ಲೋಕದರ್ಶನ ವರದಿ
ಯಲ್ಲಾಪುರ 11: ಮನೆ ರಸ್ತೆ ನಿಮರ್ಾಣ, ಅಭಿವೃದ್ದಿ ಕೆಲಸಗಳಿಗೆ ಅರಣ್ಯ ನಾಶವಾಗುತ್ತಿದ್ದು, ಗಿಡ ಮರಗಳನ್ನು ಬೆಳೆಸಿ ಅರಣ್ಯದ ಮೇಲಿನ ಒತ್ತಡ ಕಡಿಮೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಾ.ಕ.ರ.ಸಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶುಕ್ರವಾರ ತಾಲೂಕಿನ ತಾಟವಾಳದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಇಲಾಖೆಯ ಕ್ಯಾಲೆಂಡರ್ ಹಾಗೂ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಇಲಾಖೆಯ ಜೊತೆಗೆ ಸಾರ್ವಜನಿಕರೂ ಕೈಜೋಡಿಸುವ ಮೂಲಕ ಅರಣ್ಯ ರಕ್ಷಣೆಯ ಜವಾಬ್ದಾರಿ ನಿರ್ವಹಿಸಬೇಕೆಂದು ಅವರು ಹೇಳಿದರು. ತಾಟವಾಳಕ್ಕೆ ಕುಡಿಯುವ ನೀರಿನ ಸಲುವಾಗಿ 4 ಲಕ್ಷ ರೂ ಹಾಗೂ ರವಳನಾಥ ದೇವಸ್ಥಾನ ಮತ್ತು ಮುಸ್ಲಿಂ ದಗರ್ಾಕ್ಕೆ ಸಭಾಭವನ ನಿಮರ್ಿಸಲು ತಲಾ 3 ಲಕ್ಷ ರೂ ಮಂಜೂರಿ ಮಾಡಲಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಜಿ. ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಕಿಯಿಂದ ಅರಣ್ಯ ಸಂರಕ್ಷಣೆ ಮಾಡುವುದು ಪ್ರಥಮ ಆದ್ಯತೆಯಾಗಬೇಕು.
ಬೆಂಕಿ ಬಿದ್ದ ಮೇಲೆ ಕಂಗಾಲಾಗುವ ಬದಲು ಬೀಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕಡಿಮೆ ಬೆಂಕಿ ತಗುಲುವ ಅರಣ್ಯ ಪ್ರದೇಶ ಗುರುತಿಸಿ ಆ ಭಾಗದ ಅರಣ್ಯ ಸಮಿತಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದರು.
ಗ್ರಾ.ಪಂ ಸದಸ್ಯ ವಾಸುದೇವ ಮಾಪ್ಸೆಕರ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಜ್ಜು ಪಿಂಗಳೆ, ಪತ್ರಕರ್ತ ಅಚ್ಯುತಕುಮಾರ, ಪ್ರಮುಖರಾದ ಎನ್. ಕೆ. ಭಟ್ಟ ಮೆಣಸುಪಾಲ, ವಿಜಯ ಮಿರಾಶಿ, ಎಸಿಎಫ್ಗಳಾದ ಪ್ರಶಾಂತ.ಪಿ.ಕೆ.ಎಂ., ಅಶೋಕ ಭಟ್ಟ, ಆರ್ಎಫ್ಒ ಬಾಲಸುಬ್ರಹ್ಮಣ್ಯ.ಎಂ ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿ ಜಿ.ಡಿ.ನಾಯ್ಕ ನಿರ್ವಹಿಸಿದರು.