ರೋಗ ನಿಯಂತ್ರಣಕ್ಕೆ ಮಕ್ಕಳ ಪಾತ್ರ ಬಹುಮುಖ್ಯ

ಮುಂಡರಗಿ 12: ಹಳ್ಳಿಗುಡಿ ಗ್ರಾಮದಲ್ಲಿ ಕೀಟಜನ್ಯ ರೋಗಗಳ ಕುರಿತು ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ದಿ. 11ರಂದು ಹಮ್ಮಿಕೊಳ್ಳಲಾಯ್ತು.

ಶಾಲಾ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಿದರೆ ಇಡೀ ಗ್ರಾಮವೇ ಆರೋಗ್ಯದಾಯಕವಾಗಿರುತ್ತದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪಾಲಕರು ಹಾಗೂ ಶಾಲಾ ಮಕ್ಕಳ ಪಾಲುದಾರಿಕೆ ಬಹುಮುಖ್ಯ. 2025ರೊಳಗೆ ಮಲೇರಿಯಾ ಮುಕ್ತಭಾರತ ಮಾಡುವಲ್ಲಿ ಸಾರ್ವಜನಿಕರು, ವಿದ್ಯಾಥರ್ಿಗಳು, ಯುವಕರು ಸ್ವಯಂ ಪ್ರೇರಿತರಾಗಿ ಕೈಜೋಡಿಸಬೇಕು  ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೊದಲಬಾರಿಗೆ  ಮಲೇರಿಯಾ ನಿಮರ್ೂಲನೆ ಆಂದೋಲನವನ್ನು  ಭಾರತದಲ್ಲಿ 2016 ಹಾಗೂ ರಾಜ್ಯದಲ್ಲಿ 2017ರಿಂದ ಆಂದೋಲನವನ್ನು ಪ್ರಾರಂಭಿಸಲಾಯ್ತು. ಅದರಂತೆ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಅದರಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮವೂ ಒಂದು ಎಂದರು. ಯಾವುದೇ ಜ್ವರವಿರಲಿ ನಿಲ್ರ್ಯಕ್ಷ ತೋರದೇ ರಕ್ತ ಪರೀಕ್ಷೆ ಮಾಡಿಸಬೇಕು, ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯ, ಮೆದುಳು ಜ್ವರ, ಆನೆಕಾಲು ರೋಗ, ಹರಡುವದು ವಧವಿಧವಾದ ಸೊಳ್ಳೆಯೊಂದರಿಂದಲೇ ಎನ್ನುವದು ಸೋಜಿಗ, ಮಲೇರಿಯಾ ಹರಡಲು ಹೆಣ್ಣು ಅನಾಫಿಲಿಶ್ ಜಾತಿಯ ಸೊಳ್ಳೆ ಕಾರಣವಾದರೆ, ಡೆಂಗ್ಯೂ ಮತ್ತು ಚಿಕುನ್ ಗುನ್ಯ ಹರಡಲು ಈಡಿಸ್ ಈಜಿಪ್ಟೈ ಎಂಬ ಜಾತಿಯ ಸೊಳ್ಳೆ ಕಾರಣವಾಗುತ್ತದೆ, ಮೆದುಳು ಜ್ವರ ಬರಲು ಕ್ಯೂಲೆಕ್ಸ್ ಎಂಬ ಜಾತಿಯ ಸೊಳ್ಳೆ ಕಾರಣವಾದರೆ, ಅದೇ ರೀತಿ ಫೈಲೇರಿಯಾ ಸೋಂಕುಳ್ಳ ಕ್ಯೂಲೆಕ್ಸ್ ಸೊಳ್ಳೆಗಳು ಆನೆಕಾಲು ರೋಗ ಹರಡಲು ಕಾರಣವಾಗುತ್ತದೆ ಎಂದು ಜಿಲ್ಲಾ ಎನ್.ವ್ಹಿ.ಬಿ.ಡಿ.ಸಿ.ಪಿ. ಕಾರ್ಯಕ್ರಮದ ಆರೋಗ್ಯ ಸಹಾಯಕರಾದ ವಾಯ್. ವಾಯ್. ಹಕ್ಕಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಹೇಳಿದರು. 

ಈ ಎಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣವು ಸ್ವಚ್ಛತಾ ಕ್ರಮಗನ್ನು ಅನುಸರಿಸುವದರ ಮುಖಾಂತರ ತಡೆಗಟ್ಟಬಹುದು, ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಒಂದುವೇಳೆ ಕೊಳಕು ನೀರು ನಿಂತಿದ್ದರೆ ಅದಕ್ಕೆ ವಾಹನಗಳ ಸುಟ್ಟ ಆಯಿಲ್ ಹಾಕಿದರೆ ಲಾವರ್ಾಗಳಿಗೆ(ಸೊಳ್ಳೆಯ ಮರಿಗಳಿಗೆ) ಗಾಳಿಯು ಸಿಗದಂತಾಗಿ ಸಾಯುತ್ತವೆ. ಹಾಗೂ ತೆಂಗಿನ ಚಿಪ್ಪು, ಟೈಯರ್ ಗಳನ್ನು, ಒಡೆದ ಬಾಟಲ್ಗಳನ್ನು ಹಾಗೂ ನೀರು ನಿಲ್ಲುವಂತಹ ಯಾವುದೇ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದರು. ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ನಾಗರಿಕರಿಗೊಂದು ಸವಾಲು ಎಂಬ ಕಾರ್ಯಕ್ರಮದಡಿಯಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣದಡಿಯಲ್ಲಿ ಸಾರ್ವಜನಿಕರ ಪಾತ್ರವನ್ನು ತಿಳಿಸಿಕೊಡಲು ನಮ್ಮ ಎಲ್ಲಾ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕತರ್ೆಯರು ಮನೆ ಬಾಗಿಲಿಗೆ ತೆರಳಿ ಕೀಟಜನ್ಯ ರೋಗಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ಸಹಾಯಕರಾದ ಎಮ್. ಎಫ್. ಕಲಕಂಬಿಯವರು ತಿಳಿಸಿದರು. ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣೆಯನ್ನು ಎಲ್ಲಾ ಗಣ್ಯರು ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಎನ್.ವ್ಹಿ.ಬಿ.ಡಿ.ಸಿ.ಪಿ. ಕಾರ್ಯಕ್ರಮದ ಆರೋಗ್ಯ ಸಹಾಯಕರಾದ ವಾಯ್. ವಾಯ್. ಹಕ್ಕಿಯವರು, ಹಿರಿಯ ಆರೋಗ್ಯ ಸಹಾಯಕರಾದ ಎಮ್. ಎಫ್. ಕಲಕಂಬಿಯವರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಜಿಗಳೂರು,  ಕಿರಿಯ ಮಹಿಳಾ ಆರೋಗ್ಯಸಹಾಯಕಿಯರಾದ ಎಸ್. ಜೆ. ಸೇಲಂ, ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಎಸ್. ವ್ಹಿ. ಪತ್ತಾರ, ಶಾಲಾ ಶಿಕ್ಷಕರು, ಆಶಾ ಕಾರ್ಯಕತರ್ೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.