ರಾಯಬಾಗ 09: ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿರುವ 38ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಕೆಲಸವನ್ನು ಮಠಗಳು ಮಾಡುತ್ತ ಬಂದಿವೆ. ಧರ್ಮದ ಉಪದೇಶಗಳು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯವನ್ನು 12ನೇ ಶತಮಾನದ ಶರಣರು ಮಾಡಿದ್ದಾರೆ. ಎಲ್ಲರಿಗೂ ಶಿಕ್ಷಣ ಮತ್ತು ಜ್ಞಾನ ನೀಡುವುದರ ಮೂಲಕ, ಸರ್ಕಾರ ಮಾಡದ ಕೆಲಸವನ್ನು ಈ ಹಿಂದೆಯೇ ಮಠಗಳು ಮಾಡಿ ತೋರಿಸಿವೆ ಎಂದು ಹೇಳಿದರು.
ಬಾವನ ಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ, ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಭೃಮರಾಂಬಿಕಾ ಶಿವಯೋಗಿ, ಅಮೀತ ಜಾಧವ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಬಸವರಾಜ ಡೋಣವಾಡೆ, ಶಿವಪ್ಪ ನಾಯಿಕ, ಅಪ್ಪಾಸಾಬ ಬ್ಯಾಕೂಡ ಸೇರಿ ಅನೇಕ ಭಕ್ತಾದಿಗಳು ಇದ್ದರು.ನಂತರ ಮಹನ್ಯಾ ಪಾಟೀಲ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.