ಸ್ವಚ್ಛತೆಯಲ್ಲಿ ಪೌರಕಾಮರ್ಿಕರ ಪಾತ್ರ ದೊಡ್ಡದು: ಜಗದೀಶ್ ಹಿರೇಮನಿ

ಬೆಳಗಾವಿ, 21: ಸ್ವಚ್ಛತೆಯಲ್ಲಿ ಪ್ರಮಖ ಪಾತ್ರ ನಿರ್ವಹಿಸುವ ಪೌರಕಾಮರ್ಿಕರಿಗೆ ಸಕರ್ಾರದಿಂದ ಕೊಡ ಮಾಡುವ ಎಲ್ಲ ಸೌಲಭ್ಯಗಳನ್ನು ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತದಿಂದ ಸಮರ್ಪಕವಾಗಿ ಕಲ್ಪಿಸಬೇಕು. ಒಂದು ವೇಳೆ ಪೌರಕಾಮರ್ಿಕರಿಗೆ ಸಿಗಬೇಕಾದ ಯೋಜನೆಗಳು ಸಿಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಅವರು ಹೇಳಿದ್ದಾರೆ. 

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ, ರೈಲ್ವೆ ಇಲಾಖೆ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಸೋಮವಾರ (ಜ.20) ರಂದು ಆಯೋಜನೆ ಮಾಡಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಆ್ಯಕ್ಟ್-2013 ಪ್ರಕಾರ ಕೇಂದ್ರ ಮತ್ತು ರಾಜ್ಯ ಸಕರ್ಾರಗಳಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾಯರ್ಾಗಾರ ಹಾಗೂ ಪೌರಕಾಮರ್ಿಕರ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸಿ ನಮಗೆ ತಿಳಿಸಿದರೆ ಸಕರ್ಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಅವರಿಗೆ ತಲುಪಿಸಲಾಗುವುದು.  ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಸಿಗುವ ಯೋಜನೆಗಳು ನಮ್ಮ ಜನರಿಗೆ ಸಿಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪೌರಕಾಮರ್ಿಕರಿಗೆ ಸಿಗಬೇಕಾದ ಯೋಜನೆಗಳು ಸಿಗದಿದ್ದರೆ ಅಧಿಕಾರಿಗಳ ಮೇಲೆ ಕಾನೂನುಕ್ರಮ ಜರುಗಿಸಲು ಭಾರತ ಸಕರ್ಾರ ಅಧಿಕಾರ ಕೊಟ್ಟಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ವಿಶೇಷವಾಗಿ ಮಹಾನಗರ ಪಾಲಿಕೆಯಲ್ಲಿ ಪೌರಕಾಮರ್ಿಕರಿಗೆ ಸಂಭದಿಸಿದಂತೆ ಅನೇಕ  ಸಮಸ್ಯೆಗಳಿವೆ ಎಂದು ಅವರು ಹೇಳಿದರು. 

ಅನ್ಯಾಯವಾಗಿರುವ ಪೌರ ಕಾಮರ್ಿಕರನ್ನು ಮರಳಿ ಕೆಲಸಕ್ಕೆ ಸೇರಿಸಬೇಕು ಮತ್ತು ನಕಲಿ ದಾಖಲಾತಿ ನೀಡಿ ಮನೆಯಲ್ಲೇ ಕುಳಿತು ಸಂಬಳ ಪಡೆದವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆದೇಶ ನೀಡಲಾಗಿದೆ. ಪೌರಕಾಮರ್ಿಕರಿಗೆ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಮಾಜಿಕ ಭದ್ರತೆ ನೀಡಬೇಕು ಎಂದು ಅವರು ಹೇಳಿದರು. 

ಈ ವೇಳೆ ವಿಧಾನ ಪರಿಷತ್ನ ಸಕರ್ಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಸ್ವಚ್ಚ ಭಾರತ ಎಂಬ ಪ್ರಧಾನಿಯವರ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹತ್ವದ ಪಾತ್ರ ವಹಿಸಿರುವ ಎಲ್ಲಾ ಪೌರಕಾಮರ್ಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ  ಎಂದು ಅವರು ಹೇಳಿದರು. 

ಭಾರತ ಸಕರ್ಾರ ಮತ್ತು ಕನರ್ಾಟಕ ಸಕರ್ಾರ ಸ್ವಚ್ಚ ಭಾರತ ಯೋಜನೆಯನ್ನು ಮೂಲಭೂತವಾಗಿ ಗ್ರಾಮಿಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿ ಅನುಷ್ಠಾನಗೋಳಿಸಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ನಗರವನ್ನು ಸ್ವಚ್ಚ ಗೊಳಿಸಲು ಎಲ್ಲಾ ಪೌರಕಾಮರ್ಿಕರ ಶ್ರಮ ಬಹಳಷ್ಟಿದೆ ಎಂದು ಅವರು ಹೇಳಿದರು. 

ತಮ್ಮ ಮೇಲೆ ಕಾಳಜಿ ವಹಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಸಕರ್ಾರದ ಯೋಜನೆಗಳು ನಿಮಗೆ ತಲುಪಿಸಲು ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ತಮಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಮನಹರ ವಲಿಜೀಭಾಯಿ ಜಾಲಾ, ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ, ಶಾಸಕ ಅನೀಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತರಾದ ಕೆ.ಎಚ್. ಜಗದೀಶ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದರ್ೆಶಕರಾದ ಡಾ. ಉಮಾ ಸಾಲಿಗೌಡರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಪೌರಕಾಮರ್ಿಕರು ಹಾಗೂ ವೇದಿಕೆ ಮೇಲೆ ಇರುವ ಅಧಿಕಾರಿಗಳಿಂದ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಇದರಲ್ಲಿ ಪೌರಕಾಮರ್ಿಕರ ಹಲವು ಸಮಸ್ಯೆಗಳುಗೆ ಸ್ಪಂದಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.