ದುಶ್ಚಟಮುಕ್ತ ಸಮಾಜ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯ: ಸತೀಶ್ ನಾಯ್ಕ

ದುಶ್ಚಟಮುಕ್ತ ಸಮಾಜ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯ: ಸತೀಶ್ ನಾಯ್ಕ  The role of children is very important in building a crime-free society: Satish Naik

ಬೆಳಗಾವಿ 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಖಾಸಬಾಗ ಬೆಳಗಾವಿ. ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ಮತ್ತು ಮಹೇಶ್ ಪೌಂಡೇಶನ್ ಕಣಬರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಉತ್ಕರ್ಷ ಪ್ರೌಢಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  

ಸತೀಶ್ ನಾಯ್ಕ್‌ ಜಿಲ್ಲಾ ನಿರ್ದೇಶಕರು ಕ್ಷೆ.ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್‌ ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಿಸುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರೀತಿಯ ಕಾರ್ಯಕ್ರಮವೇ ಜನಜಾಗೃತಿ ಇದರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಕರ್ನಾಟಕದಾದ್ಯಂತ ಪ್ರೌಢಶಾಲಾ ಮಕ್ಕಳಿಗೆ ದುಶ್ಚಟದಿಂದ ಆಗುವ ದಾರಿದ್ರತೆಗಳ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶವಾಗಿರುತ್ತದೆ ಎಂದರು. ಮತ್ತು ಸಮಾಜದಲ್ಲಿನ ಆದರ್ಶ ವ್ಯಕ್ತಿಗಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಮಾಹಿತಿ ನೀಡಿದರು. 

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್ ಸೊಪ್ಪಿಮಠ ಅಧ್ಯಕ್ಷರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ಇವರು ಇಂದಿನ ಯುವ ಪೀಳಿಗೆ ದುರ್ಜನರ ಸಹವಾಸದಿಂದ ದುಶ್ಚಟಗಳನ್ನು ಮೈಗೂಡಿಸಿಕೊಳ್ಳುತ್ತಿದ್ದು ಮುಂದೆ ಸಮಾಜದಲ್ಲಿ ಬಾಳಿ ಬದುಕಬೇಕಾಗಿದ್ದ ಯುವಜನತೆ ಸಂಕಷ್ಟ ಎದುರಿಸುತ್ತಿದೆ. ಮಕ್ಕಳು ಉತ್ತಮವಾದ ಸಂಸ್ಕಾರ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕಾಗಿದ್ದು ಅವಶ್ಯಕ ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು 

ಅಧ್ಯಕ್ಷತೆಯನ್ನು ಮಹೇಶ್ ಜಾದವ್ ಸಂಸ್ಥಾಪಕರು ಮಹೇಶ್ ಫೌಂಡೇಶನ್ ಕಣಬರ್ಗಿ ಇವರು ವಹಿಸಿದ್ದರು. ಭಾವಕಣ್ಣ ಭರಮ ಬಂಗ್ಯಾಗೋಳ ವಾಲ್ಮೀಕಿ ಪ್ರಶಸ್ತಿ ವಿಜೇತರು ಬೆಳಗಾವಿ, ಸುಭಾಷ್ ಪಿ.ಸಿ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಸಬಾಗ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. 

ಅಧ್ಯಾಪಕ ಮಾಲಾಶ್ರೀ ಅವರು ಸ್ವಾಗತಿಸಿ, ವಲಯ ಮೇಲ್ವಿಚಾರಕ ಭರತ್ ಉಳ್ಳೂರು ನಿರೂಪಿಸಿ ಧನ್ಯವಾದ ಮಾಡಿದರು.