ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಸ್ಕೌಟ ಗೈಡ್ಸ ಪಾತ್ರ ಹಿರಿಯದು

ಲೋಕದರ್ಶನ ವರದಿ

ಯಲ್ಲಾಪುರ,21: ಸ್ಕೌಟ ಗೈಡ್ಸ ವಿದ್ಯಾಥರ್ಿಗಳಲ್ಲಿ ಶಿಸ್ತು, ನಾಯಕತ್ವ ಗುಣಗಳ ಜೊತೆಗೆ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸುವುದರ ಮೂಲಕ ಮಕ್ಕಳವ್ಯಕ್ತಿತ್ವ ವಿಕಾಸನ  ಗೊಳ್ಳುತ್ತದೆ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು. ಅವರು ಪಟ್ಟಣದ ಮೊರಾಜರ್ಿ ವಸತಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ ಹಾಗೂ ಭಾರತ ಸ್ಕೌಟ ಗೈಡ್ಸ  ಸ್ಥಳೀಯಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾಲ ಸ್ಕೌಟ ಗೈಡ್ಸ ನಾಯಕ ನಾಯಕಿಯರ ತರಬೇತಿ ಹಾಗೂ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಪಠ್ಯ ಕ್ರಮಗಳ ಕುರಿತು ತರಬೇತಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಮಾಜಿಕ ಪ್ರಜ್ಞೆ, ಸೇವಾ ಮನೋಭಾವ ಬೆಳೆಸಲು ಪ್ರತಿಯೊಬ್ಬರು ಸ್ಕೌಟ ಗೈಡ್ಸ ಚಳುವಳಿಯಲ್ಲಿ ಭಾಗವಹಿಸಬೇಕೆಂದರು.

ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ ಸ್ಕೌಟ ಗೈಡ್ಸ ತರಬೇತಿಯಿಂದ ಸ್ವಾವಲಂಬನೆ ಜೀವನ ಹಾಗೂ ಪ್ರಕೃತಿ ಸಂರಕ್ಷಣೆಯ ಗುಣಗಳನ್ನು ಹಾಗೂ ಮೌಲ್ಯಗಳ ವೃದ್ದಿಯಿಂದ ಸಂಸ್ಕಾರಯುತ ಜೀವನ ಶೈಲಿ ಆಳವಡಿಸಿಕೊಳ್ಳಲು ಸಾಧ್ಯ ಎಂದರು.ಭಾರತ ಸ್ಕೌಟ ಗೈಡ್ಸ ಅಧ್ಯಕ್ಷ ನಂದನ ಬಾಳಗಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ , ರಾಜ್ಯ ಸಹಾಯಕ ತರಬೇತಿ ಆಯುಕ್ತ ಕರಿಸಿದ್ದಪ್ಪ ,ಮೊರಾಜರ್ಿ ವಸತಿ ಶಾಲೆ ಶಿಕ್ಷಕ ಶಿವರಾಮ ಭಾಗ್ವತ ಉಪಸ್ಥಿತರಿದ್ದರು. 

  ಪ್ರಧಾನ ಕಾರ್ಯದಶರ್ಿ ಸುಧಾಕರ ನಾಯಕ ತರಬೇತಿಯ ರೂಪುರೇಷೆಗಳನ್ನು ತಿಳಿಸಿದರು.ಶಿಕ್ಷಕಿ   ಸುಜ್ಯೋತಿ ಹಳ್ಳೇರ ಸ್ವಾಗತಿಸಿದರು, ಮನೋಹರ ನಾಯಕ ನಿರ್ವಹಿಸಿದರು.  ಶಿಕ್ಷಕಿ ಖೈರುನ ಶೇಖ ವಂದಿಸಿದರು.ತಾಲೂಕಿನ ಎಲ್ಲಾ ಶಾಲೆಯ 200 ಕ್ಕಿಂತ ಅಧಿಕ ವಿದ್ಯಾಥರ್ಿಗಳು ಹಾಗೂ 16 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.