ಲೋಕದರ್ಶನ ವರದಿ
ಸೇವಾ ತತ್ವದ ಮೂಲಕ ಸಾರ್ವಜನಿಕರ ಸೇವೆ ಮಾಡಲು ಎನ್‌ಜಿಒ ಗಳ ಪಾತ್ರ ಬಹುಮುಖ್ಯವಾಗಿದೆ
ಹಾವೇರಿ 28 :ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ನಿಸ್ವಾರ್ಥ ಸೇವೆಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ(ಫೆವಾರ್ಡ್-ಕೆ) ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ಹೆಚ್ ಎಫ್ ಅಕ್ಕಿ ಹೇಳಿದರು.
ಜಿಲ್ಲೆಯ ಎನ್‌ಹೆಚ್-4 ರಸ್ತೆಯ ಸಮೀಪವಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಆಯೋಜಿಸಿದ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸೇವಾ ತತ್ವದ ಮೂಲಕ ಸಾರ್ವಜನಿಕರ ಸೇವೆ ಮಾಡಲು ಎನ್‌ಜಿಒ ಗಳ ಪಾತ್ರ ಬಹುಮುಖ್ಯವಾಗಿದೆ.ಸಮಾಜದಲ್ಲಿ ಬದಲಾವಣೆಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಸ್ವಯಂ ಸೇವಾ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿರುವುದು ಹೆಮ್ಮೆಯಾಗುತ್ತಿದೆ.ಇಂತಹ ಕಾರ್ಯದಲ್ಲಿ ತೊಡಗಿದ ಎಲ್ಲಾ ಎನ್ ಜಿ ಒ ಗಳಿಗೆ ಅಭಿನಂದನೆಗಳು ಎಂದು ಎನ್‌ಜಿಒ ಗಳ ಕಾರ್ಯಗಳ ಬಗ್ಗೆ ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಗೀತಾ ಪಾಟೀಲ ಮಾತನಾಡಿ ಜನರಿಗೆ ಕಾನೂನು ಪಾಲನೆಯ ಮಾಡಲು ಎನ್ ಜಿ ಒ ಗಳು ಜಾಗೃತಿ ಮೂಡಿಸಲು ಹೆಚ್ಚು ಶ್ರಮವಹಿಸುತ್ತಿವೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶವನ್ನು ಎನ್ ಜಿ ಒ ಗಳು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು.
ಪ್ರಾಸ್ತಾವಿಕವಾಗಿ ಪವಾರ್ಡ್ ಹೆಚ್ ಕಾರ್ಯದರ್ಶಿ ಎಸ್ ಹೆಚ್ ಮಜೀದ ಮಾತನಾಡಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸಗಳನ್ನು ಎನ್‌ಜಿಒ ಗಳು ಮಾಡುತ್ತಿವೆ. ಇಂದಿನ ದಿನ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಮಾಡುತ್ತಿದ್ದು,ನಮಗೆ ನಾವು ನಮ್ಮ ಸೇವೆ-ಸಾಧನೆಗಳ ಅವಲೋಕನ ಮಾಡಿಕೊಂಡು ಹೆಮ್ಮೆಯ ಪಡುವ ದಿನವಾಗಿದೆ.ಪರಿಸರ ಸ್ನೇಹಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಇದೇ ಅವಧಿಯಲ್ಲಿ ಎನ್‌ಜಿಒ ಮುಖ್ಯಸ್ಥರು ತಮ್ಮ ಸಂಸ್ಥೆಗಳ ಸೇವೆ, ಕಾರ್ಯ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಎನ್‌ಜಿಒ ಗಳ ಮುಖಂಡರಾದ ಎಸ್ ಡಿ ಬಳಿಗಾರ,ಕೆ ಎಸ್ ನಾಗರಾಜ,ಮಂಜುನಾಥ ಸಣ್ಣಿಂಗಣ್ಣನವರ,ಬಿ ಜಿ ಸಾಲಿ,ಮುತ್ತುರಾಜ ಎಮ್, ನಿಂಗಪ್ಪ ಆರೇರ,ಶೋಭಾ ದೊಡ್ಡಮನಿ,ಶ್ರೀದೇವಿ ಅರ್ಕಚಾರಿ, ಜ್ಯೋತಿ ಹೆಚ್ ಕೆ,ಸುಶೀಲಾ ಪಾಟೀಲ ಸೇರಿದಂತೆ ಅನೇಕರಿದ್ದರು.