ವಿದ್ಯಾರ್ಥಿಯ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ: ಡಾ. ಅಜಿತ ಪ್ರಸಾದ
The role of teachers is crucial in student achievement: Dr. Ajita Prasad
ಧಾರವಾಡ 10: ಶಿಕ್ಷಣದ ವಿಚಾರ ಬಂದಾಗ ಅದರಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಏನು ಮತ್ತು ಎಷ್ಟು ಎಂಬುದನ್ನು ಅರಿತಿರಬೇಕು. ನಾವು ನೀಡುತ್ತಿರುವ ಶಿಕ್ಷಣ ಮಕ್ಕಳಿಗೆ ಎಷ್ಟು ಅರ್ಥವಾಗುತ್ತಿದೆ. ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ಯಾವುದು ಎಂಬುದನ್ನು ತಿಳಿದಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿಗೆ ವಿದ್ಯಾರ್ಜನೆಯ ಮಹತ್ವ ಅರ್ಥವಾಗುತ್ತದೆ ಎಂದು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಅವರು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಉತ್ಸವ ಸಭಾಭವನದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣಭಾರತಿ ಬೆಂಗಳೂರು ಮತ್ತು ಜನತಾ ಶಿಕ್ಷಣ ಸಮಿತಿ ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಮಿಲನ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಕಾಯಿಲೆಗೆ ಸರಿಯಾದ ಓಷಧಿ ನೀಡಿದರೇ ಮಾತ್ರ ಹೇಗೆ ಗುಣಮುಖವಾಗುತ್ತದೇಯೊ ಅದೇ ರೀತಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಜ್ಞಾನಕ್ಕೆ ಸರಿಯಾದ ಭೋಧನೆ, ವಿಚಾರಗಳನ್ನು ತಿಳಿಸಿದಾಗ ಮಾತ್ರ ಆ ವಿದ್ಯಾರ್ಥಿ ಸರಿಯಾದ ಮಾರ್ಗದಲ್ಲಿ ವಿದ್ಯಾರ್ಜನೆ ಮಾಡಬಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿರಬಾರದು. ತಂತ್ರಜ್ಞಾನ ಸಾಕಷ್ಟು ಬೆಳೆದಿರುವದರಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆದು ಕೊಂಡಿರುತ್ತಾರೆ. ಶಿಕ್ಷಕರು ಸರಿಯಾದ ಜ್ಞಾನ ಪಡೆದಿಲ್ಲವಾದರೇ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ತಪ್ಪು ಅಭಿಪ್ರಾಯ ಬರುವ ಸಾಧ್ಯತೆಗಳಿರುತ್ತವೆ. ಕಾರಣ, ಶಿಕ್ಷಕಕರು ಅವರಿಗಿಂತ ಮೊದಲೇ ಅಂತರಾಜಾಲ ಮತ್ತು ನಿರಂತರ ಪುಸ್ತಕಗಳ ಅಧ್ಯಯನದಿಂದ ಹೆಚ್ಚಿನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆೆ ಸರಿಯಾದ ಮಾರ್ಗ ತೋರಿಸಬೇಕು ಎಂದು ಹೇಳಿದರು.
ಪ್ರಶಿಕ್ಷಣಭಾರತಿ ಧಾರವಾಡ ಜಿಲ್ಲಾ ಸಂಚಾಲಕರಾದ ಡಾ. ಬಸವರಾಜ ತಲ್ಲೂರ ಮಾತನಾಡಿ ಶಿಕ್ಷಕರಲ್ಲಿ ಉತ್ತಮ ಜ್ಞಾನ ಮತ್ತು ತರಬೇತಿಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರು ತಿಂಗಳಿಗೊಮ್ಮೆ ಇಂತಹ ಶಿಕ್ಷಕರ ಸಹಮಿಲನ ಕಾರ್ಯಕ್ರಮಗಳನ್ನು ಜನತಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾಗುತ್ತಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಾಮಾಜಿಕ ಕಳಕಳಿಯಲ್ಲಿ ನಡೆಯುತ್ತಿರುವ ಜೆ.ಎಸ್.