ಬೆಂಗಳೂರು.10 ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅತಿದೊಡ್ಡ ಫಾಸ್ಟ್ ಟ್ಯಾಗ್ ವಿತರಕ ಎನ್ನುವ ಹೆಗ್ಗಳಿಕೆಗೆ
ಪಾತ್ರವಾಗಿದೆ. ಸುಮಾರು 1.85 ದಶಲಕ್ಷ ವಾಹನಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಫಾಸ್ಟ್ ಟ್ಯಾಗ್
ಅನ್ನು ಬಳಸುತ್ತಿವೆ.ಡಿಸೆಂಬರ್ ಅಂತ್ಯಕ್ಕೆ ಸಂಸ್ಥೆಯು ಹೆಚ್ಚುವರಿ 3 ದಶಲಕ್ಷ
ಇಂತಹ ಫಾಸ್ಟ್ ಟ್ಯಾಗ್ ಅನ್ನು ವಿತರಿಸುವ ಗುರಿ ಹೊಂದಿದೆ. ಭಾರತದಲ್ಲಿ ವಿತರಿಸಲ್ಪಟ್ಟ ಒಟ್ಟು ಫಾಸ್ಟ್
ಟ್ಯಾಗ್ ಪ್ರಮಾಣದಲ್ಲಿ ಶೇಕಡ 20 ರಷ್ಟು ಫಾಸ್ಟ್ ಟ್ಯಾಗ್ ಅನ್ನು ಕೇವಲ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್
ಈ ವರ್ಷದಲ್ಲಿ ವಿತರಿಸಿದೆ.
ಸುಮಾರು 110 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಪೇಟಿಎಂ
ಪೇಮೆಂಟ್ಸ್ ಬ್ಯಾಂಕ್ ಸೇವೆ ಲಭ್ಯವಿದ್ದು, ವೇಗವಾಗಿ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ವಾಹನವನ್ನು
ಖರೀದಿ ಮಾಡಿದ ಸಂದರ್ಭದಲ್ಲೇ ಪ್ರೀ-ಫಿಟ್ಟೆಡ್ ಫಾಸ್ಟ್ ಟ್ಯಾಗ್ ಅಳವಡಿಕೆಗಾಗಿ ಮಾರುತಿ ಸುಜುಕಿ, ಹುಂಡೈ
ಮೋಟರ್ ಇಂಡಿಯಾ, ಹೋಂಡಾ ಕಾರ್ಸ್ ಇಂಡಿಯಾ, ಕಿಯಾ ಮೋಟರ್ಸ್ ಇಂಡಿಯಾ, ಎಂಜಿ ಮೋಟರ್ಸ್ ಇಂಡಿಯಾ ಸೇರಿದಂತೆ
ಮತ್ತಿತರ ಮುಂಚೂಣಿಯಲ್ಲಿರುವ ಆಟೋಮೊಬೈಲ್ ಸಂಸ್ಥೆಗಳ ಜೊತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಒಪ್ಪಂದ
ಮಾಡಿಕೊಂಡಿದೆ.
"ಡಿಸೆಂಬರ್ 15 ರ ಒಳಗೆ ಎಲ್ಲಾ ವಾಹನಗಳು ಫಾಸ್ಟ್ ಟ್ಯಾಗ್ ಹೊಂದಬೇಕು ಎನ್ನುವ ಸರ್ಕಾರದ ಉದ್ದೇಶಕ್ಕೆ ಕೈಜೋಡಿಸುವ ಪ್ರಯತ್ನ ನಮ್ಮದು. ಇದಕ್ಕಾಗಿ ಹೆಚ್ಚೆಚ್ಚು ಟೋಲ್ ಪ್ಲಾಜಾಗಳಲ್ಲಿ ನಾವು ತಲುಪುತ್ತಿದ್ದೇವೆ" ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.