ಮಕ್ಕಳಲ್ಲಿನ ಪ್ರತಿಭೆ ಹೊರತರುವಲ್ಲಿ ಶಿಕ್ಷಕರ ಜತೆಗೆ ಸಮಾಜದ ಪಾತ್ರ ಮುಖ್ಯ: ಡಾ. ಜೋಶಿ

ಬೆಳಗಾವಿ : ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಶಿಕ್ಷಕರ ಜತೆಗೆ ಸಮಾಜದ ಪಾತ್ರವೂ ಮುಖ್ಯವಾಗಿದೆ. ಆದ್ದರಿಂದ ಪ್ರತಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವ ಕಾರ್ಯವಾಗಬೇಕು. ಅಂದಾಗ ಮಾತ್ರ ಸದೃಢ ರಾಷ್ಟ್ರ ನಿಮರ್ಾಣದ ಪರಿಕಲ್ಪನೆ ಸಾಧ್ಯವಾಗಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಸಕರ್ಾರಿ ಪ್ರೌಢ ಶಾಲೆಯಲ್ಲಿ ಈಚೇಗೆ ಆಯೋಜಿಸಲಾಗಿದ್ದ ಮಕ್ಕಳ ಮೇಳ ಹಾಗೂ ತಾಯಂದಿರ ಸಭೆಯನ್ನು ಉದ್ಘಾಟಿಸಿ, ನಂತರ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಹುಡಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಇಂದಿನ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇರುವುದರಿಂದ ಉತ್ತೇಜಿಸಲು ಸಾಧ್ಯವಾಗುವುದರ ಜತೆಗೆ ಅವರಲ್ಲಿನ ಆತ್ಮವಿಶ್ವಾಸ ಮತ್ತು ನಮ್ಮ ಸಂಸ್ಕೃತಿಯ ಅರಿವು ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಮಾತನಾಡಿ, ಪಾಲಕರು ತಮ್ಮ ದುಡಿಮೆಯಲ್ಲಿ ಮಕ್ಕಳಿಗೆ ಕಾಳಜಿ ತೊರಿಸುವುದು. ಮಕ್ಕಳಿಗಾಗಿ ಆಸ್ತಿ ಪಾಸ್ತಿಗಳನ್ನಾಗಿ ಮಾಡದೇ, ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಆಧುನಿಕ ತಂತ್ರಜ್ಞಾನ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಬೆನ್ನು ಹತ್ತಿ ಸಮಯ ವ್ಯರ್ಥ ಮಾಡುವುದರ ಜತೆಗೆ, ತಮ್ಮ ಉಜ್ವಲ ಭವಿಷ್ಯವನ್ನು ಕಮರಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ಆದ್ದರಿಂದ ಮಕ್ಕಳ ಶಿಕ್ಷಣ ಹಾಗೂ ಚಲವನಗಳ ಬಗ್ಗೆ ಕೇವಲ ಶಿಕ್ಷಕರ ಗಮನ ಇದ್ದರೆ ಸಾಲದು, ಪಾಲಕರ ಹಾಗೂ ಸಮಾಜದ ಪ್ರತಿಯೊಬ್ಬರ ಗಮನ ಇದ್ದಾಗ ಮಾತ್ರ ಉತ್ತಮ ಸಮಾಜ ನಿಮರ್ಾಣದ ಜತೆಗೆ ಉತ್ತಮ ವ್ಯಕ್ತಿಯನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಮಯದಲ್ಲಿ ಆದರ್ಶ ವಿದ್ಯಾಥರ್ಿಗಳಾದ ರವಿ ಕಿತ್ತೂರ ಹಾಗೂ ಸುಮಿತ್ರಾ ಬಡಿಗೇರ ಅವರನ್ನು ಸನ್ಮಾನಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ನಂತರ ಶಾಲಾ ವಿದ್ಯಾಥರ್ಿಗಳಿಂದ ಶಿಶುನಾಳ ಶರೀಫರ ಗೀತೆಗಳನ್ನು ಹಾಡಿದರು.  ಜೀವನದಲ್ಲಿ ಗಣಿತ ಎಂಬ ನಾಟಕ ಮತ್ತು ಮೂಡನಂಭಿಕೆ ಬಯಲು ನಾಟಕ ಪ್ರದರ್ಶನ ಸೇರಿದಂತೆ ಮಕ್ಕಳಿಂದ ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ಮಾಲತಿ ಜೋಶಿ, ಯುವ ಧುರೀಣ ನಿಂಗನಗೌಡ ದೊಡಗೌಡರ, ಡಾ.ಎಸ್.ಎಸ್.ಹಿರೇಮಠ, ಜಿಪಂ ಸದಸ್ಯೆ ಲಾವಣ್ಯಾ ಶಿಲ್ಲೆದಾರ, ಗ್ರಾಪಂ ಸದಸ್ಯ ಸಿದ್ದಪ್ಪ ಮಾವಿನಕಟ್ಟಿ, ಬಿ.ಬಿ. ನಾವಲಗಟ್ಟಿ, ದುಂಡಪ್ಪ ಮಾವಿನಕಟ್ಟಿ, ಮುಖ್ಯಶಿಕ್ಷಕಿ ಎಂ.ವಿ.ಗಾವಡೆ, ಶಿಕ್ಷಕರಾದ ಆರ್.ಎಸ್. ಜೋಶಿ, ಆರ್.ಎಸ್.ಗರಗದ, ಎಂ.ಬಿ, ಪಾಟೀಲ, ಬಿ.ಬಿ.ಜಡಿಮಠ, ಎಸ್.ಕೆ. ಮಂಗನಾಯ್ಕ, ಟಿ.ವಿ.ದೇಶಪಾಂಡೆ, ನಿರ್ಮಲಾ ಅರಬಳ್ಳಿ, ದುಂಡಯ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಕೆ.ಜಿ.ಚಿಕ್ಕಮಠ ಸ್ವಾಗತಿಸಿದರು. ಕು. ವಷರ್ಾ ಹುದಲಿ ತಂಡದಿಂದ ಪ್ರಾಥರ್ಿಸಿದರು. ಕು. ಸುಮನ ಮಾವಿನಕಟ್ಟಿ, ಮತ್ತು ಮೀನಾಕ್ಷಿ ಮಲಕನ್ನವರ ಪರಿಚಯಿಸಿದರು. ಶಿಕ್ಷಕಿ ಬಿ.ಪಿ.ಧರಣಿ ವಂದಿಸಿದರು.