ಲೋಕದರ್ಶನ ವರದಿ
ಮುಧೋಳ:12:-ಮಾದ್ಯಮಗಳು ಸಮಾಜದ ಓರೆ-ಕೋರೆಗಳನ್ನು ತಿದ್ದಿ,ತೀಡುವ ಕೆಲಸವನ್ನು ದಿಟ್ಟತನದಿಂದ ಮಾಡಬೇಕಾಗಿದೆ.ಸಮಾಜ ಸುಧಾರಣೆಯಾಗಬೇಕಾದರೆ ಮಾದ್ಯಮಗಳ ಪಾತ್ರ ಬಹಳ ಇದೆ.ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಮಾದ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದು ದೂರದರ್ಶನ(ದಕ್ಷಿಣ ವಲಯ)ವಿಶ್ರಾಂತ ಹೆಚ್ಚುವರಿ ಮಹಾನಿದರ್ೇಶಕ ನಾಡೋಜ ಡಾ.ಮಹೇಶಜೋಶಿ ಹೇಳಿದರು.
ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹ ನ ವಿಭಾಗದ ಅಡಿಯಲ್ಲಿ ಶನಿವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾದ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ ಎಂಬ ವಿಷಯದ ಕುರಿತು ಮಾತನಾಡುತ್ತಾ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ಬೆಳೆದಂತೆ ಸುದ್ದಿ ವಾಹಿನಿಗಳು ಸಂಖ್ಯೆಯು ಹೆಚ್ಚುತ್ತಲಿವೆ. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಕೆಲವು ಖಾಸಗಿ ಸುದ್ದಿ ವಾಹಿನಿಗಳು ತಮ್ಮ ತಮ್ಮಲ್ಲಿಯೇ ಸುದ್ದಿಗಳನ್ನು ಬಿತ್ತರಿಸಲು ಪೈಪೋಟಿಗೆ ಇಳಿದಿವೆ. ಸಿನಿ ಸ್ಟಾರ್ಗಳಂತಹ ಮದುವೆ ಸಮಾರಂಭ ಹಾಗೂ ವೈಯಕ್ತಿಕ ಜೀವನದ ಕುರಿತು ಇಡೀ ದಿನದವರೆಗೆ ರೋಚಕ ಸುದ್ದಿಯನ್ನು ಪ್ರಸಾರ ಮಾಡುತ್ತವೆ. ಅದೆ ಮೂಲಭೂತ ಸೌಲಭ್ಯಗಳ ಕುರಿತು ಸಮಾಜದ ಕಣ್ಣು ತೆರೆಸು ವ ಹಾಗೂ ಸಕರ್ಾರವನ್ನು ಎಚ್ಚರಗೊಳಿಸುವಂತಹ ಸುದ್ದಿಗಳಿಗೆ ಮಹತ್ವ ನೀಡದೆ, ತಮ್ಮ ಜವಾಬ್ದಾರಿಯನ್ನು ಮರೆತಿರುವುದು ವಿಷಾದನೀಯ. ವಿಕ್ಷಕರು ರೋಚಕ ಸುದ್ದಿಗೆ ಪ್ರಥಮ ಆದ್ಯತೆ ನೀಡುತ್ತಿರುವದರಿಂದ ಮಾದ್ಯಮಗಳು ಇಂತಹ ಸುದ್ದಿಯನ್ನು ಬಿತ್ತರಿಸುವುದು ಅನಿವಾರ್ಯವಾಗಿದೆ ಎಂದರು.
