ಕಲ್ಯಾಣದ ಶರಣರ ಕ್ರಾಂತಿ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖ: ಸಚಿವ ಸಿ.ಸಿ.ಪಾಟೀಲ

ಗದಗ 21: ವೃತ್ತಿಯಲ್ಲಿ ಅಂಬಿಗರಾಗಿದ್ದ ಚೌಡಯ್ಯನವರು ಹುಟ್ಟು ಹಾಕಿ ಭವಸಾಗರ ದಾಟಿಸುವ ಕೌಶಲ್ಯ ಹೊಂದಿದ್ದರು ಎಂದು ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ  ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.

ಗದಗ ಬೆಟಗೇರಿ ಶ್ರೀ ತೋಂಟದಾರ್ಯ  ಕಲ್ಯಾಣ ಮಂಟಪದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ ನಿಜಶರಣ ಅಂಬಿಗರ ಚೌಡಯ್ಯನವರ 900 ನೇ ಜಯಂತಿಯನ್ನು  ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಅಪರ್ಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನವರ 275 ವಚನಗಳಲ್ಲಿ ಸಮಾಜದ ತಾರತಮ್ಯ, ವರ್ಗವೈಷಮ್ಯ ಕುರಿತ ನಿಧರ್ಾಕ್ಷಿಣ್ಯ, ಹರಿತವಾದ ಖಂಡನೆಯನ್ನು ನಾವು ಕಾಣುತ್ತೇವೆ. ಕಟ್ಟಿದ ಲಿಂಗ ಬಿಟ್ಟ ಬೆಟ್ಟದ ಲಿಂಗಕ್ಕೆ ಶರಣಾಗುವ ಢಾಂಬಿಕತೆ ಬೇಡವೆನ್ನುವ ಅವರು ಇಷ್ಟಲಿಂಗೋಪಾಸನೆ ದೇಹವನ್ನು ದೇವಾಲಯವಾಗಿಸಿಕೊಳ್ಳುವ ಭೋದನೆಗಳಿವೆ. ಅಂಬಿಗರ ಚೌಡಯ್ಯನವರು ಶರಣ ಶ್ರಮ ಸಂಸ್ಕೃತಿಯ ಅಗ್ರಗಣ್ಯರಾಗಿದ್ದು ಇತರ ಶರಣರಿಗಿಂತ ಭಿನ್ನವಾಗಿ ಕ್ರಾಂತಿಕಾರಿ ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.  ಸಮಗ್ರ ಮಾನವಕುಲದ ಒಳಿತಿಗಾಗಿ  ಗಂಧದ ಕೊರಡಿನಂತೆ ಜೀವ ತೇಯ್ದು ಅನೇಕ ಮಹನೀಯರ ಜಯಂತಿಗಳು ಬಹುತೇಕವಾಗಿ ಸಮುದಾಯಗಳಿಗೆ ಸೀಮಿತವಾಗುತ್ತಿರುವುದಕ್ಕೆ ಸಿ.ಸಿ ಪಾಟೀಲ ವಿಷಾದ ವ್ಯಕ್ತಪಡಿಸಿದರು.

ಗದಗ ಬೆಟಗೇರಿ ನಗರದಲ್ಲಿ 10ಗುಂಟೆ ಜಾಗೆಯಲ್ಲಿ ನಿಮರ್ಾಣವಾಗುವ ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ ಶಾಸಕ ಎಚ್.ಕೆ. ಪಾಟೀಲ ಅವರು ಶಾಸಕರ ಅನುದಾನದಿಂದ ಐದು ಲಕ್ಷ ರೂ ನೀಡಿದ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು  ಅಂಬಿಗರ ಚೌಡಯ್ಯ ಸೇವಾ ಸಮಿತಿ  ಅಧ್ಯಕ್ಷ ಬಿ.ಎನ್.ಯರನಾಳ ಅವರಿಗೆ ಇದೇ ಸಂದರ್ಭದಲ್ಲಿ ನೀಡಿದರು. 

ಜೆ.ಟಿ.ಕೋಟೆ ಪ್ರೌಢ ಶಾಲೆಯ ಶಿಕ್ಷಕಿಯಾದ ಪಿ.ವಿ.ಗೊಣೇಣ್ಣವರ ಅವರು ಅಂಬಿಗರ ಚೌಡಯ್ಯನವರ ಜೀವನ ಮತ್ತು ಸಂದೇಶ ಕುರಿತು  ಉಪನ್ಯಾಸ ನೀಡಿ ಪ್ರತಿಯೊಬ್ಬರೂ ಲಿಂಗ, ತಾರತಮ್ಯ ಮಾಡದೇ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಸಮಾಜದ ಸೇವೆಯನ್ನ ಮಾಡಬೇಕು. ಮನುಷ್ಯನು ಹುಟ್ಟುವಾಗಲೂ ಏನನ್ನು ತರುವುದಿಲ್ಲ ಹಾಗೆಯೇ ಹೋಗುವಾಗಲೂ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಇದ್ದಷ್ಟು ದಿನ ಒಗ್ಗಟ್ಟಾಗಿ ಬದುಕಬೇಕು. ಸಮಾಜದಲ್ಲಿ ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು. ಮತ್ತು ಸಮಾಜದಲ್ಲಿ ಬಾಳಿಬದುಕಿದ ಸಾಕಷ್ಟು ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರು ಅವರ ವಚನಗಳನ್ನು ನಾವೂ ಓದಿ ಅಥರ್ೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೆಯೇ ಪ್ರಕೃತಿಯಲ್ಲಿ ಬೆಳೆದಿರುವ ಹೂ ದೇವರ ಮುಡಿಗೆ ಸೇರಿದರೆ. ಅದರಂತೆ ಬೆಳೆದ ಬಾಳೆಹಣ್ಣು ದೇವರ ಪ್ರಸಾದವಾಗಿ ಎಲ್ಲರಿಗೂ ದೊರಕುತ್ತದೆ ಹಾಗೆಯೇ ನಾವು ಎಲ್ಲರಿಗೂ ಒಳಿತನ್ನ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಡಾ. ಆನಂದ.ಕೆ, ಅಪರ ಜಿಲ್ಲಾಧಿಕಾರಿ ಎಂ. ಸತೀಶ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ.      ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ಕಾರ್ಯದಶರ್ಿ  ಜೆ.ಬಿ. ಗಾರವಾಡ, ಗುರು ತಿರ್ಲಾಪುರ, ಸಂಗಮೇಶ ಹಾದಿಮನಿ, ಪ್ರವೀಣ ನೀಲಣ್ಣವರ, ಮಲ್ಲು ಬಾರಕೇರ, ಮುತ್ತು ಅಂಬಿಗೇರ, ರಾಮು ಇರಕಲ್, ಮಂಜುನಾಥ ಸುಣಗಾರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿದರ್ೇಶಕರಾದ ವೀರಯ್ಯಸ್ವಾಮಿ ಬಿ. ಸರ್ವರನ್ನು ಸ್ವಾಗತಿಸಿದರು. ಬಾಹುಬಲಿ ಪಿ. ಜೈನರ ನಿರೂಪಿಸಿ, ವಂದಿಸಿದರು.