ಕಾಗವಾಡ 07: ಹಳೆ ವಾಹನ ಮಾರಾಟ ಮಾಡುವದಾಗಿ ಹೇಳಿ ಮಹಾರಾಷ್ಟ್ರದ ಕರಾಡ ತಾಲೂಕಿನ ಜನರನ್ನು ಕುಡಚಿ ಮತ್ತು ಉಗಾರದ 3 ಜನ ಆರೋಪಿಗಳು ಅವರ ಬಳಿಯಿರುವ 7.50 ಲಕ್ಷ ರೂ. ಹಣವನ್ನು ಕೋಣೆಯಲ್ಲಿ ಕೂಡು ಹಾಕಿ ಹೊಡೆದು ದರೋಡೆ ಮಾಡಿದ ಘಟಣೆ ಕೇವಲ ಮೂರು ದಿನಗಳಲ್ಲಿ ಕಾಗವಾಡ ಪೊಲೀಸ್ರು ತಪಾಸಣೆ ಮಾಡಿ, ಆರೋಪಿಗಳನ್ನು ಗೋಕಾಕ್ ಜೈಲಿಗೆ ಹಾಕಿದ ಘಟಣೆ ನಡೆದಿದೆ.
ಮಂಗಳವಾರ ದಿ.04ರಂದು ಸಂಜೆ ಕರಾಡದ ಉದಯ ಶಿಂಧೆ ಇವರು ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಿ, ಉಗಾರದಲ್ಲಿ ನನ್ನ ಬಳಿಯಿರುವ ಕಾರು ಮತ್ತು 7.50 ಲಕ್ಷ ರೂ. ಮೂರು ಜನ ಕಸಿದುಕೊಂಡು ಹೊಡೆದು ಫರಾರಿಯಾಗಿದ್ದಾರೆ ಎಂದು ದೂರು ನೀಡಿದರು.
ಈ ಘಟಣೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಪೊಲೀಸ್ ಪ್ರಮುಖರ ಆದೇಶ ಮೇರಿಗೆ ಅಥಣಿ ಡಿವೈಎಸ್ಪಿ ಆರ್.ಬಿ.ಬಸರಗಿ ಇವರ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಅಲಿಸಾಬ, ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ತಂಡ ರಚಿಸಿ ಶೋಧ ಪ್ರಾರಂಭಿಸಿದರು.
ಕಾಗವಾಡ-ಶೇಡಬಾಳ ಮಾರ್ಗದಿಂದ ದರೋಡೆ ಮಾಡಿ ಕಸಿದುಕೊಂಡು ಹೋದ ಫೋಡರ್್ಕಾರ್: ಎಂ.ಎಚ್.50.ಟಿ.7711 ಈ ವಾಹನಗೆ ಬೆನ್ನು ಹತ್ತಿ ತಡೆದಾಗ ಇದರಲ್ಲಿ ಘಟಣೆಯ ಮುಖ್ಯ ಆರೋಪಿ ದಾದಾಪಾಷಾ ಸಿರಾಜುದ್ದೀನ ಫಾಜೀಲ್(ಪಾಷಾ)ಇವನನ್ನು ವಶಕ್ಕೆ ತೆಗೆದುಕೊಂಡರು. ಉಗಾರ ಬಸ್ ನಿಲ್ದಾಣದಲ್ಲಿ ಸುತ್ತಾಡುತ್ತಿರುವ ಮಹೇಂದ್ರ ಉರ್ಫ ಮಾರ್ಶಲ್ ಕುರಾಡೆ, ಯಶ್ವಂತ ಕಾಂಬಳೆ ಈ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ, ಈ ಮೂರು ಜನರಿಂದ 5.50 ಲಕ್ಷ ರೂ.ನಗದು ಮತ್ತು 5 ಲಕ್ಷದ ಕಾರ್ ಹಾಗೂ ಇನೋವಾ ಎಂ.ಎಚ್.14.ಎ.ಎಂ.0530 ಜಪ್ತಿಮಾಡಿ ಆರೋಪಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಈ ಘಟಣೆಯಲ್ಲಿ ಇನ್ನು 4ಜನ ಆರೋಪಿಗಳಿದ್ದು ಇವರನ್ನು ಸೆರೆ ಹಿಡಿಯಲು ಜಾಲ ಬೀಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಈ ಘಟಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಸ್.ಬಿ.ಮುರಗೋಡ, ಎಸ್.ಎಂ.ದೊಡ್ಮನಿ, ಜೆ.ಎಸ್.ಸೋನವಣೆ, ಕೆ.ಬಿ.ಚಂದೂರ, ಎಸ್.ಬಿ.ದೊಡ್ಮನಿ ಇವರು ಸಹಕರಿಸಿದರು.