ಇಂಡಿ 17: ಮಕ್ಕಳ ವಿದ್ಯಾಭ್ಯಾಸದ ಕಡೆ ತಂದೆ ತಾಯಿಯಂದಿರ ಗಮನ ಹರಿಸಬೇಕು, ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ನೀಡಿ ಹಾಗೂ ಒಬ್ಬ ತಾಯಿ ನೂರು ಶಿಕ್ಷಕರ ಸಮಾನ ಹಾಗೂ ತಂದೆ ತಾಯಿ ಕಳೆದುಕೊಂಡ ಶಿಕ್ಷಣ ವಂಚಿತ ಮಕ್ಕಳಿಗೆ ನೆರವಾಗಿ, ಶಿಕ್ಷಣವಂತರಾಗಿ ಮಾಡಲು ಸಾಹಯ ಮಾಡಿ ಎಂದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಶ್ರೀ ಶಾಂತೇಶ್ವರ ಪೂರ್ವ -ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ವಿಜಯಪೂರ ಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾನು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷನಾಗಿ ನೊಂದವರ ಧ್ವನಿಯಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ, ಅದರಂತೆ ಬಿ ಜೆ ಇಂಡಿ ಅವರು ಕೂಡಾ ಖಾಸಗಿ ಶಾಲೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಉಚಿತ ಊಟ ನೀಡುತ್ತಿರುವುದರಿಂದ ಕೆಳವರ್ಗ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಬಾರಿ ಅನುಕೂಲವಾಗಿದೆ ಇವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪೂರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ ಮಕ್ಕಳಿಗೆ ಪಾಲಕರು ಮೊಬೈಲ್ ನಿಂದ ದೂರ ಇಡುವುದು ಒಳ್ಳೆಯದು, ಮಕ್ಕಳು ಅತಿಯಾದ ಮೊಬೈಲ್ ನೋಡುವುದರಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದು ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನೂತನವಾಗಿ ಜಿಓಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಗೀತಾ ಕಲಸಗೊಂಡ, ಪುಷ್ಪಾ ಗಚ್ಚಿನಮಠ , ಹಾಗೂ ಬೆಂಗಳೂರು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೇನೆಕ್ಟ್ ಸದಸ್ಯರಾಗಿ ಆಯ್ಕೆಯಾದ ಸಂತೋಷ ಇಂಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಜಯಪೂರ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ(ಗ್ರೇಡ್- 1 ) ಬಿ ಜೆ ಇಂಡಿ, ಹಾಗೂ ವಿಜಯಪೂರ ನಗರ ಪಾಲಿಕೆಯ ಸದಸ್ಯರಾದ ಮಲ್ಲನಗೌಡ ಪಾಟೀಲ, ಯಲ್ಲಪ್ಪ ಇರಕಲ್, ಎಲ್ ಎಸ್ ಬಿರಾದಾರ, ಸುಜಾತಾ ಹೀರೆಮಠ, ಬೀಮನಗೌಡ ಬಿರಾದಾರ, ತೀಲಕ್ ಇಂಡಿ, ಶಾಂತೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸುಮಂಗಲಾ ಇಂಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಗುರುರಾಜ ಕರಡಿ ಸ್ವಾಗತಿಸಿದರು. ಕುಮಾರಿ ನಾಗಮ್ಮ ಬರಚಿವಾಲೆ ನಿರೂಪಿಸಿದರು.