ದೇಶದ ಬಹುತೇಕ ಗ್ರಾಮಗಳಲ್ಲಿ ಈಗಲೂ ಬಯಲು ಬಹಿದರ್ೆಸೆಗೆ ತೆರುಳುತ್ತಿರುವುದು ಶೋಚನೀಯ ಸಂಗತಿ.ಬಯಲು ಶೌಚಾಲಯ ದಿಂದ ನೂರಾರು ಮಹಿಳೆಯರು ಹಾವನ್ನು ಕಚ್ಚಿಸಿ ಸಾವನಪ್ಪಿರುವ ಘಟನೆಗಳು ಕೇಳಿ ಬಂದಿವೆ,ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಈಗಲೂ ಪೂರ್ಣ ಪ್ರಮಾಣ ಆಹಾರವಿಲ್ಲದೆ ಬಳಲುತ್ತಿದ್ದಾರೆ.ಸಕರ್ಾರ ಸಾಕಷ್ಟು ಯೋಜನೆಗಳನ್ನುಜಾರಿಗೆ ತಂದರೂ ಕೂಡಾ ಅದಿಕಾರಿಗಳು ಸಕರ್ಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಇಂತಹ ಸುದ್ದಿಗಳನ್ನು ಬಿತ್ತರಿಸುವ ಕೆಲಸವನ್ನು ಮಾದ್ಯಮದ ವರು ಮಾಡಬೇಕಾಗಿದೆ. ಇದು ಸಾಮಾಜಿಕ ಜವಾಬ್ದಾರಿಯೂ ಹೌದು ಎಂದರು.
ಪತ್ರಿಕೋದ್ಯಮ ವಿಭಾಗದ ವಿದ್ಯಾಥರ್ಿಗಳು ನಿರಂತರ ಅಧ್ಯಯನಶೀಲರಾಗಬೇಕು. ಜೊತೆಗೆ ಹೊಸ ಹೊಸಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಕುರಿತು ಚಿಂತನ ಮಂತನ ಮಾಡಬೇಕು.ಪ್ರಸ್ತೂತ ವಿದ್ಯಮಾನಗಳ ಕುರಿತು ತಿಳಿದುಕೊಳ್ಳಬೇಕು.ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಸಾಕಷ್ಟು ಉದ್ಯೋಗವಕಾಶಗಳಿವೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಉದ್ಯಮಿ ಗುರುರಾಜ ಕಟ್ಟಿ ಅತಿಥಿ ಸ್ಥಾನವಹಿಸಿ ಮಾತನಾಡಿ ಪತ್ರಕರ್ತರು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾವಣೆ ತರಲು ಸಾದ್ಯ. ಪತ್ರಕರ್ತರು ಮತ್ತು ಸಮೂಹ ಮಾದ್ಯಮಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಪ್ರಭಾರ ಪ್ರಾಚಾರ್ಯ ಪ್ರೊ.ಎ.ಜಿ.ಚಪ್ಪಳಗಾಂವ ಅಧ್ಯಕ್ಷತೆವಹಿಸಿ ಮಾತನಾಡಿದರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ,ಪತ್ರಿಕೋದ್ಯಮದ ವಿದ್ಯಾಥರ್ಿಗಳಿಗೆ ಸೂಕ್ತ ತರಬೇತಿ
ಅವಶ್ಯವಿದ್ದು ಈ ನಿಟ್ಟಿನಲ್ಲಿ ಡಾ.ಮಹೇಶ ಜೋಶಿ ಅವರು ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ ತಮ್ಮ ಅನುಭವವನ್ನುಹಂಚಿಕೊಂಡರು. ಪತ್ರಿಕೋದ್ಯಮ ವಿಭಾಗದ ವಿದ್ಯಾಥರ್ಿ,ವಿದ್ಯಾಥರ್ಿನಿಯರು ಡಾ.ಮಹೇಶ ಜೋಶಿ ಅವರ ಜೊತೆ ಸಂವಾದ ನಡೆಸಿದರು.
ಪ್ರೊ.ವೀರೇಶ ಕಿತ್ತೂರ ನಿರೂಪಿಸಿದರು. ಪ್ರೊ.ಎಂ.ಎಂ.ಹಿರೇಮಠ ವಂದಿಸಿದರು. ಪ್ರೊ.ರೂಪಾ ಫಡತಾರೆ ಪ್ರಾರ್ಥನೆ ಹೇಳಿದರು