ಲೋಕದರ್ಶನ ವರದಿ
ಶಿರಹಟ್ಟಿ 12: ಈಗಿನ ಬಸವ ಕಲ್ಯಾಣದಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯಾಗಿ ಅಳಿಯ ಬಿಜ್ಜಳನ ದಾಳಿಯನ್ನೆದುರಿಸಿ ಶರಣ ಸಂತಾನ ಉಳಿಸಿ ಶರಣ ತತ್ವ ಕಟ್ಟುವಲ್ಲಿ ಮಡಿವಾಳ ಮಾಚಯ್ಯನವರು ಕಾರಣವಾಗಿದ್ದರಿಂದ ಅವರಿಗೆ ಅಜೇಯವೀರನೆಂದು ಅನ್ವರ್ಥಕ ನಾಮ ಬಂದಿದೆ ಎಂದು ಸಾಹಿತಿ ಮತ್ತು ಅಂಕಣ ಬರಹಗಾರರಾದ ಭಾಗ್ಯಲಕ್ಷ್ಮಿ ಕುಬೇರ ಕರೆ ನೀಡಿದರು.
ಅವರು ಮಲ್ಲೇಶಪ್ಪ ಬಸಲಿಂಗಪ್ಪ ಅಕ್ಕಿ ಅವರ ಅಧ್ಯಕ್ಷತೆಯಲ್ಲಿ ಅವರ ಮಹಾಮನೆಯಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಶಿರಹಟ್ಟಿ ಅವರ ವತಿಯಿಂದ ಶರಣ ಪೌರ್ಣಿಮೆ 54ರ ಕಾರ್ಯಕ್ರಮದಡಿ ಜರುಗಿದ ಅಜೇಯವೀರ ಮಡಿವಾಳ ಮಾಚಯ್ಯ ಎಂಬ ಉಪನ್ಯಾಸವನ್ನು ಮಾಡಿದರು.
ಮಡಿವಾಳ ಮಾಚಯ್ಯ ವಿಜಾಪೂರ ಜಿಲ್ಲೆಯ ದೇಔರ ಹಿಪ್ಪರಗಿಯವರಾಗಿದ್ದು, ಕಲಿದೇವರ ದೇವಾ ಎಂಬ ಕಾವ್ಯ ನಾಮದಿಂದ 350ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಇವರ ಶ್ರೇಷ್ಠ ದೇವಜ್ಞಾನಿಯಾಗಿದ್ದ ಎಂಬುದಕ್ಕೆ ವಾಯುಗುಣ ಸರ್ಪ ಬಲ್ಲದು, ಮಧುರ ಗುಣ ಇರುವೆ ಬಲ್ಲದು, ಗೋತ್ರದ ಗುಣ ಕಾಗೆ ಬಲ್ಲದು, ಮನುಷ್ಯ ಜನ್ಮದಲಿ ಬಂದು ಶಿವಜ್ಞಾನವರಿಯದಿದ್ದರೆ ಕಾಗೆ ಕೋಳಿಗಳಿಗಿಂತ ಕರಕಷ್ಠ ಕಲಿದೇವರದೇವಾ ಎಂಬ ವಚನವೇ ಸಾಕ್ಷಿ ಎಂದು ಹೇಳಿದರು.
ಅಭಾಶಸಾಪ ತಾಲೂಕಾಧ್ಯಕ್ಷ ಎಫ್.ಎಸ್ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, 12ನೇ ಶತಮಾನದ ಶರಣರ ಹಾಗೂ ಅವರ ವಚನ ಸಾಹಿತ್ಯದ ರಕ್ಷಣೆಯ ಹೊಣೆಯನ್ನು ಹೊತ್ತು ಬಿಜ್ಜಳನ ಅಳೀಯನೊಂದಿಗೆ ಬಂದ ಸೈನ್ಯದೊಂದಿಗೆ ಯುದ್ಧ ಮಾಡಿ ಬೈಲಹೊಂಗಲದ ಹತ್ತಿರವಿರುವ ಮುರಗೋಡದ ಹತ್ತಿರ ಸೋಲುತ್ತಾನೆ. ಮಡಿವಳ ಮಾಚಯ್ಯ ಎಷ್ಟು ಮಹಾನ್ ವ್ಯಕ್ತಿಯಾಗಿದ್ದನೆಂದರೆ, ಭಕ್ತಿ ಭಂಡಾರಿ ಬಸವಣ್ಣ ಮಾಚಯ್ಯನ ಬಗ್ಗೆ ಎನ್ನ ಕಾಯವ, ಎನ್ನ ಮನವ ಶುದ್ಧ ಮಾಡಿದಾತ ಮಡಿವಾಳ ಎನ್ನ ಅಂತರಂಗ ಬೆಳಗಿದಾತ ಮಾಡಿವಾಳ ಕೂಡಲ ಸಂಗಮದೇವಾ ಎನ್ನ ನಿಮಗೆ ಯೋಗ್ಯನಾ ಮಾಡಿದಾತ ಮಡಿವಾಳ ಎಂದು ಹಾಡಿ ಹೊಗಳಿದ್ದಾರೆ.
ಈ ಸಂದರ್ಭದಲ್ಲಿ ವಿನಾಯಕ ಹಣಗಿ, ಕುಮಾರಿ ಚೈತ್ರಾ ಸಂಕನಗೌಡ್ರ, ದೀಪಾ ಸಂಕನಗೌಡ್ರ, ನೀಲಮ್ಮ ನಾಶರ್ಿ ವಚನ ಗಾಯನ ನಡೆಸಿಕೊಟ್ಟರು. ಬಸವರಾಜ ಭೋರಶೆಟ್ಟರ ಸ್ವಾಗತಿಸಿದರು, ಶಾರದಾ ಅಕ್ಕಿ ವಂದಿಸಿದರು, ಎಚ್ಎಂ ಪಲ್ಲೇದ ನಿರೂಪಿಸಿದರು.
ಪಟ್ಟಣ ಪಂಚಾಯತಿ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಬಿಎಸ್ ಹಿರೇಮಠ, ಎಚ್ಎಂ ದೇವಗಿರಿ, ಎಂ.ಕೆ ಲಮಾಣಿ, ಎಂ.ಎ ಮಕಾನದಾರ, ವೆಂಕಟೇಶ ಅರ್ಕಸಾಲಿ, ಚಂದ್ರು ಮುಧೋಳಕರ, ಬಸಯ್ಯ ಮಠಪತಿ, ಬಸವರಾಜ ಅಕ್ಕಿ, ಚಂದ್ರಕಾಂತ ಕರಡಿ, ಪರಶುರಾಮ ಸರ್ಜಾಪೂರ, ಪ್ರವೀಣ ಹೊಸೂರ, ಸುನಂದಾ ಸಂಕನಗೌಡ್ರ, ಶಾಂತಾ ಹೊಸೂರ ಇನ್ನೂ ಅನೇಕರು ಉಪಸ್ಥಿತರಿದ್ದರು.