ಅಕ್ಲೆಂಡ್, ಜ 23, ನಾಯಕನಾಗಿ ತಂಡವನ್ನು ಮುನ್ನಡೆಸುವುದಷ್ಟೇ ಗುರಿ. ಅದು ಬಿಟ್ಟು ನಾಯಕತ್ವದ ಗುಣಗಳ ಮೇಲೆ ಅವಲಂಬನೆ ಹೊಂದಿಲ್ಲದ ಫಲಿತಾಂಶಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.ಸದ್ಯ ಟೀಮ್ ಇಂಡಿಯಾ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ನಲ್ಲಿದ್ದು, ಐದು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಈಡೆನ್ ಪಾರ್ಕ್ ಅಂಗಳದಲ್ಲಿ ಕಿವೀಸ್ ಎದುರು ಕಾದಾಟ ನಡೆಸಲಿದೆ. "ನಾಯಕನಾಗಿ ಒಂದು ಅಂಶವನ್ನು ಪೂರ್ಣಗೊಳಿಸಿದ್ದು, ತಂಡಕ್ಕೆ ಏನು ಬೇಕು ಎಂಬ ಬಗ್ಗೆ ನನ್ನ ಗಮನ ಕೇಂದ್ರಿಕರಿದುತ್ತೇನೆ. ಈ ದೃಷ್ಠಿಕೋನದಲ್ಲಿ ತಂಡವನ್ನು ಮುನ್ನಡೆಸುತ್ತೇನೆ,'' ಎಂದು ಕೊಹ್ಲಿ ಹೇಳಿದ್ದಾರೆ.ಟೀಮ್ ಇಂಡಿಯಾ ನಾಯಕತ್ವದ ವಹಿಸಿದಾಗನಿಂದಲೂ ಐಸಿಸಿ ಮಹತ್ತರ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿವಿರಾಟ್ ಕೊಹ್ಲಿ ವಿಫಲರಾಗಿರುವ ಬಗ್ಗೆ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಅವರದೇ ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವೈಟ್ ವಾಷ್ ಅನುಭವಿಸಿತ್ತು. ಆದಾಗ್ಯೂ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಕಿಂಗ್ ಕೊಹ್ಲಿ ಗುಣಗಾನ ಮಾಡಿದ್ದಾರೆ." ಪಂದ್ಯಗಳ ಫಲಿತಾಂಶಗಳು ನಾಯಕತ್ವದ ಗುಣಗಳನ್ನು ನಿರ್ಧರಿಸುತ್ತವೆ ಎಂಬುದನ್ನು ನಾನು ಭಾವಿಸುವುದಿಲ್ಲ. ಯಾವ ರೀತಿ ತಂಡ ಆಟಗಾರರು ಒಗ್ಗೂಡಿಸಬಹುದು ಹಾಗೂ ಯಾವ ಹಾದಿಯಲ್ಲಿ ಮುನ್ನಡೆಸಬಹುದು ಎಂಬ ವಿಷಯದ ಮೇಲೆ ನಾಯಕತ್ವದ ಗುಣಗಳು ಅವಲಂಬಿಸಿರುತ್ತದೆ. ಈ ವಿಷಯದಲ್ಲಿ ಕೇನ್ ವಿಲಿಯಮ್ಸನ್ ಅದ್ಭುತವಾಗಿ ನಿರ್ವಹಣೆ ಮಾಡಿದ್ದಾರೆ,'' ಎಂದು ಕಿವೀಸ್ ನಾಯಕನನ್ನು ಗುಣಗಾನ ಮಾಡಿದರು."ಕೇನ್ ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತಾರೆ, ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದನ್ನು ನಾನು ಗಮನಿಸಿದ್ದೇನೆ. ಇದರ ಜತೆ ಅವರೊಬ್ಬ ಅತ್ಯುತ್ತಮ ಕ್ರಿಕೆಟಿಗ ಎಂದು ಹೇಳಲು ಬಯಸುತ್ತೇನೆ,'' ಎಂದರು.