ಮತದಾನ ಪ್ರತಿಯೊಬ್ಬರಿಗೆ ಸಂವಿಧಾನ ನೀಡಿದ ಹಕ್ಕು

ಕಾಗವಾಡ:  ಮತದಾನ ಪ್ರತಿಯೊಬ್ಬರಿಗೆ ಸಂವಿಧಾನ ನೀಡಿದ ಹಕ್ಕು. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಉತ್ತಮ ವ್ಯಕ್ತಿಗಳ ಆಯ್ಕೆ ಮಾಡಿ ದೇಶಕಟ್ಟುವಲ್ಲಿ ಸಹಕಾರಿ ಯಾಗಬೇಕು. ಡಿ. 05 ರಂದು ನಡೆಯಲಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಪಾಲ್ಗೊಂಡು ಯೋಗ್ಯ ಅಭ್ಯಥರ್ಿಯನ್ನು ಆಯ್ಕೆಗೊಳಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಕಾಗವಾಡ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಈರನಗೌಡ ಏಗನಗೌಡರಜನರಲ್ಲಿ ಮನವಿ ಮಾಡಿದರು.

ಶುಕ್ರವಾರ ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಗವಾಡ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾ ಸ್ವೀಪ ಸಮಿತಿ, ತಾಲೂಕಾ ಪಂಚಾಯತ ಅಥಣಿ, ಗ್ರಾಮ ಪಂಚಾಯತ ಕಾಗವಾಡ ಇವರು ಜಂಟಿಯಾಗಿ ಹಮ್ಮಿಕೊಂಡಿದ್ದ ಮತದಾನ ಚಾಗೃತಿ ಜಾಥಾಗೆ ಚಾಲನೆ ನೀಡಿಅವರು ಮಾತನಾಡುತ್ತಿದ್ದರು.

ಮತದಾನ ಜಾಗೃತಿ ಗೋಸ್ಕರ ಗ್ರಾಮದ ಓಣಿ-ಓಣೀಗಳಲ್ಲಿ ಸೈಕಲ್ಚಾಥಾ ನಡೆಸಿ ಮತದಾನ ಹಕ್ಕು ಚಲಾಯಿಸಲು ಮನವಿ ಮಾಡಲಾಯಿತು.ಗ್ರಾಮದ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾಥರ್ಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರು ಭಾಗವಹಿಸಿದ್ದರು.

ಜಾಥಾದಲ್ಲಿ ಕಾಗವಾಡ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಈರನಗೌಡ ಏಗನಗೌಡರ, ಪಿ.ಡಿ.ಓ. ಶ್ರೀಮತಿ ಶಿಲ್ಪಾ ನಾಯಿಕವಾಡಿ, ಸಿಬ್ಬಂದಿ ಸುಭಾಷ ತುಪಳೆ, ಸಾಹಿಲ ಪಾಟೀಲ, ಬಂಡು ಜುಗಳೆ, ರಮೇಶ ಪಾಟೀಲ, ಪ್ರಕಾಶ ಪಾಟೀಲ, ವಿಜಯ ಚಗಚೆ ಮುಂತಾದವರು ಸೈಕಲ್ಜಾಥಾದಲ್ಲಿ ಪಾಲ್ಗೊಂಡಿದ್ದರು.