದಲ್ಲಿ ರಾಜಶ್ರೀ ಕಾಗವಾಡ ಸ್ವಾಗತಿಸಿದರು. ಶೋಭಾ ಅರಬಳ್ಳಿ ಮತ್ತು ರೇಣುಕಾ ಕಾಂಬಳೆ ಅಥಿತಿಗಳನ್ನು ಪರಿಚಯಿಸಿದರು. ಕಾರ್ಯದಶರ್ಿ ತ್ರಿಶಲಾಪಾಯಪ್ಪನ್ನವರ ವಾಷರ್ಿಕ ವರದಿಯನ್ನು ಪ್ರಸ್ತುತಪಡಿಸಿದರು. ಲೆಕ್ಕಪತ್ರವನ್ನು ದರ್ಶನಾ ನಿಲಜಗಿ ವಿವರಿಸಿದರು. ಪುಷ್ಪಾ ನಿಲಜಗಿ ನಿರೂಪಿಸಿದರು. ಆಶಾ ನಿಲಜಗಿ
ವಂದಿಸಿದರು.