ಲೋಕದರ್ಶನ ವರದಿ
ರಾಯಬಾಗ: ಶರೀರಕ್ಕೆ ಪೋಷಣೆ ನೀಡುವ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ನೀರು, ಗಾಳಿ, ಭೂಮಿಯನ್ನು ಮಲಿನಗೋಳಿಸದೇ ಮುಂದಿನ ಪೀಳಿಗೆಗಾಗಿ ರಕ್ಷಣೆ ಮಾಡಬೇಕಾಗಿದೆ ಎಂದು ದೇವರಹುಬ್ಬಳ್ಳಿ ಹಾಗೂ ಮಂಟೂರ ಸಿದ್ಧಾಶ್ರಮದ ಸಿದ್ಧಶಿವಯೋಗಿ ಶ್ರೀಗಳು ಹೇಳಿದರು.
ಸೋಮವಾರ ತಾಲೂಕಿನ ಮಂಟೂರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಾಯಬಾಗ, ಮಂಟೂರಕೆರೆ ಅಭಿವೃದ್ಧಿ ಸಮಿತಿ ಮತ್ತುಗ್ರಾ.ಪಂ. ಇವರ ಸಹಭಾಗಿತ್ವದಲ್ಲಿ ಪದ್ಮವಿಭೂಷಣ ಡಾ.ವಿರೇಂದ್ರ ಹೆಗ್ಗಡೆ ಮತ್ತು ಮಾತೋಶ್ರಿ ಹೇಮಾವತಿ ಹೆಗ್ಗಡೆಯವರ ಆಥರ್ಿಕ ಸಹಕಾರದೊಂದಿಗೆ "ನಮ್ಮೂರು ನಮ್ಮಕೆರೆ" ಕಾರ್ಯಕ್ರಮದಡಿಯಲ್ಲಿ ಪುನಃಶ್ಚೇತನಗೊಳಿಸಿದ ಮಂಟೂರುಕೆರೆ ಹಸ್ತಾಂತರ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಭಗವಂತ ನೀಡಿದ ಭೂಮಿ, ನೀರು, ಗಾಳಿ, ಪರಿಸರವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು. ಪ್ರಕೃತಿ ಮುನಿಸಿಕೊಂಡರೆ ಏನೆಲ್ಲ ಅನಾಹುತವಾಗುತ್ತವೆ ಎಂದು ಅತಿವೃಷ್ಠಿ ಮತ್ತು ಅನಾವೃಷ್ಠಿ ಎರಡನ್ನುಇತ್ತಿಚಿಗೆ ಕಂಡಿದ್ದೇವೆ ಎಂದು ತಿಳಿ ಹೇಳಿದರು.
ಶ್ರೀ.ಕ್ಷೇ.ಧ.ಗ್ರಾ.ಯೋ.ತಾಲೂಕು ಯೋಜನಾಧಿಕಾರಿ ಪುರಂದರ ಪೂಜಾರಿ ಮಾತನಾಡಿ, ಧರ್ಮಸ್ಥಳದ ಧಮರ್ಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಂಟೂರು ಗ್ರಾಮಕ್ಕೆ 10 ಲಕ್ಷರೂ. ವೆಚ್ಚದಲ್ಲಿಕೆರೆ ಪುನಃಶ್ಚೇತನಗೊಳಿಸಿ, ಗ್ರಾ.ಪಂ.ಯವರಿಗೆ ಹಸ್ತಾಂತರಿಸಲಾಗುತ್ತಿದೆ. ಇನ್ನು ಮುಂದೆಕೆರೆ ಅಭಿವೃದ್ಧಿ ಸಮಿತಿ, ಗ್ರಾ.ಪಂ. ಹಾಗೂ ಗ್ರಾಮಸ್ಥರುಕೆರೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಂಡು, ಸ್ವಚ್ಚತೆ ಕಾಪಾಡಿಕೊಂಡು, ಸುತ್ತಮುತ್ತ ಗಿಡಗಳನ್ನು ನೆಟ್ಟುಕೆರೆ ಪರಿಸರವನ್ನು ಸುಂದರವಾಗಿಟ್ಟುಕೊಳ್ಳ ಬೇಕೆಂದರು.
ಮಹಾಲಿಂಗಪೂರ ಸಿದ್ಧಾರೂಢ ಆಶ್ರಮದ ಸಹಜಾನಂದ ಸ್ವಾಮೀಜಿ ಹಾಗೂ ನಿವೃತ್ತ ಶಿಕ್ಷಕ ಬಿ.ಕೆ.ಮುಗಳಿ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಹಮ್ಮಿಕೊಂಡ ಕಾರ್ಯಗಳ ಕುರಿತು ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷಯಲಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಅಪ್ಪಾಸಾಹೇಬ ದೇಸಾಯಿ, ಸುಣಧೋಳದ ಮುಕ್ತಾನಂದ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು, ನಾಗೇಶ ಹಿರೇಮಠ ಹಾಗೂ ಸ್ವಸಹಾಯ ಸಂಘದ ಸದಸ್ಯರು ಮತ್ತುಗ್ರಾಮಸ್ಥರು ಉಪಸ್ಥಿತರಿದ್ದರು.
ಮೇಲ್ವಿಚಾರಕಗೋವಿಂದ ಸ್ವಾಗತಿಸಿದರು, ಬಾಹುಬಲಿ ಮಗದುಮ್ಮ ನಿರೂಪಿಸಿದರು, ರಮೇಶ ಚೌಗಲಾ ವಂದಿಸಿದರು.
ಬೆಳಿಗ್ಗೆ ಸುಮಂಗಲೆಯರು ಕುಂಭಮೇಳದೊಂದಿಗೆ ಕೆರೆಗೆ ಬಾಗಿನ ಅಪರ್ಿಸಲಾಯಿತು.ನಂತರ ಶ್ರೀಗಳು ಕೆರೆ ಪುನಃಶ್ಚೇತನಗೊಳಿಸಿದ ಕೆರೆ ಹಸ್ತಾಂತರ ನಾಮಫಲಕ ಉದ್ಘಾಟಿಸಿದರು.