ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ: ಸಸಾಲಟ್ಟಿ

ಲೋಕದರ್ಶಣವ ವರದಿ

ಮಹಾಲಿಂಗಪುರ: ಪ್ರಜಾಪ್ರಭುತ್ವದ ವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಯುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಕೆಸರಗೊಪ್ಪ ಪಿಕೆಪಿಎಸ್ ಅಧ್ಯಕ್ಷ ಭೀಮಸಿ ಸಸಾಲಟ್ಟಿ ಹೇಳಿದರು.

   ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಚನ್ನವೀರ ಶಿವಯೋಗಿಗಳ ಆಶ್ರಮದಲ್ಲಿ ನೆರೆಯ ಕೆಸರಗೊಪ್ಪ ಸರಕಾರಿ ಪಪೂ ಕಾಲೇಜಿನವರು ಹಮ್ಮಿಕೊಂಡ 2019-20ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಅವರು ಶಿಬಿರದಲ್ಲಿ ಶ್ರಮದಾನ, ಸಮಾಜ ಸೇವೆ, ಸಂಘಟನೆಯ ಮಹತ್ವ ಅರಿತು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಸಮೂಹ ಮಾಧ್ಯಮಗಳ ಪಾತ್ರವು ಬಹುಮುಖ್ಯವಾಗಿದೆ. ಮಾಧ್ಯಮಗಳು ಸರಕಾರ, ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರ ಮತ್ತು ಜನಪ್ರತಿನಿಧಿಗಳು ಮಾಡುವ ಮಾರಕ ಮತ್ತು ಪೂರಕ ಕೆಲಸಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಸಮಾಜದ ಜೀವನಾಡಿಯಾಗಿ ಕೆಲಸ ಮಡುತ್ತಿವೆ.

  ಇತ್ತೀಚಿನ ವರ್ಷಗಳಲ್ಲಿ ಸಮೂಹ ಮಾಧ್ಯಮಗಳ ಸಂಖ್ಯೆಯು ಹೆಚ್ಚಳವಾಗಿ, ಪ್ರತಿಸ್ಪಧರ್ೆಯಿಂದಾಗಿ ಮಾಧ್ಯಮಗಳು ಉದ್ಯಮಗಳಾಗಿ ಬೆಳೆದು, ಸಮಾಜಕ್ಕೆ ಉತ್ತಮ ಸಂದೇಶಗಳಿಗಿಂತ ಅಪರಾಧ ಮತ್ತು ಅಶ್ಲೀಲತೆಯ ವೈಭವಿಕರಿಸುತ್ತಿರುವದು ಆತಂಕಕಾರಿ ಸಂಗತಿ. ತೀವೃ ಪ್ರತಿಸ್ಪಧರ್ೆ ಮತ್ತು ಲಾಭದಉದ್ಯಮೆಯ ನಡುವೆಯೂ ಸಮೂಹ ಮಾಧ್ಯಮಗಳು ತಕ್ಕಮಟ್ಟಿಗೆ ಸಮಾಜದ ಅಭಿವೃದ್ದಿ ಮತ್ತು ಪ್ರಜಾಪ್ರಭುತ್ವದ ಉಳಿಗಾಗಿ ಶ್ರಮಿಸುತ್ತಿರುವದೇ ಸಂತೋಷದ ಸಂಗತಿಯಾಗಿದೆ ಎಂದರು.

  ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ ಸಮೂಹ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗಗಳಾಗಿ ಕಾರ್ಯನಿರ್ವಹಿಸುತ್ತಿವೆ. ಟಿಆರ್ಪಿ ಸ್ಪಧರ್ೆಯ ನಡುವೆಯೂ ಮಾಧ್ಯಮಗಳು ಸಮಾಜವನ್ನು ತಿದ್ದಿ ಸರಿದಾರಿಗೆ ನಡೆಸುವ ಸಾಧನಗಳಾಗಬೇಕಾಗಿದ್ದು ಇಂದು ಅವಶ್ಯಕವಾಗಿದೆ ಎಂದರು.

   ಗ್ರಾಪಂ ಸದಸ್ಯರಾದ ಹನಮಂತ ಬ್ಯಾಕೂಡ, ಶ್ರೀಮಂತ ಕಾರಜೋಳ, ಕಾಲೇಜಿನ ಪ್ರಾಚಾರ್ಯ ಜೆ.ಎಂ.ಹುನಗುಂದ, ಉಪನ್ಯಾಸಕರಾದ ಎ.ಬಿ.ಗೌಡಪ್ಪಗೋಳ, ಡಾ. ಚಕ್ರವತರ್ಿ ಎಂ.ಪಿ., ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಬಿ.ಆರ್.ಶೇಗುಣಸಿ, ನಾಗಲಿಂಗ ಬಡಿಗೇರ ಸೇರಿದಂತೆ ಹಲವರು ಇದ್ದರು. 

     ವಿದ್ಯಾಥರ್ಿನಿಯರಾದ ಶಿಲ್ಪಾ ದಡ್ಡಿಮನಿ ಸ್ವಾಗತಿಸಿದರು. ರಕ್ಷಿತಾ ತೇರದಾಳ ನಿರೂಪಿಸಿದರು. ರೂಪಾ ಜಮಖಂಡಿ ವಂದಿಸಿದರು.