ಲೋಕದರ್ಶನ ವರದಿ
ಕೊಪ್ಪಳ 05: ಸಹಕಾರಿ ಕ್ಷೇತ್ರ ಬೆಳೆದರೆ ಎಲ್ಲಾ ಕ್ಷೇತ್ರದ ಸವರ್ಾಂಗೀಣ ಬೆಳವಣಿಗೆಗೆ ಅನುಕೂಲವಾಗುತ್ತದೆ. ತಲತಲಾಂತರದಿಂದ ಸಹಕಾರಿ ಕ್ಷೇತ್ರ ಎಲ್ಲಾ ರಂಗದಲ್ಲಿ ತನ್ನದೇಯಾದ ಕೊಡುಗೆ ನೀಡುತ್ತ ಬಂದಿದೆ. ಹಾಗೂ ಈ ಸಹಕಾರಿ ರಂಗದ ಬೆಳವಣಿಗೆಯಲ್ಲಿ ಮಾಧ್ಯಮದವರ ಪಾತ್ರ ಬಹಳಷ್ಟಿದೆ ಎಂದು ಹಿರಿಯ ಸಾಹಿತಿ ಮತ್ತು ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಅಭಿಪ್ರಾಯ ಪಟ್ಟರು.
ಅವರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ ಕಛೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಜಿಲ್ಲೆಯ ಮಾಧ್ಯಮಗಳ ಪ್ರತಿನಿಧಿಗಳಿಗೆ ಒಂದು ದಿನದ ವಿಚಾರ ಗೋಷ್ಠಿ ಮತ್ತು ಸಂವಾದ ಕಾಯರ್ಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಇಂದು ಸಹಕಾರಿ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ಇನ್ನಷ್ಟು ಅಭಿವೃದ್ಧಿ ಸಾಧಿಸುವುದರ ಜೊತೆಗೆ ಜನಸಾಮಾನ್ಯರ ಮತ್ತು ರೈತರಿಗೆ ಸಹಕಾರಿ ಇಲಾಖೆಯಿಂದ ಸಿಗಬಹುದಾದ ಸಹಾಯ ಸೌಕರ್ಯ ಒದಗಿಸಿಕೊಡಬೇಕು. ಮಾಧ್ಯಮದವರು ಕೂಡ ಸಹಕಾರಿ ಕ್ಷೇತ್ರ ಬೆಳವಣಿಗೆ ಮತ್ತು ರೈತ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಅಂದಾಗ ಮಾತ್ರ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಕಾಯರ್ಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಾ.ಶೇಖರಗೌಡ ಮಾಲಿ ಪಾಟೀಲ್ ಮಾತನಾಡಿ, ಜಿಲ್ಲೆಯ ಪತ್ರಕರ್ತರಿಗೆ ಸಹಕಾರಿ ಇಲಾಖೆಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಸದುದ್ದೇಶದಿಂದ ಪ್ರಾಯೋಗಿಕವಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಕಾಯರ್ಾಗಾರ ಏರ್ಪಡಿಸಲು ಚಿಂಥನ-ಮಂಥನ ನಡೆಸಲಾಗುವುದು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸಿದ್ದನಗೌಡ ಪಾಟೀಲ್ರವರು ಆಶಯ ನುಡಿ ಆಡಿದರು. ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿದರು. ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ ವಿಶೇಷ ಉಪನ್ಯಾಸ ನೀಡಿದರು. ಸಹಕಾರಿ ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯ ಎಂ.ಜಿ.ಪಾಟೀಲ್ ಸಹಕಾರಿ ಕ್ಷೇತ್ರದ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ತೋಟಪ್ಪ ಕಾಮನೂರು, ನಿದರ್ೇಶಕರಾದ ಶಕುಂತಲಾ ಹುಡೇಜಾಲಿ, ಮಾರುತಿ ಅಂಗಡಿ, ಉಪನಿಬಂಧಕ ಎಸ್.ಕೆ.ಸಿದ್ನೆಕೊಪ್ಪ, ಉಪನಿದರ್ೇಶಕ ಬಸವರಾಜ ಪಾಟೀಲ್ ಕೊಂಕಲ್ ಮತ್ತೀತರರು ಉಪಸ್ಥಿತರಿದ್ದು, ಶರಣಬಸಪ್ಪ ಕಾಟ್ರಳ್ಳಿ ಕಾರ್ಯಕ್ರಮ ನಿರೂಪಿಸಿದರೆ, ರಾಜ್ಮಾರವರು ಆರಂಭದಲ್ಲಿ ಪ್ರಾರ್ಥನೆಗೈದರು.