ಮಹಾಲಿಂಗಪುರ04 : ಕಳೆದ 28 ವರ್ಷಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿರುವ ಬನಶಂಕರಿ ಶಾಲೆಯ ಶಿಕ್ಷಣ ಸಂಸ್ಥೆಯ ಕಾಳಜಿಯು ನಿಜವಾದ ಸಮಾಜಸೇವೆಯಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಬನಶಂಕರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಅತ್ಯಮೂಲವಾಗಿದೆ. ಈ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಅಧ್ಯಕ್ಷ ಶೇಖರ ಅಂಗಡಿಯವರ ಕಾರ್ಯ ತತ್ಪರತೆ ಅತ್ಯಂತ ಶ್ಲ್ಯಾಘನೀಯವಾದದ್ದು, ಭವಿಷ್ಯತ್ತಿನಲ್ಲಿ ಶಾಲೆಯು ಇನ್ನೂ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿಯವರು ಮಾತನಾಡಿ ಶಿಕ್ಷಕರು ಶ್ರದ್ಧೆ, ಭಕ್ತಿಯಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕು ಮತ್ತು ಅಷ್ಟೆ ಜವಾಬ್ದಾರಿಯಿಂದ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಿ ಉತ್ತಮ ಜ್ಞಾನ ಹೊಂದಲು ಸಹಕರಿಸಿ ಭವಿಷ್ಯದಲ್ಲಿ ಶಾಲೆಯ ಹಾಗೂ ತಮ್ಮ ಗೌರವ ಹೆಚ್ಚುತ್ತದೆ ಎಂದರು.
ಹುನ್ನೂರಿನ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಯಶವಂತ ಕೊಕ್ಕನ್ನವರ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಪರಿವಾರಗಳಲ್ಲಿ ಹೊಂದಾಣಿಕೆ ಕೊರತೆಯಿಂದ ಶಾಂತಿಗೆ ಭಂಗ ಬಂದಿದ್ದು ಹಿರಿಯ ಕಿರಿಯರಿಗೆ ಕಾಸಿನ ಕಿಮ್ಮತ್ತಿಲ್ಲವಾಗಿದೆ. ಒಟ್ಟಿಗೆ ಬಾಳುವ ಬದಲು ಸೊಸೆ ಒಂದು ಕಡೆ ಅತ್ತೆ, ಮಾವ ಒಂದು ಕಡೆ ಬದುಕುತ್ತಿದ್ದಾರೆ ಇದು ದುರಂತ. ಮಕ್ಕಳನ್ನು ಟಿವಿ, ಮೊಬೈಲ್ ಗಳಿಂದ ದೂರವಿಡಿ, ನಮ್ಮ ಭಾರತೀಯ ಸಂಸ್ಕೃತಿ , ವಿನಯ ಶೀಲತೆಯನ್ನು ಕಲಿಸಿರಿ ಎಂದರು.
ಶಾಲಾ ಸ್ನೇಹ ಸಮ್ಮೇಳನ ಸಲುವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ಸಿದ್ದು ಸವದಿ, ಪ್ರಕಾಶ ತಪಶೆಟ್ಟಿ, ಭಾಜಪ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ಸುರೇಶ ಅಕ್ಕಿವಾಟ, ಕಾನಿಪ ನೂತನ ಅಧ್ಯಕ್ಷ ಎಸ್. ಎಸ್. ಈಶ್ವರಪ್ಪಗೋಳ, ಕಾರ್ಯದಶರ್ಿ ಶಿವಲಿಂಗ ಸಿದ್ನಾಳ ಇವರನ್ನು ಸಂಸ್ಥೆ ಸನ್ಮಾನಿಸಿತು.
ಸಂಸ್ಥೆಯ ಅಧ್ಯಕ್ಷ ಶೇಖರ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಲವಂತಗೌಡ ಪಾಟೀಲ,ಕಾನಿಪ ಜಿಲ್ಲಾ ಉಪಾಧ್ಯಕ್ಷ ಜಯರಾಮ ಶೆಟ್ಟಿ,ಸಂಸ್ಥೆಯ ಕಾರ್ಯದಶರ್ಿ ಎಸ್. ಸಿ. ಹಳ್ಳಿ, ಸದಸ್ಯೆ ಅರುಣಾ ಅಂಗಡಿ, ಸಾವಿತ್ರಿ ತಿರುಕಪಡಿ,ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಐ. ಮಠದ,ಕಲಾವಿದ ದುಂಡಪ್ಪ ಪೂಜಾರಿ ಇದ್ದರು.
ಶಾಲಾ ಮಕ್ಕಳು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ಮುಖ್ಯಾಧ್ಯಾಪಕಿ ಗೀತಾ ಪಾಟೀಲ ಸ್ವಾಗತಿಸಿ, ವರದಿ ವಾಚನ ಮಾಡಿದರು. ಶಿಕ್ಷಕಿ ಎಸ್.ಸಿ.ಗಂಜಾಳಿ ಮಾಲಾರ್ಪಣೆ ನೆರವೇರಿಸಿ, ಶಿಕ್ಷಕಿ ಎ. ಜಿ. ಚಿಚಖಂಡಿ ಬಹುಮಾನ ವಿತರಿಸಿ, ಶಿಕ್ಷಕಿ ಜೆ. ಜಿ. ಸೊನೊನೆ ವಂದಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ ಪಾಲಕರ, ಸಾರ್ವಜನಿಕರ ಮನ ಸೂರೆಗೊಂಡವು.