ಧಾರವಾಡ:ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ಭಾಷೆಯ ಪಾತ್ರ ಬಹುಮುಖ್ಯ ಎಂದು ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ ಹೇಳಿದರು. ಅವರು ಧಾರವಾಡ ಬಾಸೆಲ್ ಮಿಶನ್ ಬಾಲಕರ ಪ್ರೌಢ ಶಾಲೆಯಲ್ಲಿ ನಡೆದ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಹಾಗೂ ನೀಲನಕಾಶೆ ಕುರಿತು ಭಾಷಾ ಶಿಕ್ಷಕರ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು ಭಾಷೆಯು
ಮಗುವಿನ ಕಲಿಕೆಯ ಸಾಧನವಾಗಿದೆ. ಭಾಷಾ ಸಾಮಥ್ರ್ಯ ಅಭಿವೃದ್ಧಿ ಪಡಿಸಲು ವ್ಯಾಕರಣ ಜ್ಞಾನದ ಅವಶ್ಯಕತೆ ಇದೆ.
ಭಾಷಾ ಕೌಶಲ್ಯಗಳು ಭಾಷಾ ಸಾಮಥ್ರ್ಯಗಳು ಬೆಳೆಯದೇ ಹೋದರೆ ವಿದ್ಯಾರ್ಥಿಯ ವ್ಯಕ್ತಿತ್ವ ಕುಂಠಿತಗೊಳ್ಳುತ್ತದೆ. ಆದ್ದರಿಂದ ಭಾಷಾ ಶಿಕ್ಷಕರಾದವರು ಪರಿಣಾಮಕಾರಿಯಾದ ಬೋಧನೆಯ ಮೂಲಕ ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನದ ಜೊತೆಗೆ ಭಾಷಾ ಕೌಶಲ್ಯಗಳನ್ನು ಮತ್ತು ಭಾಷಾ ಸಾಮಥ್ರ್ಯಗಳನ್ನು ಮನದಟ್ಟು ಮಾಡಿಕೊಡಬೇಕು.
ಹಾಗೂ 10 ನೇ ತರಗತಿ ಪರೀಕ್ಷೆಗೆ ಪೂರ್ವದಲ್ಲಿ ಹಾಜರಾಗುವ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ನಿವಾರಿಸಿ ಅವರನ್ನು ಪರಿಪೂರ್ಣವಾಗಿ ಸಜ್ಜುಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ. ವಿ. ಅಡಿವೇರ, ಇಸಿಓಗಳಾದ ಕೆ.ಎಫ್. ಜಾವೂರ ಶಕುಂತಲಾ ಗಡೆಂಕನಹಳ್ಳಿ, ಕನ್ನಡ ಪ್ರಥಮ ಭಾಷೆ ಸಂಪನ್ಮೂಲ ವ್ಯಕ್ತಿಗಳಾದ ಸಂಗಮೇಶ ಹಡಪದ, ಶಿವಾನಂದ ಕಲ್ಲೂರ, ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿಗಳಾದ ಎನ್.ಎನ್. ಸವಣೂರ, ಮಾರುತಿ ಶಿಂಧೆ, ತೃತೀಯ ಭಾಷೆ ಹಿಂದಿ ಸಂಪನ್ಮೂಲ ವ್ಯಕ್ತಿಗಳಾದ ಅನಿತಾ ಚಿಕ್ಕಮಠ, ವಿಜಯಲಕ್ಷ್ಮಿ ಬೇವಿನಗಿಡದ ಬಾಸೆಲ್ ಮಿಷನ್ ಬಾಲಕರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಎಲ್.ಆರ್. ದೇವದರ, ಬಿ.ಎನ್. ಪರಗೊಂಡ ಹಾಗೂ ಸುಮಾರು 120 ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.