ಎಸ್ ನೈತಿಕ ಶಿಕ್ಷಣಕ್ಕೆ ಹೆಸರು ವಾಸಿಯಾಗಿದ್ದು, ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವದಲ್ಲದೇ, ಮಕ್ಕಳಲ್ಲಿ ಶಿಸ್ತು, ಸಂಯಮ, ಉತ್ತಮ ಸಂಸ್ಕಾರವನ್ನು ಬೆಳೆಸುತ್ತಿದೆ. ಇಂತಹ ಸಂಸ್ಥೆಯ ಶಿಕ್ಷಕರ ವಿಚಾಗಳನ್ನು ಕಾರ್ಯಾಗಾರಗಳ ಮೂಲಕ ನವೀಕರಿಸುವ ಸೌಭಾಗ್ಯವನ್ನು ಪಡೆದದ್ದು ನಮಗೆ ಸಂತಸದ ವಿಚಾರ. ರಾಷ್ಟರೋತ್ಥಾನ ಪರಿಷತ್ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರಗಳು, ಗೋ-ರಕ್ಷಣೆ, ಸೇವಾ ವಿಭಾಗಗಳ ಮೂಲಕ ಸಮಾಜದ ಒಳಿತಿಗಾಗಿ, ರಾಷ್ಟ್ರದ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಈ ಕಾರ್ಯಗಳಿಗೆ ಕೈಜೋಡಿದ ಜೆ.ಎಸ್.ಎಸ್ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಖ್ಯಾತ ಶಿಕ್ಷಕರು ಮತ್ತು ಲೇಖಕರು, ಜನಪದ ಸಾಹಿತ್ಯಗಾರರು ಅಶೋಕ ಹಂಚಲಿ ಅವರು ಮಾತನಾಡಿ, ಇಡೀ ವಿಶ್ವಕ್ಕೆ ವಿಶ್ವವೇ ಭಾರತ ದೇಶದ ಬಗ್ಗೆ ಕೊಂಡಾಡುತ್ತಿರುವಾಗ, ಒಳ್ಳೆಯ ವಿಚಾರಗಳನ್ನು ಹಂಚಿಕೊಂಡು ತಮ್ಮ ದಾಖಲೆಗಳಲ್ಲಿ ನಮೂದಿಸುತ್ತಿರುವಾಗ. ನಾವೆಷ್ಟು ನಮ್ಮ ಮಕ್ಕಳಲ್ಲಿ ನಮ್ಮ ಭಾರತ ದೇಶದ ಬಗ್ಗೆ ಒಳ್ಳೆಯ ವಿಚಾರಗಳನ್ನು ಬಿತ್ತಿದ್ದೇವೆ. ನಮ್ಮ ಸಂಸ್ಕೃತಿ ಬಗ್ಗೆ ಎಷ್ಟರಮಟ್ಟಿಗೆ ಅರಿವು ಮೂಡಿಸಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಕೇವಲ ಕೆಲಸಕ್ಕೆ ಹಾಜರಾಗಿದ್ದೇವೆಂದು ಮಕ್ಕಳಿಗೆ ಪುಸ್ತಕದಲ್ಲಿ ಮಾಹಿತಿಯನ್ನು ಹೇಳಿ ಹೋದರೆ ಸಾಲದು. ಶಿಸ್ತು, ಸಂಯಮ, ದೇಶಪ್ರೇಮ, ಜವಾಬ್ದಾರಿಯನ್ನು ಮಕ್ಕಳಲ್ಲಿ ಮೈಗೂಡಿಸಬೇಕು. ಇತ್ತೀಚಿನ ವಿದ್ಯಮಾನಗಳು ನಮ್ಮ ದೇಶವನ್ನು ಎಲ್ಲಿಗೇ ಕೊಂಡೊಯ್ಯುತ್ತಿವೆ ಎಂಬುದನ್ನು ತಿಳಿಹೇಳಬೇಕು, ಸರಿ-ತಪ್ಪುಗಳ ಅರಿವು ಅವರಿಗೆ ಬರುವಂತೆ ಮಾಡಬೇಕು. ಕೇವಲ ನೌಕರಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡದೇ, ನಮ್ಮ ದೇಶ ಪ್ರಪಂಚದ ಮಾದರಿ ದೇಶವನ್ನಾಗಿಸಲು ಬೇಕಾದ ವಿಚಾರಗಳನ್ನು ಅವರಲ್ಲಿ ಬೆಳೆಸಬೇಕು. ಆಧುನಿಕತೆ ಬೆಳೆದಂತೆ ಭಾರತವು ಬೆಳೆಯುತ್ತಾ ಹೋಗಬೇಕು ಅಂದಾಗ ಶಿಕ್ಷಣ ಕ್ಷೇತ್ರ ಸಾರ್ಥಕವಾಗುತ್ತದೆ ಎಂದು ಆಧುನಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪಾತ್ರ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ಪ್ರಶಿಕ್ಷಣಭಾರತಿ ಧಾರವಾಡ ವಿಭಾಗದ ಸಂಯೋಜಕರಾದ ಶ್ರೀ ವೀರೇಂದ್ರಗೌಡ ಪಾಟೀಲ್ ಸಮಾರೋಪ ನುಡಿಗಳನ್ನಾಡಿ ವ್ಯಕ್ತಿ ಮೊದಲು ತಾನು ಒಳ್ಳೆಯವನಾಗಿ ಬದಲಾಗಬೇಕು, ನಂತರ ತಾನಾಗಿಯೇ ಕುಟುಂಬ, ಸಮಾಜ, ರಾಷ್ಟ್ರ ಮತ್ತು ವಿಶ್ವವನ್ನು ಬದಲಾಯಿಸಲು ಸಾಧ್ಯ ವ್ಯಕ್ತಿ ಬದಲಾಗಲು ಶಿಕ್ಷಣ ಮುಖ್ಯ, ಶಿಕ್ಷಣದ ಗುಣಮಟ್ಟ ಹೆಚ್ಚಲು ಶಿಕ್ಷಕರ ಗುಣಮಟ್ಟ ಹೆಚ್ಚಬೇಕು ಎಂದರು. ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಸ್ವಾಗತಿಸಿದರು, ಸಂಧ್ಯಾರಾಣಿ ಪ್ರಾರ್ಥಿಸಿದರು. ಮಹೇಶ ಬಗಲಿ ವಂದಿಸಿದರು. ಪುಷ್ಪಾವತಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ಶಾಲೆಯ ಪ್ರಾಚಾರ್ಯರುಗಳಾದ ಸಾಧನಾ ಎಸ್. ತ್ರಿವೇಣಿ. ಆರ್, ರೇಣು ಪಾಟೀಲ್ ಸುಧಾಮಣಿ ರಾವ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 